Advertisment

ತುಂಗಭದ್ರಾ ನದಿಯಲ್ಲಿ ತೆಪ್ಪ ಮುಗುಚಿ ಕೇಸ್​.. ಇಬ್ಬರು ಯುವಕರ ಮೃತದೇಹ ಪತ್ತೆ

ನದಿಯಲ್ಲಿ ದುರಂತ ನಡೆದಾಗ ಇಬ್ಬರು ಈಜಿಕೊಂಡು ದಡ ಸೇರಿದ್ದರು. ಆದರೆ ಈ ಇಬ್ಬರು ನಾಪತ್ತೆ ಆಗಿದ್ದರು. ಈ ಬಗ್ಗೆ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಅದರಂತೆ ಇಂದು ಹೊನ್ನಾಳಿ ಬಳಿಯ ತುಂಗಭದ್ರಾ ನದಿಯಲ್ಲಿ 2 ಮೃತದೇಹಗಳು ಪತ್ತೆ ಆಗಿವೆ.

author-image
Bhimappa
DVG_TUNGABHADRA
Advertisment

ದಾವಣಗೆರೆ: ತುಂಗಭದ್ರಾ ನದಿಯಲ್ಲಿ ನಿನ್ನೆ ತೆಪ್ಪ ಮುಗುಚಿ ಇಬ್ಬರು ನೀರುಪಾಲು ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಮೃತದೇಹಗಳು ಪತ್ತೆ ಆಗಿವೆ. 

Advertisment

ತೆಪ್ಪದಲ್ಲಿದ್ದ ತಿಪ್ಪೇಶ್​​​​ (25), ಮುಕ್ತಿಯಾರ್​​​ (19) ಯುವಕರ ಮೃತದೇಹಗಳು ಪತ್ತೆ ಆಗಿವೆ. ತೆಪ್ಪದಲ್ಲಿ ನಾಲ್ವರು ತೆರಳಿದ್ದರು. ನಿನ್ನೆ ನದಿಯಲ್ಲಿ ದುರಂತ ನಡೆದಾಗ ಇಬ್ಬರು ಈಜಿಕೊಂಡು ದಡ ಸೇರಿದ್ದರು. ಆದರೆ ಈ ಇಬ್ಬರು ನಾಪತ್ತೆ ಆಗಿದ್ದರು. ಈ ಬಗ್ಗೆ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಅದರಂತೆ ಇಂದು ಹೊನ್ನಾಳಿ ಬಳಿಯ ತುಂಗಭದ್ರಾ ನದಿಯಲ್ಲಿ 2 ಮೃತದೇಹಗಳು ಪತ್ತೆ ಆಗಿವೆ.

ಇದನ್ನೂ  ಓದಿ: ಡ್ಯಾಂ ನೀರಿಗೆ ಇಳಿದಿದ್ದ ಒಂದೇ ಕುಟುಂಬದ 8 ಜನ.. ಇಬ್ಬರ ಮೃತದೇಹ ಪತ್ತೆ, ನಾಲ್ವರು ಕಣ್ಮರೆ

DVG_TUNGABHADRA_BOYS

ಹುಡುಕಾಟದ  ವೇಳೆ ಅಗ್ನಿ ಶಾಮಕ ದಳ, ಪೊಲೀಸರು ಹಾಗೂ ಮುಳುಗು ತಜ್ಞರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಮೃತದೇಹ ಸಿಗುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆಗೆಗಾಗಿ ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳ ರವಾನೆ ಮಾಡಲಾಗಿದೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ. 

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

News First Web Tumkur
Advertisment
Advertisment
Advertisment