Advertisment

ಕ್ರಿಕೆಟ್ ಲೋಕದಲ್ಲಿ ಮತ್ತೊಂದು ಮುರುಳಿ ವಿಜಯ್ ಸ್ಟೋರಿ.. ಸೆಹ್ವಾಗ್-ಆರತಿ ಲವ್ ಸ್ಟೋರಿ ಹೇಗಿತ್ತು..?

ಭಾರತ ತಂಡದಲ್ಲಿ ದಶಕಗಳ ಕಾಲ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ವಿರೇಂದ್ರ ಸೆಹ್ವಾಗ್​ರ ಸಂಸಾರದಲ್ಲಿ ಬಿರುಗಾಳಿ ಎದ್ದಿರುವ ಸುದ್ದಿ ಎಲ್ಲೆಡೆ ಹಬ್ಬಿದೆ. ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಹಾಗೂ ಸೆಹ್ವಾಗ್ ಪತ್ನಿ ಆರತಿ ಅಹ್ಲಾವತ್ ಅಫೇರ್ ಹೊಂದಿದ್ದಾರೆ ಎಂಬ ವದಂತಿ ಹರಡುತ್ತಿದೆ. ಈ ಕುರಿತು ಸೆಹ್ವಾಗ್ ಹಾಗು ಆರತಿ ಅಹ್ಲಾವತ್ ಲವ್ ಸ್ಟೋರಿ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

author-image
Ganesh Kerekuli
vs1

ಆರತಿ ಆಹ್ಲಾವತ್ - ವೀರೇಂದ್ರ ಸೆಹ್ವಾಗ್‌

Advertisment
  • ವೀರೇಂದ್ರ ಸೆಹ್ವಾಗ್- ಆರತಿ ಆಹ್ಲಾವತ್‌ ಸಂಬಂಧದಲ್ಲಿ ಬಿರುಕು
  • ಇಬ್ಬರ ಮಧ್ಯೆ ಮಿಥುನ್ ಮಾನ್ಹಸ್ ಎಂಟ್ರಿ!
  • ವೀರೇಂದ್ರ ಸೆಹ್ವಾಗ್ ಬಾಳಿಗೆ ಹುಳಿ ಹಿಂಡಿದ್ರಾ ಮಿಥುನ್ ಮಾನ್ಹಸ್‌

ಭಾರತ ತಂಡದಲ್ಲಿ ದಶಕಗಳ ಕಾಲ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ವಿರೇಂದ್ರ ಸೆಹ್ವಾಗ್​ರ ಸಂಸಾರದಲ್ಲಿ ಬಿರುಗಾಳಿ ಎದ್ದಿರುವ ಸುದ್ದಿ ಎಲ್ಲೆಡೆ ಹಬ್ಬಿದೆ. ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಹಾಗೂ ಸೆಹ್ವಾಗ್ ಪತ್ನಿ ಆರತಿ ಅಹ್ಲಾವತ್ ಅಫೇರ್ ಹೊಂದಿದ್ದಾರೆ ಎಂಬ ವದಂತಿ ಹರಡುತ್ತಿದೆ. ಈ ಕುರಿತು ಸೆಹ್ವಾಗ್ ಹಾಗು ಆರತಿ ಅಹ್ಲಾವತ್ ಲವ್ ಸ್ಟೋರಿ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. 

Advertisment

ಸೆಹ್ವಾಗ್ ಬಾಲ್ಯ..

ಡೇರ್ ಡೆವಿಲ್ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಮೂಲತಃ ಹರಿಯಾಣ ಮೂಲದವರು. ನಂತರ ಕ್ರಿಕೆಟ್ ಮೇಲೆ ಅಪಾರ ಒಲವಿದ್ದರಿಂದ ಕ್ರಿಕೆಟ್ ಕೋಚಿಂಗ್​ಗಾಗಿ ಕುಟುಂಬ ಸಮೇತ ದೆಹಲಿಗೆ ಶಿಫ್ಟ್ ಅದರು. ಸ್ಫೋಟಕ ಬ್ಯಾಟ್ಸ್​ಮನ್ ವೀರೇಂದ್ರ ಸೆಹ್ವಾಗ್ 1999 ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. 1999 ರಿಂದ 2013ರ ತನಕ ತಮ್ಮ ಸ್ಫೋಟಕ ಬ್ಯಾಟಿಂಗ್​ನಿಂದಲೇ ಎಲ್ಲರ ಮನ ಗೆದ್ದವರು. ಬಳಿಕ 2015ರಲ್ಲಿ ಎಲ್ಲಾ ಕ್ರಿಕೆಟ್ ಮಾದರಿಗಳಿಗೂ ಗುಡ್ ಬೈ ಹೇಳಿದ್ದರು. 

ಹೇಗೆ ಶುರುವಾಯ್ತು ಸೆಹ್ವಾಗ್-ಆರತಿ ಲವ್..? 

ಸೆಹ್ವಾಗ್ ಮದುವೆ ಸಮಾರಂಭದಲ್ಲಿ ಪತ್ನಿ ಆರತಿಯನ್ನು ಮೊದಲು ಭೇಟಿಯಾಗಿದ್ದರು. ಆಗ ಸೆಹ್ವಾಗ್​ಗೆ ಇನ್ನೂ 7 ವರ್ಷ ಹಾಗು ಆರತಿಗೆ 5 ವರ್ಷ. ಹಾಗೆ ನೋಡೋದಾದ್ರೆ ಪತ್ನಿ ಆರತಿ,  ಸೆಹ್ವಾಗ್​​ಗೆ ಕಸಿನ್ ಆಗಬೇಕು, ಇಲ್ಲಿಂದ ಇವರಿಬ್ಬರ ಆತ್ಮೀಯತೆ ಶುರುವಾಗಿತ್ತು. ಬಳಿಕ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ ನಂತರ ಸೆಹ್ವಾಗ್​ ತಮ್ಮ 21ನೇ ವಯಸ್ಸಿನಲ್ಲಿ ಆರತಿಗೆ ಪ್ರಪೋಸ್ ಮಾಡಿದರು. ಇದನ್ನು ಮುಕ್ತ ಮನಸ್ಸಿನಿಂದಲೇ ಆರತಿ ಅಹ್ಲಾವತ್ ಒಪ್ಪಿಕೊಂಡರು. 

vs2

ಅರುಣ್ ಜೇಟ್ಲಿ ಮನೆಯಲ್ಲಿ ಮದುವೆ..!

ಸೆಹ್ವಾಗ್​-ಅಹ್ಲಾವತ್ ಜೋಡಿಯು 2002 ಏಪ್ರಿಲ್ 24 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಯ ಮದುವೆಯು  ಕೇಂದ್ರ ಹಣಕಾಸು ಖಾತೆಯ ಮಾಜಿ  ಸಚಿವ ಅರುಣ್ ಜೇಟ್ಲಿ ಮನೆಯಲ್ಲಿ ಗೌಪ್ಯವಾಗಿ ನಡೆಯಿತು. ಈ ಮದುವೆ ಸಮಾರಂಭದಲ್ಲಿ ಕೆಲವೇ ಕೆಲವು ರಾಜಕಾರಣಿಗಳು, ಬಾಲಿವುಡ್ ಸ್ಟಾರ್​ಗಳು ಹಾಗು ಕ್ರಿಕೆಟ್​ ಸ್ಟಾರ್​ಗಳನ್ನು ಮಾತ್ರ ಆಹ್ವಾನಿಸಲಾಗಿತ್ತು. ಯಾವ ಮಾಧ್ಯಮಗಳಿಗೂ ಅವಕಾಶವಿರಲಿಲ್ಲ.  ಬಳಿಕ 2007ರಲ್ಲಿ ತಮ್ಮ ಮೊದಲನೇ ಮಗ ಆರ್ಯವೀರ್​ನನ್ನು ಹಾಗು 2010ರಲ್ಲಿ ಎರಡನೇ ಮಗ ವೇದಾಂತ್​ನನ್ನು ಬರಮಾಡಿಕೊಂಡರು.

Advertisment

ಏನಿದು ಅಫೇರ್ ವದಂತಿ..? 

ಕೆಲವು ತಿಂಗಳುಗಳಿಂದ ಸೆಹ್ವಾಗ್ ದಾಂಪತ್ಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಊಹೆ ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಪರಸ್ಪರ ಅನ್​ಫಾಲೋ ಮಾಡಿಕೊಂಡಿರುವುದು,  ಆರತಿ ಬರ್ತ್​ಡೇಗೆ ಸೆಹ್ವಾಗ್​ ಯಾವುದೇ ಶುಭಕೋರದಿರುವುದು ಹಾಗೂ ಕಳೆದ ವರ್ಷದ ದೀಪಾವಳಿ ಆಚರಣೆಯ ಸಮಯದಲ್ಲಿ ಸೆಹ್ವಾಗ್ ತಮ್ಮ ಪುತ್ರರು ಮತ್ತು ತಾಯಿಯೊಂದಿಗೆ ಹಂಚಿಕೊಂಡಿರುವ ಫೋಟೋಗಳು ಈ ವದಂತಿಗಳು ನಿಜ ಎನ್ನುವಂತೆ ಪುಷ್ಟಿ ನೀಡುತ್ತಿವೆ. ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಹಾಗೂ ಸೆಹ್ವಾಗ್ ಪತ್ನಿ ಆರತಿ ಅಹ್ಲಾವತ್ ಅಫೇರ್ ಹೊಂದಿದ್ದಾರೆ ಎಂಬ ಗುಲ್ ಎದ್ದಿದೆ. ಈ ವದಂತಿ ಕೇಳಿದ ಕ್ರಿಕೆಟ್ ಅಭಿಮಾನಿಗಳು, ಕ್ರಿಕೆಟ್ ಲೋಕದಲ್ಲಿ ಮತ್ತೊಂದು ಮುರುಳಿ ವಿಜಯ್ ಸ್ಟೋರಿ ನಡೆಯಿತಾ ಎಂಬ ಚರ್ಚೆ ಶುರು ಮಾಡಿದ್ದಾರೆ. 

ದಶಕಗಳ ಕಾಲ ಕ್ರಿಕೆಟ್​ ಅಂಗಳದಲ್ಲಿ, ಸ್ಫೋಟಕ ಬ್ಯಾಟಿಂಗ್​ನಿಂದ ರಂಜಿಸಿದ್ದ ಸೆಹ್ವಾಗ್ ಬಾಳಲ್ಲಿ ಬಿರುಕು ಮೂಡಿಸಿರುವುದು ಅಭಿಮಾನಿಗಳಿಗೆ ಆಘಾತವಾಗಿದೆ. ಇವೆಲ್ಲಾ ವದಂತಿಗಳು ಸುಳ್ಳಾಗಿರಲಿ ಎಂಬುದು ಕೂಡಾ ಅಭಿಮಾನಿಗಳ ಆರೈಕೆಯಾಗಿದೆ. 

ಇದನ್ನೂ ಓದಿ:ಸ್ನೇಹಿತ ಸೆಹ್ವಾಗ್​ ಪತ್ನಿ ಜೊತೆ ಬಿಸಿಸಿಐ ಅಧ್ಯಕ್ಷ ಮಿಥುನ್ ಅಫೇರ್..? ಏನಿದು ಕತೆ..?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL BCCI RCB veerendra sehwag delhi capitals
Advertisment
Advertisment
Advertisment