/newsfirstlive-kannada/media/media_files/2025/10/08/head_abhishek-2025-10-08-20-02-54.jpg)
ಆಸ್ಟ್ರೇಲಿಯಾದ ಟೆಸ್ಟ್​ ಹಾಗೂ ಒಡಿಐ ತಂಡದ ನಾಯಕ ಪ್ಯಾಟ್ ಕಮಿನ್ಸ್​ ಹಾಗೂ ವಿಸ್ಫೋಟಕ ಬ್ಯಾಟರ್​ ಟ್ರಾವೀಸ್ ಹೆಡ್ ಅವರು ಐಪಿಎಲ್​ ಫ್ರಾಂಚೈಸಿಯ ಬಿಗ್ ಆಫರ್​ ನಿರಾಕರಣೆ ಮಾಡಿದ್ದಾರೆ ಎನ್ನಲಾಗಿದೆ. 10 ಅಲ್ಲ, 20 ಅಲ್ಲ ಬರೋಬ್ಬರಿ 58 ಕೋಟಿ ರೂಪಾಯಿಗಳ ಬಂಪರ್ ಆಫರ್​ ನಮಗೆ ಬೇಡವೇ ಬೇಡ ಎಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ಯಾಟ್ ಕಮಿನ್ಸ್​ ಹಾಗೂ ಟ್ರಾವೀಸ್ ಹೆಡ್ ಅವರು ಆಸ್ಟ್ರೇಲಿಯಾ ತಂಡವನ್ನು ಸಂಪೂರ್ಣವಾಗಿ ತೊರೆದು ವಿಶ್ವದ್ಯಾಂತ ನಡೆಯುವ ಟಿ20 ಲೀಗ್​ಗಳನ್ನು ಫ್ರಾಂಚೈಸಿ ಪರವಾಗಿ ಪೂರ್ಣ ಸಮಯ ಆಡಬೇಕು. ಇದಕ್ಕಾಗಿ ವರ್ಷಕ್ಕೆ 58 ಕೋಟಿ ರೂಪಾಯಿಗಳನ್ನು ಇಬ್ಬರಿಗೂ ನೀಡಲಾಗುತ್ತದೆ ಎಂದು ಐಪಿಎಲ್​ನ ಫ್ರಾಂಚೈಸಿಯೊಂದು ಆಫರ್ ಮಾಡಿತ್ತು ಎನ್ನಲಾಗಿದೆ.
ಆದರೆ ಈ ಆಫರ್ ಅನ್ನು ಪ್ಯಾಟ್ ಕಮಿನ್ಸ್​ ಹಾಗೂ ಟ್ರಾವೀಸ್ ಹೆಡ್ ಅವರು ನಯವಾಗಿ ತಿರಸ್ಕರಿಸಿದ್ದಾರೆ. ನಾವು ಏನಿದ್ದರು ಆಸ್ಟ್ರೇಲಿಯಾ ತಂಡದ ಪರವಾಗಿ ಹಾಗೂ ಇಂಡಿಯನ್​ ಪ್ರೀಮಿಯರ್​ ಲೀಗ್ (ಐಪಿಎಲ್​)ನಲ್ಲಿ ಮಾತ್ರ ಆಡುತ್ತೇವೆ. ಇದು ಬಿಟ್ಟು ಬೇರೆ ಯಾವುದೇ ಲೀಗ್​ಗಳನ್ನು ಆಡಲು ಬಯಸುವುದಿಲ್ಲ ಎಂದು ಪ್ಯಾಟ್ ಕಮಿನ್ಸ್​, ಟ್ರಾವೀಸ್ ಹೆಡ್ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ವಿನೂ ಮಂಕಡ್ ಟ್ರೋಫಿ; ಲೆಜೆಂಡರಿ ರಾಹುಲ್ ದ್ರಾವಿಡ್​ ಮಗನಿಗೆ ಮಹತ್ವದ ಸ್ಥಾನ
ಸದ್ಯ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದ್ರಾಬಾದ್​ ತಂಡದಲ್ಲಿರುವ ಪ್ಯಾಟ್ ಕಮಿನ್ಸ್, ಹೆಡ್​ 18, 14 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ. ಇದು ಅಲ್ಲದೇ ತಮ್ಮ ವಾರ್ಷಿಕ ಒಪ್ಪಂದಗಳಿಂದ 8.74 ಕೋಟಿ ರೂಪಾಯಿಗಳನ್ನು ಆಸ್ಟ್ರೇಲಿಯಾ ಕ್ರಿಕೆಟ್​ನಿಂದ ಸಂಪಾದನೆ ಮಾಡುತ್ತಾರೆ. ಕಮಿನ್ಸ್​ ಅವರು ಆಸಿಸ್​ ತಂಡದ ನಾಯಕತ್ವ ವಹಿಸುವುದರಿಂದ ಅಂತಾರಾಷ್ಟ್ರೀಯ ಪಂದ್ಯಗಳಿಂದ ವರ್ಷಕ್ಕೆ 17.48 ಕೋಟಿ ರೂಪಾಯಿ ಜೇಬಿಗಿಳಿಸುತ್ತಾರೆ ಎನ್ನಲಾಗಿದೆ.
ಪ್ರತಿಷ್ಠಿತ ಕ್ರಿಕೆಟ್​ ಟೂರ್ನಿ ಆಗಿರುವ ಬಿಗ್​ ಬ್ಯಾಷ್​ ಲೀಗ್​ (ಬಿಬಿಎಲ್​) ಅನ್ನು ಖಾಸಗೀಕರಣ ಮಾಡಬೇಕು ಎಂದು ಇತ್ತೀಚೆಗೆ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್​ಗೆ ಸಂಬಂಧಿಸಿದ ಅಧಿಕಾರಿಗಳು ಭಾಗವಹಿಸಿ ಮಾತನಾಡುವಾಗ ಪ್ಯಾಟ್ ಕಮಿನ್ಸ್​, ಟ್ರಾವಿಸ್​ ಹೆಡ್​ ಅವರಿಗೆ ನೀಡಿದ್ದ ಆಫರ್​ ಬಗ್ಗೆ ಮಾತನಾಡಿರುವುದು ಬಹಿರಂಗಗೊಂಡಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ