/newsfirstlive-kannada/media/media_files/2025/10/08/bigg-boss-10-2025-10-08-14-29-21.jpg)
ಬೆಂಗಳೂರು: ಕಳೆದ ಎರಡು ದಿನಗಳಿಂದ ಬಿಗ್​ಬಾಸ್​ ಶೋ ಭಾರೀ ದೊಡ್ಡ ಮೊಟ್ಟದಲ್ಲಿ ಸುದ್ದಿ ಆಯಿತು. ಅದಕ್ಕೆ ಕಾರಣ ಜಾಲಿವುಡ್​ ಸ್ಟುಡಿಯೋಸ್​. ಜಾಲಿವುಡ್ ಮಾಡಿರುವ ಡೋಂಟ್ ಕೇರ್​ ನೀತಿಯಿಂದಾಗಿ ಬಿಗ್​ಬಾಸ್​ಗೂ ಕಂಟಕವಾಗಿತ್ತು.
ಬಿಗ್‌ಬಾಸ್ ಶೋ ನಡೀತಾ ಇದ್ದಿದ್ದು ರಾಮನಗರದಲ್ಲಿರೋ ಅಮ್ಯೂಸ್‌ಮೆಂಟ್ ಪಾರ್ಕ್ ಜಾಲಿವುಡ್ ಸ್ಟುಡಿಯೋ ಆವರಣದಲ್ಲಿ. ಆದ್ರೆ ಜಾಲಿವುಡ್‌ನವರು ಪರಿಸರ ಇಲಾಖೆಯ ನಿಯಮಗಳ ಉಲ್ಲಂಘನೆಯ ಆರೋಪ ಎದುರಿಸ್ತಿದ್ರು. ಗ್ರೀನ್​​ ಜೋನ್​​​ನಲ್ಲಿದ್ರೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ತ್ಯಾಜ್ಯ ನೀರನ್ನು ಸಂಸ್ಕರಣೆಯೇ ಮಾಡ್ತಿರ್ಲಿಲ್ಲ. ಹೀಗೆ ಪರಿಸರ ನಿಯಮ ಉಲ್ಲಂಘನೆ ಸಂಬಂಧಿತ ಹಲವು ಕಾರಣಗಳಿಗಾಗಿ ಒಂದು ವರ್ಷಕ್ಕಿಂತ ಹಿಂದೇನೇ ಜಾಲಿವುಡ್‌ಗೆ ನೋಟಿಸ್ ನೀಡಲಾಗಿತ್ತು. ಆದ್ರೆ ಯಾವುದೇ ನೋಟಿಸ್‌ಗೆ ಉತ್ತರಿಸದೆ ನಿರ್ಲಕ್ಷ್ಯ ಮಾಡಿದ ಹಿನ್ನೆಲೆ ನಿನ್ನೆ ರಾಮನಗರ ತಾಲೂಕು ಆಡಳಿತ ಜಾಲಿವುಡ್‌ನ ಸೀಲ್ ಮಾಡಿತ್ತು.
ಯಾಕೆಂದರೆ ಜಾಲಿವುಡ್​​​ಗೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟೀಸ್ ಕೊಡ್ತಿರೋದು ಇದೇ ಮೊದಲ್ಲ. ಪ್ರತಿಯೊಂದು ಹಂತದಲ್ಲೂ ಎಚ್ಚರಿಸಿದ್ರೂ ಯಾವುದೇ ಪ್ರಯೋಜ ಆಗಿರಲಿಲ್ಲ. ಒಟ್ಟು ಎಷ್ಟಯ ಬಾರಿ ನೋಟಿಸ್ ನೀಡಲಾಗಿತ್ತು ಅನ್ನೋದ್ರ ವಿವರ ಇಲ್ಲಿದೆ.
ನೋಟಿಸ್ ಟು ‘ಬಿಗ್’ ಲಾಕ್
ನೋಟಿಸ್ 01:
2024ರ ಏ.8ಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್
ನೋಟಿಸ್​ಗೆ ಜಾಲಿವುಡ್ ಸ್ಟುಡಿಯೋದಿಂದ ನೋ ರೆಸ್ಪಾನ್ಸ್​
ನೋಟಿಸ್ 02:
2024ರ ಜೂನ್ 12ಕ್ಕೆ ಮಂಡಳಿಯಿಂದ ಎರಡನೇ ನೋಟಿಸ್
2ನೇ ನೋಟಿಸ್​ಗೆ ಜಾಲಿವುಡ್ ಸ್ಟುಡಿಯೋ ಡೋಂಟ್ ಕೇರ್
ನೋಟಿಸ್ 03:
2025ರ ಜುಲೈ 18ಕ್ಕೆ ಜಾಲಿವುಡ್ ಸ್ಟುಡಿಯೋಗೆ 3ನೇ ನೋಟಿಸ್
3ನೇ ನೋಟಿಸ್​ಗೂ ಉತ್ತರ ನೀಡದ ಜಾಲಿವುಡ್ ಸ್ಟುಡಿಯೋ
ನೋಟಿಸ್ 04:
ಅಕ್ಟೋಬರ್ 6ಕ್ಕೆ ಮಾಲಿನ್ಯ ಮಂಡಳಿಯ ಕ್ಲೋಸಿಂಗ್ ನೋಟಿಸ್
ಅಕ್ಟೋಬರ್ 7ರಂದು ‘ಜಾಲಿ’ ಗೆ ಬ್ರೇಕ್ ಬಿಗ್​ಬಾಸ್ ಮನೆಗೆ ಬೀಗ
‘ಜಾಲಿ’ಗೆ ಬ್ರೇಕ್!
2025ರ ಜುಲೈ 31 ರಂದು ಬಿಡದಿ ಪೊಲೀಸರು ಮಾಲಿನ್ಯ ನಿಯಂತ್ರಣ ಮಂಡಳಿಗೆ ಪತ್ರ ಬರೆದಿದ್ದರು. ಸ್ಟುಡಿಯೋದಿಂದ ಕೊಳಚೆ ನೀರು ಅಕ್ಕ ಪಕ್ಕದ ಜಾಗಕ್ಕೆ ಬಿಟ್ಟು ಮಾಲಿನ್ಯ ಮಾಡಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು, ಸಂಘಟನೆಯಿಂದ ಠಾಣೆಗೆ ದೂರು ಬರ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಕೊಟ್ಟ NOC ಪತ್ರ ನೀಡುವಂತೆ ಮನವಿ ಮಾಡಿದ್ದರು.
ಇದನ್ನೂ ಓದಿ: ಸ್ನೇಹಿತ ಸೆಹ್ವಾಗ್​ ಪತ್ನಿ ಜೊತೆ ಬಿಸಿಸಿಐ ಅಧ್ಯಕ್ಷ ಮಿಥುನ್ ಅಫೇರ್..? ಏನಿದು ಕತೆ..?
ಬಿಡದಿ ಪೊಲೀಸರ ಪತ್ರಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಉತ್ತರ ನೀಡಿತ್ತು. 2025ರ ಆಗಸ್ಟ್ 8ರಂದು ಮಾಲಿನ್ಯ ಮಂಡಳಿಯಿಂದ ಪೊಲೀಸರಿಗೆ ಪತ್ರ ಬಂದಿದೆ. ಸ್ಟುಡಿಯೋ ಮತ್ತು ಪಾರ್ಕ್​ಗೆ ಯಾವುದೇ ನಿರಪೇಕ್ಷಣಾ ಪತ್ರವನ್ನ ನೀಡಿಲ್ಲ. ಈಗಾಗಲೇ ನೋಟಿಸ್ ನೀಡಿದ್ರೂ ಕೂಡ ಯಾವುದೇ ಕ್ರಮ ಆಗಿಲ್ಲ. ಆದ್ದರಿಂದ ಕಾನೂನಡಿ ಕ್ರಮ ಕೈಗೊಳ್ಳುವಂತೆ ಮಂಡಳಿಯಿಂದ ಪತ್ರ ಬರೆಯಲಾಗಿತ್ತು. ಅಕ್ಟೋಬರ್ 6 ರಂದು ಮಾಲಿನ್ಯ ಮಂಡಳಿಯ ಕ್ಲೋಸಿಂಗ್ ನೋಟಿಸ್ ನೀಡಲಾಯಿತು. ನೋಟಿಸ್ ಹಿನ್ನೆಲೆ ಅಕ್ಟೋಬರ್ 7ರಂದು ಬಿಗ್ ಬಾಸ್ ಮನೆಗೆ ಬೀಗ ಹಾಕಲಾಯಿತು. ಈ ಎಲ್ಲಾ ವಿಚಾರಗಳು ಬಿಗ್​ಬಾಸ್​ಗೆ ಗೊತ್ತೇ ಆಗಲಿಲ್ವಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ