/newsfirstlive-kannada/media/media_files/2025/10/07/jawed_habib-2025-10-07-20-03-14.jpg)
ಲಕ್ನೋ: ವಂಚನೆ ಹೂಡಿಕೆ ಯೋಜನೆಯ ಮೂಲಕ 100ಕ್ಕೂ ಹೆಚ್ಚು ಜನರಿಗೆ 5 ರಿಂದ 7 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಸೆಲೆಬ್ರಿಟಿ ಹೇರ್​​ಸ್ಟೈಲಿಸ್ಟ್​ ಜಾವೇದ್​ ಹಬೀಬ್​ ಮತ್ತು ಅವರ ಮಗನ ವಿರುದ್ಧ 20 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಉತ್ತರ ಪ್ರದೇಶದ ಸಂಭಾಲ್ ನಗರದ ಪೊಲೀಸ್​ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಪ್ರಸಿದ್ಧ ಕೇಶವಿನ್ಯಾಸಗಾರ ಜಾವೇದ್​ ಹಬೀಬ್ ಮತ್ತು ಅವರ ಮಗನ ವಿರುದ್ಧ ಹಣ ವಂಚನೆ ಆರೋಪ ಹಿನ್ನೆಲೆಯಲ್ಲಿ ಈಗಾಗಲೇ 20 ಕೇಸ್ ದಾಖಲು ಆಗಿವೆ. ಹಗರಣಕ್ಕೆ ಕಾರಣವಾಗಿರುವ ಕಂಪನಿಯ ಸಂಸ್ಥಾಪಕಿ ಜಾವೇದ್​ ಹಬೀಬ್ ಅವರ ಹೆಂಡತಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ಈ ಬಂಸಂಧ ಜಾವೇದ್​ ಹಬೀಬ್ ಅವರ ವಕೀಲ ಪವನ್​ ಕುಮಾರ್, ಈ ಎಲ್ಲ ಆರೋಪಗಳನ್ನು ಬಲವಾಗಿ ಖಂಡಿಸಿದ್ದಾರೆ. ಹಗರಣ ನಡೆದಿದೆ ಎನ್ನಲಾಗಿದ್ದಲ್ಲಿ ನಮ್ಮ ಕಕ್ಷಿಗಾರರು ನೇರವಾಗಿ ಅದರಲ್ಲಿ ಒಳಗೊಂಡಿಲ್ಲ. ಈವರೆಗೂ ಜಾವೇದ್​ ಹಬೀಬ್ ಮೇಲೆ ಎಫ್​ಐಆರ್ ದಾಖಲು ಆಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತುಂಗಭದ್ರಾ ನದಿಯಲ್ಲಿ ತೆಪ್ಪ ಮುಗುಚಿ ಕೇಸ್​.. ಇಬ್ಬರು ಯುವಕರ ಮೃತದೇಹ ಪತ್ತೆ
ಇದು ಅಲ್ಲದೇ ಜಾವೇದ್ ಹಬೀಬ್ ಭಾರತದಾದ್ಯಂತ ಕೇಶವಿನ್ಯಾಸ ಹಾಗೂ ಮೇಕಪ್ ವಿಚಾರದ ಬಗ್ಗೆ ಸಭೆ, ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಅಂತಹದರಲ್ಲಿ ಒಂದು ವಿಚಾರ ಕಾರ್ಯಕ್ರಮವನ್ನು ಸಂಭಾಲ್‌ನಲ್ಲಿ ಎಫ್​ಎಲ್​ಸಿ (ಫೋಲಿಕಲ್ ಗ್ಲೋಬಲ್ ಕಂಪನಿ) ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮಕ್ಕೆ ಜಾವೇದ್ ಹಬೀಬ್ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಇದರಲ್ಲಿ ಇವರ ಮಗ ಕೂಡ ಇದ್ದರು. ಆದರೆ ಯಾವುದೇ ಸಾಕ್ಷಿಗಳು ಇಲ್ಲದೇ ಆರೋಪ ಮಾಡಲಾಗುತ್ತಿದೆ ಎಂದು ವಕೀಲರು ಹೇಳಿದ್ದಾರೆ.
ಆದರೆ ಈ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಹಬೀಬ್​ ಕುಟುಂಬದ ಎಲ್ಲರಿಗೂ ಲುಕ್​ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಹಬೀಬ್​ರನ್ನು ಸಂಭಾಲ್​ ನಗರಕ್ಕೆ ವಿಚಾರಣೆಗೆಂದು ಕರೆಸಲಾಗಿದೆ. ಇದು ಅಲ್ಲದೇ ದೆಹಲಿ ಹಾಗೂ ಮುಂಬೈನಲ್ಲಿರುವ ಅವರ ಆಸ್ತಿ ಕುರಿತು ಪೊಲೀಸ್ ತಂಡ ತನಿಖೆ ಆರಂಭಿಸಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ