/newsfirstlive-kannada/media/media_files/2025/10/08/dk-shivakumar-kiccha-sudeep-2025-10-08-11-38-58.jpg)
ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ವೀಕ್ಷಕರಿಗೆ ರಾತ್ರೋ ರಾತ್ರಿ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ಎರಡು ದಿನಗಳಿಂದ ನಡೀಯುತ್ತಿದ್ದ ಬಿಗ್​ ಡ್ರಾಮಾಕ್ಕೆ ಬ್ರೇಕ್​ ಬಿದ್ದಿದೆ. ಜಾಲಿವುಡ್​​​ ಸ್ಟುಡಿಯೋ ಬೀಗ ತೆರೆಯಲು ಸೂಚಿಸಿದ ಡಿಸಿಎಂ ಡಿಕೆಶಿ ಸೂಚಿಸಿದ್ದಾರೆ.
ಒಂದೇ ಒಂದು ನೋಟಿಸ್.. ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಸದ್ಯ ಬಂದ್ ಆಗಿತ್ತು. ಕೇವಲ ಒಂದು ವಾರವಷ್ಟೇ ಪೂರೈಸಿದ್ದ ಬಿಗ್ ಬಾಸ್ ಕನ್ನಡ ಸೀಸನ್ 12ರ ಅರಮನೆಗೆ ದಿಢೀರ್ ಬೀಗ ಬಿದ್ದಿತ್ತು. ಜಾಲಿವುಡ್ ಸ್ಟುಡಿಯೋಸ್​ ಮಾಡಿದ ಎಡವಟ್ಟಿನಿಂದ 17 ಸ್ಪರ್ಧಿಗಳು ಹೊರಬಂದಿದ್ದರು. ಇನ್ಮುಂದೆ ಬಿಗ್​ಬಾಸ್​​ ಬರಲ್ವೇನೋ ಅಂತಾ ವೀಕ್ಷಕರು ಕೂಡ ಶಾಕ್​ ಆಗಿದ್ದರು. ಸದ್ಯ ಇದಕ್ಕೆಲ್ಲಾ ಬ್ರೇಕ್​ ಬಿದ್ದಿದೆ.. ರಾತ್ರೋರಾತ್ರಿ ಬಿಗ್​ಬಾಸ್​ ಫ್ಯಾನ್ಸ್​​ಗೆ ಸಿಹಿ ಸುದ್ದಿ ಸಿಕ್ಕಿದೆ..
2 ದಿನಗಳ ‘ಬಿಗ್​’ ಡ್ರಾಮಾಕ್ಕೆ ಕೊನೆಗೂ ಬಿತ್ತು ಬ್ರೇಕ್
ಬಿಗ್​ ಬಾಸ್ ಕನ್ನಡ ವೀಕ್ಷಕರಿಗೆ ಗುಡ್​ ನ್ಯೂಸ್​​ ಸಿಕ್ಕಿದೆ. ಕಳೆದ ಎರಡು ದಿನಗಳ ಕಾಲ ನಡೆದ ಬಿಗ್​ಬಾಸ್​​ ಮನೆಯ ಡ್ರಾಮಾಕ್ಕೆ ಬ್ರೇಕ್​ ಬಿದ್ದಿದೆ.. ಜಾಲಿವುಡ್​​ ಸ್ಟುಡಿಯೋಸ್​​ಗೆ ಹಾಕಲಾಗಿದ್ದ ಬೀಗವನ್ನ ತೆಗೆಯಲು ಡಿಸಿಎಂ ಡಿಕೆಶಿ ಸೂಚನೆ ನೀಡಿದ್ದಾರೆ..
‘ಸಮಯ ನೀಡಲಾಗುವುದು’
ಬಿಡದಿಯಲ್ಲಿರುವ ಜಾಲಿವುಡ್ ಆವರಣದ ಮೇಲಿನ ಸೀಲ್ ಅನ್ನು ತೆಗೆದುಹಾಕಲು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ. ಉಲ್ಲಂಘನೆಗಳನ್ನು ಪರಿಹರಿಸಿಕೊಳ್ಳಲು ಸ್ಟುಡಿಯೋಗೆ ಸಮಯ ನೀಡಲಾಗುವುದು. ಪರಿಸರ ಸಂರಕ್ಷಣೆಯ ಜೊತೆಗೆ ಕನ್ನಡ ಮನರಂಜನಾ ಉದ್ಯಮವನ್ನು ಬೆಂಬಲಿಸಲು ನಾನು ಬದ್ಧನಾಗಿರುತ್ತೇನೆ.
ಡಿ.ಕೆ ಶಿವಕುಮಾರ್, ಡಿಸಿಎಂ
ಜಾಲಿವುಡ್​​ ಸ್ಟುಡಿಯೋ ಬೀಗ ತೆಗೆಯುವಂತೆ ಡಿಸಿಎಂ ಡಿಕೆಶಿ ಸೂಚನೆ ನೀಡ್ತಿದ್ದಂತೆ, ನಟ ಕಿಚ್ಚ ಸುದೀಪ್​​ ಟ್ವೀಟ್​ ಮಾಡಿ ಡಿಸಿಎಂ ಡಿಕೆಶಿಗೆ ಧನ್ಯವಾದ ತಿಳಿಸಿದ್ರು..
‘ಹೃತ್ಪೂರ್ವಕ ಧನ್ಯವಾದ’
ನಮ್ಮ ಬೆಂಬಲಕ್ಕೆ ನಿಂತಿದ್ದಕ್ಕೆ ಡಿ.ಕೆ ಶಿವಕುಮಾರ್ ಅವರಿಗೆ ಧನ್ಯವಾದ ಹೇಳುತ್ತೇನೆ, ಬಿಗ್ಬಾಸ್ ಕನ್ನಡ ಈ ಗೊಂದಲದ ಭಾಗವಾಗಿರಲಿಲ್ಲ, ನನ್ನ ಕರೆಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ ಡಿಸಿಎಂ ಅವರನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ, ಜೊತೆಗೆ ನಲ್ಪಾಡ್ ಅವರ ಪ್ರಯತ್ನಗಳಿಗೆ ಧನ್ಯವಾದಗಳು.
ಕಿಚ್ಚ ಸುದೀಪ್, ನಟ
ಬಿಗ್​ಬಾಸ್​​ ಮನೆ ನಿನ್ನೆ ರಾತ್ರಿಯೇ ಓಪನ್​ ಆಗಿದ್ದು, 17 ಸ್ಪರ್ಧಿಗಳು ಬಿಗ್​ ಬಾಸ್​​ ಮನೆಗೆ ಪ್ರವೇಶಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಒಟ್ಟಾರೆ, ಬಿಗ್​ಬಾಸ್​ ಮನೆಯ ಬಿಗ್​ ಡ್ರಾಮಾಕ್ಕೆ ಕೊನೆಗೂ ಬ್ರೇಕ್​ ಬಿದಿದ್ದ, ವೀಕ್ಷಕರಂತು ಫುಲ್​ ಖುಷ್​ ಆಗಿದ್ದಾರೆ.
ಇದನ್ನೂ ಓದಿ: SRH ಕ್ಯಾಪ್ಟನ್​, ಸ್ಫೋಟಕ ಬ್ಯಾಟರ್​ಗೆ ಬಿಗ್ ಆಫರ್.. ವರ್ಷಕ್ಕೆ 58 ಕೋಟಿ ರೂಪಾಯಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ