Advertisment

ಪಾಂಡ್ಯ ರೇಂಜ್ ಬೇರೆ.. ಈ ಹೊಸ ಕಾರಿನ ಬೆಲೆ ಎಷ್ಟು ಕೋಟಿ..?

ಪಾಂಡ್ಯ, ಜಂಟಲ್​​​ಮನ್ ಗೇಮ್​ನ ಛಲಗಾರ. ಈ ಸ್ಟಾರ್ ಕ್ರಿಕೆಟರ್​ಗೆ ಒಂದು ಖಯಾಲಿ ಇದೆ. ಹಾರ್ದಿಕ್​​ ಬಿಟ್ರೆ ಈ ಖಯಾಲಿ ಟೀಮ್ ಇಂಡಿಯಾದ ಮತ್ಯಾವ ಆಟಗಾರರಿಗೆ ಈ ರೇಂಜ್​ಗಿಲ್ಲ. ಈಗಲೂ ಅಷ್ಟೇ ಅದೇ ಕಾರಣಕ್ಕೆ ಟ್ರೆಂಡ್​ ಆಗಿದ್ದಾರೆ. ಏಷ್ಯಾಕಪ್​ ಮುಗಿಸಿ ದುಬೈನಿಂದ ವಾಪಾಸ್ಸಾಗಿರೋ ​ಹಾರ್ದಿಕ್​ ಮಾಡಿದ್ದೇನು?

author-image
Ganesh Kerekuli
Hardik Pandya
Advertisment

ಹಾರ್ದಿಕ್​ ಪಾಂಡ್ಯ, ಜಂಟಲ್​​​ಮನ್ ಗೇಮ್​ನ ಛಲಗಾರ. ಈ ಸ್ಟಾರ್ ಕ್ರಿಕೆಟರ್​ಗೆ ಒಂದು ಖಯಾಲಿ ಇದೆ. ಹಾರ್ದಿಕ್​​ ಬಿಟ್ರೆ ಈ ಖಯಾಲಿ ಟೀಮ್ ಇಂಡಿಯಾದ ಮತ್ಯಾವ ಆಟಗಾರರಿಗೆ ಈ ರೇಂಜ್​ಗಿಲ್ಲ. ಈಗಲೂ ಅಷ್ಟೇ ಅದೇ ಕಾರಣಕ್ಕೆ ಟ್ರೆಂಡ್​ ಆಗಿದ್ದಾರೆ. ಏಷ್ಯಾಕಪ್​ ಮುಗಿಸಿ ದುಬೈನಿಂದ ವಾಪಾಸ್ಸಾಗಿರೋ ​ಹಾರ್ದಿಕ್​ ಮಾಡಿದ್ದೇನು? 

Advertisment

ಟೀಮ್​ ಇಂಡಿಯಾ ಆಟಗಾರರು ಏನೇ ಮಾಡಿದ್ರೂ ಸುದ್ದಿಯಲ್ಲಿರ್ತಾರೆ. ಕ್ರಿಕೆಟ್​ ಆಡ್ತಾ ಇರಲಿ, ಬಿಡಲಿ. ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿ ಇರ್ತಾರೆ. ಆಲ್​​ರೌಂಡರ್​ ಹಾರ್ದಿಕ್​ ಪಾಂಡ್ಯ ಸುದ್ದಿಯಲ್ಲಿದ್ದಾರೆ. ಹಾರ್ದಿಕ್​ ಸುದ್ದಿಯಾಗಿರೋ ಆನ್​ಫೀಲ್ಡ್​ ವಿಚಾರಕ್ಕಲ್ಲ. ಆಫ್​ ದ ಫೀಲ್ಡ್​ ವಿಚಾರದಿಂದ. ತನ್ನ ಐಷಾರಾಮಿ ಲೈಫ್​ಸ್ಟೈಲ್​ನಿಂದ ಎಲ್ಲರ ಕಣ್ಣುಕುಕ್ಕಿದ್ದಾರೆ.

ಪಾಂಡ್ಯ​ ಗ್ಯಾರೇಜ್​ಗೆ ಹೊಸ ಕಾರು ಎಂಟ್ರಿ

ಹಾರ್ದಿಕ್​ ಮತ್ತೆ ಸುದ್ದಿಯಾಗಿರೋದು ತನ್ನ ಐಷಾರಾಮಿ ಜೀವನ ಶೈಲಿಯಿಂದ. ಏಷ್ಯಾಕಪ್​ ಟೂರ್ನಿ ಮುಗಿಸಿ ಭಾರತಕ್ಕೆ ವಾಪಾಸ್ಸಾದ ಬೆನ್ನಲ್ಲೇ ಹಾರ್ದಿಕ್​ ಮನೆಗೆ ಹೊಸ ಅತಿಥಿಯ ಎಂಟ್ರಿಯಾಗಿದೆ. ಆ ಹೊಸ ಗೆಸ್ಟೇ ಐಷಾರಾಮಿ ಲ್ಯಾಂಬೋರ್ಗಿನಿ ಉರುಸ್.

ಇದನ್ನೂ ಓದಿ:ಸ್ನೇಹಿತ ಸೆಹ್ವಾಗ್​ ಪತ್ನಿ ಜೊತೆ ಬಿಸಿಸಿಐ ಅಧ್ಯಕ್ಷ ಮಿಥುನ್ ಅಫೇರ್..? ಏನಿದು ಕತೆ..?

Advertisment

Hardik Pandya new look (2)

ಹಾರ್ದಿಕ್​​ ಪಾಂಡ್ಯ​ ಹೊಸ ಲ್ಯಾಂಬೋರ್ಗಿನಿ ಉರುಸ್​​ ಕಾರನ್ನ ಖರೀದಿಸಿದ್ದಾರೆ. ಬರೋಬ್ಬರಿ 4.57 ಕೋಟಿ ನೀಡಿ ಹಳದಿ ಬಣ್ಣದ ಕಾರನ್ನ ಹಾರ್ದಿಕ್​ ಖರೀದಿಸಿದ್ದಾರೆ. ಹೆಚ್ಚು ಪ್ರೀಮಿಯಂ ಫೀಚರ್ಸ್​ ಹೊಂದಿರುವ ಈ ಹೊಸ ವೆರಿಯಂಟ್​ 4.0 ಲೀಟರ್​​ನ ಟ್ವಿನ್​ ಟರ್ಬೋ ವಿ8 ಪೆಟ್ರೋಲ್​ ಇಂಜಿನ್ ಹೊಂದಿದೆ. 8 ಸ್ಪೀಡ್​ ಅಟೋಮ್ಯಾಟಿಕ್​ ಗೇರ್​ಬಾಕ್ಸ್​ ಜೊತೆಗೆ ಆಲ್​​ ವೀಲ್​ ಡ್ರೈವ್​ ಸಿಸ್ಟಂ ಹೊಂದಿದೆ. 657 ಹಾರ್ಸ್​​ ಪವರ್​ನ ಈ ಹೊಸ ಕಾರಿನಲ್ಲಿ ಒಟ್ಟು 7 ಡ್ರೈವಿಂಗ್​ ಮೂಡ್​ಗಳಿದ್ದು, ಗಂಟೆಗೆ 305 ಕಿ.ಮೀ ಇದ್ರ ಟಾಪ್​ ಸ್ಪೀಡ್​.

24 ಕೋಟಿ ಮೌಲ್ಯದ ಕಾರುಗಳು.!

ಈ ಲ್ಯಾಂಬೋರ್ಗಿನಿ ಉರುಸ್​ ಹಾರ್ದಿಕ್​ ಕಾರ್​​ ಕಲೆಕ್ಷನ್​ಗೆ ಹೊಸ ಸೇರ್ಪಡೆಯಷ್ಟೇ. ಗ್ಯಾರೇಜ್​ನಲ್ಲಿ ಕೋಟಿ ಕೋಟಿ ಮೌಲ್ಯದ ಲಕ್ಸುರಿ ಕಾರ್​ಗಳನ್ನ ಹಾರ್ದಿಕ್​ ಇಟ್ಟಿದ್ದಾರೆ. ಆ ದುಬಾರಿ ಕಾರುಗಳ ಒಟ್ಟು ಮೌಲ್ಯ ಸುಮಾರು 24 ಕೋಟಿಗೂ ಅಧಿಕ. 12.25 ಕೋಟಿ ರೋಲ್ಸ್​ ರಾಯ್ಸ್​ ಕುಲ್ಲಿನನ್​, 5 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಹುರಾಕನ್, 4 ಕೋಟಿಯ ಮರ್ಸಿಡಿಸ್-AMG G63 ಸೇರಿದಂತೆ 10ಕ್ಕೂ ಅಧಿಕ ಕಾರುಗಳನ್ನ ಹೊಂದಿದ್ದಾರೆ. 

ಇದನ್ನೂ ಓದಿ:ಜಾಲಿವುಡ್​ಗೆ ಇನ್ನೂ ಬೀಗ.. ಬಿಗ್​ಬಾಸ್​​ಗೆ ಮಾತ್ರ ಅವಕಾಶ ಸಿಕ್ಕಿದ್ದು ಹೇಗೆ..?

Advertisment

HARDHIK_PANDYA_AXAR

40 ಕೋಟಿಯ ಪ್ರೈವೆಟ್​ ಜೆಟ್​​ ಒಡೆಯ ಪಾಂಡ್ಯ

ಹಾರ್ದಿಕ್​ ಪಾಂಡ್ಯ ಲಕ್ಸುರಿ ಲೈಫ್​ ಹೇಗಿದೆ ಅನ್ನೋದಕ್ಕೆ ಇದೊಂದು ಬೆಸ್ಟ್​ ಎಕ್ಸಾಂಪಲ್​ ನೋಡಿ. ಹಾರ್ದಿಕ್​ ಪಾಂಡ್ಯ ತನ್ನ ಸುತ್ತಾಟಕ್ಕೆ 4.8 ಮಿಲಿಯನ್​​​​ ಅಂದ್ರೆ 40 ಕೋಟಿಗೂ ಅಧಿಕ ಮೌಲ್ಯದ ಪ್ರೈವೇಟ್​ ಜೆಟ್​ ಅನ್ನೇ ಖರೀದಿಸಿದ್ದಾರೆ. ಕಪಿಲ್​ ದೇವ್​, ಸಚಿನ್​ ತೆಂಡುಲ್ಕರ್​, ಎಮ್​.ಎಸ್​ ಧೋನಿ, ವಿರಾಟ್​ ಕೊಹ್ಲಿ ಬಿಟ್ರೆ ಇಂಡಿಯನ್​​ ಕ್ರಿಕೆಟರ್ಸ್​ ಪೈಕಿ ಪಾಂಡ್ಯ ಬಳಿ ಮಾತ್ರ ಪ್ರೈವೇಟ್​ ಜೆಟ್​ ಇದೆ.

20 ಕೋಟಿ ಬೆಲೆಯ ವಾಚ್​ ಕಟ್ಟಿ ಮಿಂಚಿದ್ದ ಹಾರ್ದಿಕ್

ಕಳೆದ ಏಷ್ಯಾಕಪ್​ ಟೂರ್ನಿಯ ವೇಳೆ ಹೈಲೆಟ್​ ಆಗಿದ್ದ ವಿಚಾರವೇ ಇದು. ಟೂರ್ನಿಯ ಆರಂಭಕ್ಕೂ ಮುನ್ನ ಮೊದಲ ದಿನದ ಅಭ್ಯಾಸ ವೇಳೆ ಹಾರ್ದಿಕ್​ ಕೈಗೆ ಒಂದು ವಾಚ್​ ಕಟ್ಟಿದ್ರು. ಆ ವಾಚ್​ನ ಬೆಲೆ ಎಷ್ಟು ಗೊತ್ತಾ? ಸುಮಾರು 20 ಕೋಟಿ ರೂಪಾಯಿ! ಅಂದು ಹಾರ್ದಿಕ್ ಪಾಂಡ್ಯ ಧರಿಸಿದ್ದಿದ್ದು ರಿಚರ್ಡ್ ಮಿಲ್ಲೆ ಕಂಪೆನಿಯ ಸ್ಪೆಷಲ್ ಎಡಿಷನ್​ RM 27-02 ವಾಚ್​. ಈ ಕಂಪನಿಯವರು ತಯಾರಿ ಮಾಡಿರೋದೇ ಕೇವಲ 50 ವಾಚ್​​ಗಳನ್ನ. ಆ 50 ವಾಚ್​​ಗಳ ಪೈಕಿ ಒಂದು ವಾಚ್​ ಪಾಂಡ್ಯ ಬಳಿಯಿದೆ. 

ಇದನ್ನೂ ಓದಿ:ಜಾಲಿವುಡ್​ಗೆ ಬೀಗ ಹಾಕುವ ಮುಂಚೆ ಏನೆಲ್ಲ ನಡೆದು ಹೋಗಿತ್ತು..? ಬಿಗ್​ಬಾಸ್​​ಗೆ ಗೊತ್ತೇ ಇರಲಿಲ್ವಾ?

Advertisment

SURYAKUMAR_PANDYA (1)

90 ಕೋಟಿ ನೆಟ್​ವರ್ತ್

ಅಂದು ತುತ್ತು ಅನ್ನಕ್ಕೂ ಪರದಾಡಿ 5 ರೂಪಾಯಿ ಮ್ಯಾಗಿ ತಿಂದು ಹಾರ್ದಿಕ್​ ಹೊಟ್ಟೆ ತುಂಬಿಸಿಕೊಳ್ತಾ ಇದ್ದ ಕತೆ ನಿಮಗೆ ಗೊತ್ತಿರಬಹುದು. ಆದ್ರೀಗ ಅದೇ ಹಾರ್ದಿಕ್​ ಪಾಂಡ್ಯ ಮುಂಬೈನ ಪ್ರತಿಷ್ಟಿತ ಏರಿಯಾ ಬಾಂದ್ರಾದಲ್ಲಿ ಬರೋಬ್ಬರಿ 30 ಕೋಟಿ ಬೆಲೆಯ ಐಷಾರಾಮಿ ಅಪಾರ್ಟ್​​ಮೆಂಟ್​ನಲ್ಲಿ ಜೀವನ ನಡೆಸ್ತಿದ್ದಾರೆ. ಹಾರ್ದಿಕ್​ ನೆಟ್​ವರ್ತ್​ ಎಷ್ಟು ಗೊತ್ತಾ? ಬರೋಬ್ಬರಿ​​ 90 ಕೋಟಿ.

ಕ್ರಿಕೆಟ್​ನಲ್ಲಿ ಸಕ್ಸಸ್​​ ಕಂಡಂತೆ ಹಾರ್ದಿಕ್​ ಜೀವನವೂ ಬದಲಾಗಿದೆ. ಐಷಾರಾಮಿ ಜೀವನವನ್ನ ಹಾರ್ದಿಕ್​ ಲೀಡ್​ ಮಾಡ್ತಿದ್ದಾರೆ. ದುಬಾರಿ ಬೆಲೆಯ ಬ್ರ್ಯಾಂಡೆಡ್​ ವಸ್ತುಗಳೇ ಹಾರ್ದಿಕ್​ ಬಳಿ ಇರೋದು. ಕೋಟಿ ಕೋಟಿ ಕಮಾಯ್​ ಮಾಡೋ ಕ್ರಿಕೆಟರ್ಸ್​ ಇಂತಹ ಸ್ಟೈಲಿಶ್ ಲೈಫ್​ ಲೀಡ್​ ಮಾಡೋದು ಕಾಮನ್​​​. ಹಾರ್ದಿಕ್​​ ಪಾಂಡ್ಯ ಈ ವಿಚಾರದಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ ಅಷ್ಟೇ.

ಇದನ್ನೂ ಓದಿ: ರಮ್ಯಾ ವಿರುದ್ಧ ಕಮೆಂಟ್ ಮಾಡಿ ಕೆಟ್ಟ ದರ್ಶನ್ ಅಭಿಮಾನಿಗಳು.. ಇದೀಗ ಮತ್ತೊಂದು ಸಂಕಷ್ಟ..!

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Hardik Pandya
Advertisment
Advertisment
Advertisment