Advertisment

ಸ್ನೇಹಿತ ಸೆಹ್ವಾಗ್​ ಪತ್ನಿ ಜೊತೆ ಬಿಸಿಸಿಐ ಅಧ್ಯಕ್ಷ ಮಿಥುನ್ ಅಫೇರ್..? ಏನಿದು ಕತೆ..?

ಸೆಹ್ವಾಗ್ ಒಂದು ಕಾಲದಲ್ಲಿ ಟೀಮ್ ಇಂಡಿಯಾ ಪಾಲಿನ ‘ಡೇರ್​ ಡೆವಿಲ್’ ಬ್ಯಾಟ್ಸ್​ಮನ್. ಆದ್ರೀಗ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ನಿಜಕ್ಕೂ ಆಘಾತಕಾರಿ. ಸೆಹ್ವಾಗ್​ರ ದೀರ್ಘಕಾಲದ ಸ್ನೇಹಿತ, ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಜೊತೆ ಪತ್ನಿ ಆರತಿ ಅಹ್ಲಾವತ್ ಅಫೇರ್ ಹೊಂದಿರವ ಸುದ್ದಿ ಎಲ್ಲೆಡೆ ಚರ್ಚೆಯಾಗ್ತಿದೆ.

author-image
Ganesh Kerekuli
sehwag
Advertisment

ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ (Mithun Manhas)​ ಜೊತೆ ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್​ಮನ್ ವೀರೇಂದ್ರ ಸೆಹ್ವಾಗ್ (Virender Sehwag) ಅವರ ಪತ್ನಿ, ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಇದೇ ಕಾರಣಕ್ಕೆ ಪತ್ನಿಯಿಂದ ಸೆಹ್ವಾಗ್ ದೂರ ಇದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. 

Advertisment

ವೀರೆಂದ್ರ ಸೆಹ್ವಾಗ್ ಒಂದು ಕಾಲದಲ್ಲಿ ಟೀಮ್ ಇಂಡಿಯಾ ಪಾಲಿನ ‘ಡೇರ್​ ಡೆವಿಲ್’ ಬ್ಯಾಟ್ಸ್​ಮನ್. ಆದ್ರೀಗ ಅವರ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ. ಸೆಹ್ವಾಗ್ ಅವರ ದೀರ್ಘಕಾಲದ ಸ್ನೇಹಿತ ಹಾಗು ಹಾಲಿ ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಜೊತೆ ಪತ್ನಿ ಆರತಿ ಅಹ್ಲಾವತ್ (Aarti Ahlawat) ಅಫೇರ್ ಹೊಂದಿರವ ಸುದ್ದಿ ಎಲ್ಲೆಡೆ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಅಭಿಷೇಕ್ ತ್ರಿಪಾಠಿ ಪೋಸ್ಟ್ ಬಳಿಕ ಹೆಚ್ಚಿದ ವದಂತಿ

ಅಕ್ಟೋಬರ್ 7, 2025 ರಂದು ಪತ್ರಕರ್ತ ಅಭಿಷೇಕ್ ತ್ರಿಪಾಠಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ಸಂದೇಶವನ್ನು ಪೋಸ್ಟ್ ಮಾಡಿದ್ದರು. ಆ ಪೋಸ್ಟ್​ನಲ್ಲಿ ಕ್ರಿಕೆಟಿಗರಾದ ಮುರಳಿ ವಿಜಯ್ ಮತ್ತು ದಿನೇಶ್ ಕಾರ್ತಿಕ್​ರ ವಿವಾದವನ್ನು ಉಲ್ಲೇಖಿಸಿ, ಇದೇ ರೀತಿಯ ಪರಿಸ್ಥಿತಿ ಮತ್ತೆ ಸಂಭವಿಸಬಹುದು ಎಂದು ಸುಳಿವು ನೀಡಿದ್ದಾರೆ. ಈ ಒಂದು ಪೋಸ್ಟ್ ಎಲ್ಲೆಡೆ ಚರ್ಚೆಗೆ ಎಡೆಮಾಡಿಕೊಟ್ಟಿದೆ. 

as post

ಈ ಊಹಾಪೋಹಕ್ಕೆ ಮತ್ತಷ್ಟು ಪುಷ್ಟಿ ನೀಡಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಸೆಹ್ವಾಗ್​ ಮಕ್ಕಳು ಮನ್ಹಾಸ್ ಅವರನ್ನು ಫಾಲೋ ಮಾಡುತ್ತಿರುವುದು ಹಾಗೂ ಕಳೆದ ವರ್ಷದ ದೀಪಾವಳಿ ಆಚರಣೆಯ ಸಮಯದಲ್ಲಿ ಸೆಹ್ವಾಗ್ ತಮ್ಮ ಪುತ್ರರು ಮತ್ತು ತಾಯಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಆ ಫೋಟೋದಲ್ಲಿ ಸೆಹ್ವಾಗ್ ಪತ್ನಿ ಇಲ್ಲ. ಅದೇ ರೀತಿ ಇನ್​ಸ್ಟಾಗ್ರಾಮ್​ನಲ್ಲಿ ಇಬ್ಬರು ಪರಸ್ಟರ ಅನ್​ಫಾಲೋ ಮಾಡಿಕೊಂಡಿರೋದು ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. 

Advertisment

ಇದನ್ನೂ ಓದಿ:ಬಿಗ್​ಬಾಸ್​ ವೀಕ್ಷಕರಿಗೆ ಗುಡ್​ನ್ಯೂಸ್​; ಡಿಕೆ ಶಿವಕುಮಾರ್​ಗೆ ಧನ್ಯವಾದ ಹೇಳಿದ ಕಿಚ್ಚ ಸುದೀಪ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

delhi capitals IPL bcci president BCCI veerendra sehwag
Advertisment
Advertisment
Advertisment