/newsfirstlive-kannada/media/media_files/2025/10/09/bigg-boss-12-2025-10-09-09-09-55.jpg)
ಬೆಂಗಳೂರು: ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ಗೆ (Bigg Boss) ವೀಕ್ಷಕರಿಗೆ ರಾತ್ರೋ ರಾತ್ರಿ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಎರಡು ದಿನಗಳಿಂದ ನಡೀಯುತ್ತಿದ್ದ ಡ್ರಾಮಾಕ್ಕೆ ಬ್ರೇಕ್​ ಬಿದ್ದಿದೆ. ಜಾಲಿವುಡ್​​​ ಸ್ಟುಡಿಯೋ (Jollywood studio) ಬೀಗ ತೆರೆಯಲು ಸೂಚಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.
ಬೆನ್ನಲ್ಲೇ ಸ್ಪರ್ಧಿಗಳು ಬಿಗ್​ಬಾಸ್​ ಮನೆಗೆ ಎಂಟ್ರಿ ನೀಡಿದ್ದಾರೆ. ಮಧ್ಯರಾತ್ರಿಯೇ ಎಲ್ಲಾ ಸ್ಪರ್ಧಿಗಳನ್ನು ಬಿಗ್​ಬಾಸ್​ ಮನೆಗೆ ತಂದು ಬಿಡಲಾಗಿದೆ. ಬಳಿಕ ಸ್ಪರ್ಧಿಗಳಿಗೆ ಮಾನಸಿಕವಾಗಿ ಕುಗ್ಗದಂತೆ ಧೈರ್ಯ ತುಂಬಲಾಗಿದೆ. ಇಂದು ಮತ್ತೊಂದು ಸುತ್ತು ಸ್ಪರ್ಧಿಗಳ ಜೊತೆ ಮಾತುಕತೆ ನಡೆಯಲಿದೆ. ಯಾವುದೇ ಕಾರಣಕ್ಕೂ ಗೊಂದಲಕ್ಕೀಡಾಗದಂತೆ ಮಾನಸಿಕ ಧೈರ್ಯ ನೀಡಲಾಗುತ್ತದೆ.
ನೋ ಎಲಿಮಿನೇಷನ್..?
ಈಗಾಗಲೇ ಬಿಗ್​ಬಾಸ್​ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಮಾಹಿತಿಗಳ ಪ್ರಕಾರ, ಕೆಲವು ಅಹಿತಕರ ಬೆಳವಣಿಗೆಯಿಂದಾಗಿ ಈ ವಾರ ಎಲಿಮಿನೇಷನ್ ಪ್ರಕ್ರಿಯೆ ಇರೋದಿಲ್ಲ ಎನ್ನಲಾಗುತ್ತಿದೆ. ಇದನ್ನು ಕಿಚ್ಚ ಸುದೀಪ್ ವೀಕೆಂಡ್​ನಲ್ಲಿ ತಿಳಿಸಲಿದ್ದಾರೆ. ಎಲಿಮಿನೇಷನ್ ಇರುತ್ತಾ? ಇರಲ್ವಾ ಅನ್ನೋದು ವೀಕೆಂಡ್​ನಲ್ಲಿ ತಿಳಿಯಲಿದೆ.
ಅಸಲಿ ಆಟ ಶುರುವಿಲ್ಲ..!
ಸ್ಪರ್ಧಿಗಳು ಬಿಗ್​ಬಾಸ್ ಮನೆಗೆ ಬಂದರೂ ಅಸಲಿ ಆಟ ಇನ್ನೂ ಶುರುವಾಗಿಲ್ಲ. ಇಂದು ಬೆಳಗ್ಗೆ 11 ಗಂಟೆಯ ತನಕ ಯಾವುದೇ ಚಟುವಟಿಕೆಗಳು ನಡೆಯಲ್ಲ. 11 ಗಂಟೆಯ ನಂತರ ಬಿಗ್​ಬಾಸ್ ಅಸಲಿ ಆಟ ಶುರುವಾಗಲಿದೆ.
ಬದಲಾಗುತ್ತಾ ಆಟದ ಶೈಲಿ..?
ಬಿಗ್ ಮನೆಯಲ್ಲಿ ಸ್ಪರ್ಧಿಗಳ ಆಟದ ಶೈಲಿ ಬದಲಾಗುವ ನಿರೀಕ್ಷೆಗಳಿವೆ. ಇಷ್ಟು ದಿನ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಓಪನ್ ಆಗಿ ಮಾತನಾಡಲು ಅವಕಾಶ ಇರಲಿಲ್ಲ. ಎಲ್ಲೆಡೆ ಕ್ಯಾಮೆರಾ, ಮೈಕ್ ಇರೋದ್ರಿಂದ ಸೇಫ್ ಝೋನ್​ನಲ್ಲಿ ಇರುತ್ತಿದ್ದರು. ಜಾಲಿವುಡ್​ಗೆ ಬೀಗ ಹಾಕಿದ ಹಿನ್ನೆಲೆಯಲ್ಲಿ ಸ್ಪರ್ಧಿಗಳು ಯಾವುದೇ ಮೈಕ್, ಕ್ಯಾಮೆರಾ ಇಲ್ಲದೆ ರೆಸಾರ್ಟ್​ನಲ್ಲಿ ತಂಗಿದ್ದರು. ಬಿಂದಾಸ್ ಆಗಿ ಮಾತಾಡಿಕೊಂಡು ಸ್ಪರ್ಧಿಗಳಿದ್ದರು. ಸ್ಪರ್ಧಿಗಳಿಗೆ ಆಟದ ಬಗ್ಗೆ ಸಣ್ಣ ಹಿಂಟ್ ಸಿಕ್ಕಿದ್ರೂ ಆಟದ ಶೈಲಿ ಬದಲಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಬಿಗ್ ಬಾಸ್​ಗೆ ಬೀಗ ಬೀಳಲು ಕಾರಣವೇನು.. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಏನ್ ಹೇಳಿದ್ದಾರೆ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ