/newsfirstlive-kannada/media/media_files/2025/10/08/rahul_dravid_son-2025-10-08-19-14-49.jpg)
ಬೆಂಗಳೂರು: ವಿನೂ ಮಂಕಡ್ ಟ್ರೋಫಿಗಾಗಿ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಮಾಜಿ ಹೆಡ್​ ಕೋಚ್ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್‌ರನ್ನು ಕರ್ನಾಟಕ ಅಂಡರ್-19 ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ.
ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ, ಮಾಜಿ ಹೆಡ್​ ಕೋಚ್​​ ರಾಹುಲ್​ ದ್ರಾವಿಡ್ ಅವರ​ ಪುತ್ರ ಅನ್ವಯ್​​​​ಗೆ ನಾಯಕನ ಪಟ್ಟ ಕಟ್ಟಲಾಗಿದೆ. ಪ್ರತಿಷ್ಟಿತ ಅಂಡರ್​- 19 ಒನ್​ ಡೇ ಟೂರ್ನಮೆಂಟ್​ ವಿನೂ ಮಂಕಡ್​ ಟ್ರೋಫಿಯಲ್ಲಿ ಅನಯ್​ ದ್ರಾವಿಡ್​ ಕರ್ನಾಟಕ ತಂಡವನ್ನ ಮುನ್ನಡೆಸಲಿದ್ದಾರೆ. ಜೂನಿಯರ್​ ಲೆವೆಲ್​ ಕ್ರಿಕೆಟ್​ನಲ್ಲಿ ದ್ರಾವಿಡ್​ ಪುತ್ರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಯಾಪ್ಟನ್ಸಿ ನೀಡಲಾಗಿದೆ.
ಅಂಡರ್​- 16 ವಿಜಯ್​​ ಮರ್ಚಂಟ್​ ಟ್ರೋಫಿಯಲ್ಲಿ ಕರ್ನಾಟಕ ಪರ ಟಾಪ್​ ಸ್ಕೋರ್​ ಆಗಿದ್ದ ಅನ್ವಯ್​ ದ್ರಾವಿಡ್​​ 91.80ರ ಸರಾಸರಿಯಲ್ಲಿ 459 ರನ್​ ಬಾರಿಸಿದ್ದರು. ಕ್ಲಬ್​ ಕ್ರಿಕೆಟ್​ನಲ್ಲೂ ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡಿದ ಹಿನ್ನೆಲೆಯಲ್ಲಿ ನಾಯಕತ್ವದ ಸ್ಥಾನ ಒಲಿದಿದೆ. ಅಕ್ಟೋಬರ್ 9ರಿಂದ ವಿನೂ ಮಂಕಡ್ ಟ್ರೋಫಿ ಟೂರ್ನಿಯು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆಯಲಿದೆ.
ಕರುಣ್ ನಾಯರ್ ಅವರು ಎರಡು ವರ್ಷಗಳ ವಿರಾಮದ ನಂತರ ತವರು ತಂಡ ಕರ್ನಾಟಕಕ್ಕೆ ವಾಪಸಾಗಿದ್ದಾರೆ. ಸೌರಾಷ್ಟ್ರದ ವಿರುದ್ಧ ರಾಜ್‌ಕೋಟ್‌ನಲ್ಲಿ ಅಕ್ಟೋಬರ್​ 15 ರಿಂದ ಆರಂಭವಾಗಲಿರುವ ರಣಜಿ ಟ್ರೋಫಿಯ ಆರಂಭಿಕ ಪಂದ್ಯದಲ್ಲಿ ಕರುಣ್​ ನಾಯರ್ ಸ್ಥಾನ ಪಡೆದಿದ್ದಾರೆ. ಟೀಮ್ ಇಂಡಿಯಾದಲ್ಲಿ ಮತ್ತೆ ಸ್ಥಾನ ಪಡೆಯಲು ಇದು ಒಳ್ಳೆಯ ಚಾನ್ಸ್ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ