/newsfirstlive-kannada/media/media_files/2025/08/12/rohit_kohli_wc-2025-08-12-11-18-22.jpg)
ರೋಹಿತ್, ಕೊಹ್ಲಿಯ ಏಕದಿನ ವಿಶ್ವಕಪ್​ ಹಾದಿ ದುಸ್ತರವಾಗಿದೆ. ಈ ದಿಗ್ಗಜರ ಕನಸು ನನಸಾಗಿಸಿಕೊಳ್ಳಬೇಕಾದ್ರೆ, ಬಿಸಿಸಿಐ ಕಂಡೀಷನ್ಸ್​ ಫಾಲೋ ಮಾಡಬೇಕು. ಇಲ್ಲ ಕರಿಯರ್ ಖತಂ ಆಗೋದು ಫಿಕ್ಸ್.. ಹೀಗಾಗಿ ಕನಸು ಈಡೇರಿಸಿಕೊಳ್ಳಲು ವಿಜಯ್ ಹಜಾರೆ ಆಡಲು ಮುಂದಾಗಲೇ ಬೇಕಿದೆ.
ರೋಹಿತ್.. ವಿರಾಟ್​, ವಿಶ್ವ ಕ್ರಿಕೆಟ್ ಲೋಕದ ಮೋಸ್ಟ್​ ಟ್ರೆಂಡಿಂಗ್ ಆ್ಯಂಡ್ ಹಾಟ್ ಟಾಪಿಕ್. ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ ಭವಿಷ್ಯದ್ದೇ ಪ್ರಶ್ನೆ. ಈಗಾಗಲೇ ಟಿ20, ಟೆಸ್ಟ್​ನಿಂದ ದೂರ ಉಳಿದಿರುವ ಇವರು, ಸದ್ಯಕ್ಕಂತು ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿದ್ದಾರೆ. ಇದರಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಆದ್ರೆ, ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗ್ತಿರುವ ಈ ಜೋಡೆತ್ತುಗಳು, 2027ರ ಏಕದಿನ ವಿಶ್ವಕಪ್ ಆಡ್ತಾರಾ..? ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಯೇ ಕೊನೆಯಾಗುತ್ತಾ ಅನ್ನೋದೆ ಚಿಂತೆ ಮಾತ್ರ ಕಾಡ್ತಾನೇ ಇದೆ. ಆದ್ರೆ, ಡೋಟ್​ವರಿ ಫ್ಯಾನ್ಸ್​ಗೆ ಗುಡ್​ನ್ಯೂಸ್ ಇದೆ. ಆದ್ರೆ, ಅದು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯ ನಿರ್ಧಾರ ಮೇಲೆಯೇ ನಿಂತಿದೆ.
ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿಗೆ ಬಿಸಿಸಿಐ ಲೈಫ್​ಲೈನ್..!
ಟೆಸ್ಟ್, ಟಿ20ಯಿಂದ ದೂರವಾಗಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, 2027ರ ಏಕದಿನ ವಿಶ್ವಕಪ್ ಆಡ್ತಾರಾ..? ಇಲ್ವಾ ಅನುಮಾನ ಇದ್ದೇ ಇದೆ. ಸದ್ಯ ವಿಶ್ವ ಕ್ರಿಕೆಟ್ ಲೋಕದ ವಿದ್ಯಾಮಾನಗಳನ್ನ ನೋಡಿದ್ರೆ, 2027ರ ತನಕ ತಂಡದಲ್ಲಿರುವುದೇ ಅನುಮಾನ. ಅಷ್ಟೇ ಅಲ್ಲ, ಭವಿಷ್ಯದತ್ತ ಗಮನ ಹರಿಸಿರುವ ಬಿಸಿಸಿಐ, ಆಸ್ಟ್ರೇಲಿಯಾ ಸರಣಿ ನಂತರ ಇಬ್ಬರಿಗೂ ಸೈಡ್​ಲೈನ್ ಮಾಡಿದರು ಅಚ್ಚರಿ ಇಲ್ಲ ಎಂಬ ಮಾತುಗಳು ಹರಿದಾಡ್ತಿವೆ. ಆದ್ರೆ, ಭವಿಷ್ಯದ ತಂಡ ಕಟ್ಟಲು ಮುಂದಾಗಿರುವ ಬಿಸಿಸಿಐ, ರೋಹಿತ್ ಶರ್ಮಾ & ವಿರಾಟ್​ ಕೊಹ್ಲಿಗೆ ಒಂದು ಲೈಫ್​ ಲೈನ್ ಸಹ ನೀಡಿದೆ. ಅದೇ ಡೊಮೆಸ್ಟಿಕ್ ಕ್ರಿಕೆಟ್..
ನಾವು ಒಂದೆರೆಡು ವರ್ಷಗಳ ಹಿಂದೆಯೇ ಸ್ಪಷ್ಟ ಸಂದೇಶ ನೀಡಿದ್ದೇವೆ. ಆಟಗಾರರ ಯಾವಾಗ ಲಭ್ಯ ಇರುತ್ತಾರೋ, ಆಗ ಡೊಮೆಸ್ಟಿಕ್ ಕ್ರಿಕೆಟ್ ಆಡಲು ಸೂಚಿಸಿದ್ದೇವೆ. ಆಟಗಾರರ ಚುರುಕಿನಿಂದ ಇರಲು, ಡೊಮೆಸ್ಟಿಕ್ ಕ್ರಿಕೆಟ್ ಆಡುವುದು ಮಾರ್ಗವಾಗಿದೆ. ನೀವು ಆಡುತ್ತಿರುವ ಅಂತರಾಷ್ಟ್ರೀಯ ಕ್ರಿಕೆಟ್​ ಪಂದ್ಯಗಳೇ, ನೀವು ಡೊಮೆಸ್ಟಿಕ್ ಕ್ರಿಕೆಟ್ ಆಡಲು ಸಾಧ್ಯವೇ ಅನ್ನೋದು ನಿರ್ಧರಿಸುತ್ತದೆ. ಆದ್ರೆ, ಆಟಗಾರರು ವಿಶ್ರಾಂತಿಯಲ್ಲಿದ್ದಾಗ ಅವರು ಡೊಮೆಸ್ಟಿಕ್ ಕ್ರಿಕೆಟ್ ಆಡಬೇಕಿದೆ.
ಅಜಿತ್ ಅಗರ್ಕರ್, ಚೀಫ್ ಸೆಲೆಕ್ಟರ್
ರೋಹಿತ್, ವಿರಾಟ್​ 2027ರ ಏಕದಿನ ವಿಶ್ವಕಪ್​​ ಕನಸಿನಲ್ಲಿದ್ದಾರೆ ನಿಜ. ಆದ್ರೆ, ಈ ಆಸೆ ನೆರವೇರಬೇಕಾದ್ರೆ, ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ ಡೊಮೆಸ್ಟಿಕ್ ಕ್ರಿಕೆಟ್​ ಆಡಬೇಕು. ಇಲ್ಲ 2027ರ ಏಕದಿನ ವಿಶ್ವಕಪ್​ಗೂ ಮುನ್ನವೇ ರೋಹಿತ್, ಕೊಹ್ಲಿ ಏಕದಿನ ಕರಿಯರ್​ ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ.
ಆಸಿಸ್, ಆಫ್ರಿಕಾ ಸರಣಿ ಬಳಿಕ ವಿಜಯ್ ಹಜಾರೆ ಅಗ್ನಿಪರೀಕ್ಷೆ
ಆಸ್ಟ್ರೇಲಿಯಾ ಪ್ರವಾಸಕ್ಕೆ ಹಾಜರಿರಲಿರುವ ರೋಹಿತ್, ವಿರಾಟ್, ನಂತರ ನವೆಂಬರ್​ 30ರಿಂದ ತವರಿನಲ್ಲಿ ಸೌತ್ ಆಫ್ರಿಕಾ, 2026ರ ಜನವರಿಯಲ್ಲಿ ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿನ್ನಾಡಲಿದ್ದಾರೆ. ಈ ಬಳಿಕ ವಿರಾಟ್​ ಹಾಗೂ ರೋಹಿತ್ ಶರ್ಮಾ ಕಂಪ್ಲೀಟ್​ ವಿಶ್ರಾಂತಿಯಲ್ಲಿ ಇರ್ತಾರೆ. ಇದೇ ಡಿಸೆಂಬರ್​​ನಲ್ಲೇ ವಿಜಯ್ ಹಜಾರೆ ಟೂರ್ನಿ ಆರಂಭವಾಗಲಿದೆ. ವಿಶ್ರಾಂತಿಯಲ್ಲಿರುವ ರೋಹಿತ್ ಶರ್ಮಾ, ವಿರಾಟ್​​, ಬಿಸಿಸಿಐ ಸೂಚನೆಯಂತೆ ಕಡ್ಡಾಯವಾಗಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಭಾಗವಹಿಸಬೇಕಿರುತ್ತೆ. ಇಲ್ಲ ಕರಿಯರ್ ಅಂತ್ಯಕ್ಕೆ ತಾವೇ ಕೊಳ್ಳಿ ಇಟ್ಟುಕೊಳ್ತಾರೆ. ಹೀಗಾಗಿ ಕರಿಯರ್ ಉಳಿಸಿಕೊಳ್ಳಲು ರೋಹಿತ್, ಕೊಹ್ಲಿ ವಿಜಯ್ ಹಜಾರೆ ಆಡ್ತಾರಾ ಎಂಬ ಕುತೂಹಲ ಇದ್ದೇ ಇದೆ.
ಅಷ್ಟೇ ಅಲ್ಲ, ಪರೋಕ್ಷವಾಗಿ ರನ್​ ಗಳಿಸಿದರಷ್ಟೇ ಟೀಮ್ ಇಂಡಿಯಾದಲ್ಲಿ ಸ್ಥಾನ ಎಂಬ ಎಚ್ಚರಿಕೆ ಸಂದೇಶವೂ ನೀಡಿದೆ. ಹೀಗಾಗಿ ರೋಹಿತ್ ಶರ್ಮಾ & ವಿರಾಟ್​ ಕೊಹ್ಲಿ ವಿಶ್ವಕಪ್ ಹಾದಿಯೇ ಅಲ್ಲ. ಏಕದಿನ ಭವಿಷ್ಯವೂ ಸಂಕಷ್ಟಕ್ಕೆ ಸಿಲುಕಿದೆ. ಇದಕ್ಕೆ ಈ ಮಾತುಗಳೇ ಸಾಕ್ಷಿ ನುಡಿಯುತ್ತಿವೆ.
ವಿರಾಟ್, ರೋಹಿತ್ ಕೆಲ ವರ್ಷಗಳಿಂದ ತಂಡಕ್ಕಾಗಿ ರನ್​​ ಗಳಿಸ್ತಿದ್ದಾರೆ. ಅದು ಈಗ ಬದಲಾಗುವುದಿಲ್ಲ ಎಂದು ಭಾವಿಸುತ್ತೇನೆ. ಈಗಲೂ ಡ್ರೆಸ್ಸಿಂಗ್ ರೂಮ್​​ನ ಲೀಡರ್ಸ್ ಆಗಿರುತ್ತಾರೆ. ಟನ್​ಗಟ್ಟಲೇ ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಈಗಲೂ ಅದನ್ನೇ ಮಾಡ್ತಾರೆ ಎಂದು ಭಾವಿಸುತ್ತೇವೆ. ಈ ಹಂತದಲ್ಲಿ ಹೆಚ್ಚು ಯೋಚಿಸಬೇಕಾಗಿಲ್ಲ. ಅವರು ತಮ್ಮ ವೃತ್ತಿ ಜೀವನದುದ್ದಕ್ಕೂ ರನ್​ ಗಳಿಸುವುದು ಅಗತ್ಯ ಎಂದು ನಿಮಗೂ ತಿಳಿದಿದೆ.
ಅಜಿತ್ ಅಗರ್ಕರ್, ಚೀಫ್ ಸೆಲೆಕ್ಟರ್
ಡೊಮೆಸ್ಟಿಕ್ ಆಡದಿದ್ರೆ ಕೊಹ್ಲಿ, ರೋಹಿತ್ ಕರಿಯರ್​ ಖತಂ..!
ಚಾಂಪಿಯನ್ಸ್​ ಟ್ರೋಫಿ ಬಳಿಕ ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ ಏಕದಿನ ಪಂದ್ಯಗಳನ್ನ ಆಡಿಲ್ಲ. ಬರೋಬ್ಬರಿ 7 ತಿಂಗಳಿಂದ ಕ್ರಿಕೆಟ್​ನಿಂದ ದೂರ ಉಳಿದಿರುವ ರೋಹಿತ್, ವಿರಾಟ್​, 2027ರ ಏಕದಿನ ವಿಶ್ವಕಪ್​ಗೂ ಮುನ್ನ ಕೇವಲ 8 ಏಕದಿನ ಸರಣಿಗಳಿಂದ 24 ಪಂದ್ಯಗಳನ್ನ ಅಷ್ಟೇ ಆಡ್ತಾರೆ. ದೀರ್ಘ ವಿರಾಮದಲ್ಲಿರುವ ರೋಹಿತ್, ವಿರಾಟ್​ ಕೊಹ್ಲಿ ಫಿಟ್ನೆಸ್, ಫಾರ್ಮ್ ಉಳಿಸಿಕೊಳ್ಳಬೇಕಿದೆ. ಹೀಗಾಗಿ ಮುಂದಿನ ಏಕದಿನ ವಿಶ್ವಕಪ್​ ತನಕ ಫಿಟ್ನೆಸ್, ಫಾರ್ಮ್​ ಉಳಿಸಿಕೊಳ್ಳಬೇಕಾದ್ರೆ, ಡೊಮೆಸ್ಟಿಕ್ ಕ್ರಿಕೆಟ್​ ಆಡೋದು ಅತ್ಯಗತ್ಯವಾಗಿದ್ದು, ರನ್​​ ಗಳಿಸುತ್ತಾ ಫಾರ್ಮ್ ಕಾಪಾಡಿಕೊಳ್ಳಬೇಕಿದೆ. ಇಲ್ಲ ರೋಹಿತ್, ವಿರಾಟ್ ಕೊಹ್ಲಿ ಸ್ಥಾನ ಅಂತತ್ರಕ್ಕೆ ಸಿಲುಕುವುದು ಗ್ಯಾರಂಟಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ