/newsfirstlive-kannada/media/media_files/2025/10/07/prithvi_shaw-2025-10-07-21-53-59.jpg)
ಯಂಗ್ ಬ್ಯಾಟರ್ ಪೃಥ್ವಿ ಶಾ ಅವರು ಟೀಮ್ ಇಂಡಿಯಾವನ್ನು ತೊರೆದು ಈಗಾಗಲೇ ಮೂರು- ನಾಲ್ಕು ವರ್ಷಗಳು ಕಳೆಯುತ್ತಿವೆ. ಐಪಿಎಲ್​ನಿಂದಲೂ ದೂರವಾಗಿರುವ ಯುವ ಬ್ಯಾಟರ್ ಸದ್ಯ ಮಹಾರಾಷ್ಟ್ರದ ತಂಡದಲ್ಲಿ ಆಡುತ್ತಿದ್ದು ಮುಂಬೈ ಟೀಮ್ ವಿರುದ್ಧ ಭರ್ಜರಿ ಶತಕ ಸಿಡಿಸುವ ಮೂಲಕ ಬಿಸಿಸಿಐಗೆ ಬಿಗ್ ಮೆಸೇಜ್ ಕೊಟ್ಟಿದ್ದಾರೆ.
ಗಾಹುಂಜೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಮುಂಬೈ ಮತ್ತು ಮಹಾರಾಷ್ಟ್ರದ ನಡುವೆ ಮೂರು ದಿನಗಳ ಅಭ್ಯಾಸ ಪಂದ್ಯ ನಡೆಯುತ್ತಿದೆ. ಮೊದಲ ದಿನವೇ ಮಹಾರಾಷ್ಟ್ರ ತಂಡದ ಓಪನರ್ಸ್​ ಆದ ಪೃಥ್ವಿ ಶಾ ಹಾಗೂ ಅರ್ಶಿನ್ ಕುಲಕರ್ಣಿ ಇಬ್ಬರೂ ಸಿಡಿಲಬ್ಬರದ ಸೆಂಚುರಿ ಬಾರಿಸಿ, ಮುಂಬೈ ತಂಡಕ್ಕೆ ಟಕ್ಕರ್ ಕೊಟ್ಟಿದ್ದಾರೆ.
ಪಂದ್ಯದ ಮೊದಲ ದಿನವೇ 25 ವರ್ಷದ ಪೃಥ್ವಿ ಶಾ ಅವರು 140 ಎಸೆತಗಳಲ್ಲಿ 100 ರನ್​ಗಳನ್ನು ಬಾರಿಸಿ ಸಂಭ್ರಮಿಸಿದ್ದಾರೆ. ಇನ್ನೊಂದೆಡೆ ಇನ್ನೊಬ್ಬ ಓಪನರ್ ಅರ್ಶಿನ್ ಕುಲಕರ್ಣಿ ಕೂಡ ಬಿಗ್ ಬ್ಯಾಟಿಂಗ್ ಮಾಡಿದ್ದು 33 ಬೌಂಡರಿ, 4 ಸಿಕ್ಸರ್​​ನಿಂದ 140 ಎಸೆತಗಳಲ್ಲಿ 186 ರನ್​ಗಳನ್ನು ಬಾರಿಸಿ ಕ್ರೀಸ್​ ಕಾಯ್ದುಕೊಂಡಿದ್ದಾರೆ. ಮಹಾರಾಷ್ಟ್ರದ ತಂಡದ ಪರ ಈ ಓಪನರ್ಸ್​ ಜೋಡಿ ಬ್ಯಾಟಿಂಗ್ 49.4 ಓವರ್​ಗೆ 305 ಬೃಹತ್​ ಸ್ಕೋರ್​ ಅನ್ನು ಕಲೆ ಹಾಕಿರುವುದು ದಾಖಲೆ ಎನಿಸಿದೆ.
ಪೃಥ್ವಿ ಶಾ ಅವರು 2021ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಕೊನೆಯದಾಗಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಕೆಲವು ವಿವಾದಗಳು ಅವರ ಸುತ್ತ ಗಿರಕಿ ಹೊಡೆದಿದ್ದರಿಂದ ಭಾರತ ತಂಡ ಅಷ್ಟೇ ಅಲ್ಲ, ಐಪಿಎಲ್​ನ ಮುಂಬೈ ತಂಡದಿಂದಲೂ ಕೈಬಿಡಲಾಗಿತ್ತು. 2025ರ ಐಪಿಎಲ್​ ಮೆಗಾ ಆಕ್ಷನ್​ನಲ್ಲಿ ಅನ್​ಸೋಲ್ಡ್ ಆಗಿದ್ದರು. ​
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ