/newsfirstlive-kannada/media/media_files/2025/10/09/rohit-sharma-1-2025-10-09-08-37-39.jpg)
ರೋಹಿತ್ ಶರ್ಮಾ, ಗೌತಮ್ ಗಂಭೀರ್ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಓಪನ್ ಸೀಕ್ರೆಟ್. ಆದ್ರೀಗ ರೋಹಿತ್ ಶರ್ಮಾ ಕಾರ್ಯಕ್ರಮದಲ್ಲಿ ಹೇಳಿದ ಒಂದೇ ಒಂದು ಮಾತು. ಅಸಮಾಧಾನದ ಹೊಗೆಯ ಕಿಡಿ ಆರಿಲ್ಲ ಎಂಬ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ.
2025ರ ಚಾಂಪಿಯನ್ಸ್​ ಟ್ರೋಫಿ.. ಮಾರ್ಚ್​ 9.. ಟೀಮ್ ಇಂಡಿಯಾ ಚಾಂಪುನ್ ಆಗಿ ಮರೆದಾಡಿದ ದಿನ.. 2023ರ ಏಕದಿನ ವಿಶ್ವಕಪ್ ಗೆಲ್ಲದಿದ್ದರೂ, ಕನಿಷ್ಠ ಚಾಂಪಿಯನ್ಸ್​ ಟ್ರೋಫಿಗಾದ್ರೂ ಮುತ್ತಿಟ್ಟಿದೆ ಎಂಬ ಸಮಾಧಾನ. ಅಜೇಯವಾಗಿ ಟ್ರೋಫಿಗೆ ಮುತ್ತಿಟ್ಟಿದ್ದ ಟೀಮ್ ಇಂಡಿಯಾ, ಟ್ರೋಫಿ ಬರ ನೀಗಿಸಿಕೊಂಡಿತ್ತು. ಟ್ರೋಫಿ ಗೆದ್ದ ರೋಹಿತ್ ಶರ್ಮಾ ಅಂಡ್ ಗೌತಮ್ ಗಂಭೀರ್​ ಜೋಡಿಗೆ ಕೋಟ್ಯಾಂತರ ಅಭಿಮಾನಿಗಳು ಮಾತ್ರವಲ್ಲ. ದಿಗ್ಗಜ ಆಟಗಾರರ ಬಹು ಪರಾಕ್ ಎಂದಿದ್ದರು. ಆದ್ರೀಗ ಇದೇ ಚಾಂಪಿಯನ್ಸ್​ ಟ್ರೋಫಿಯ ಸಕ್ಸಸ್ ಕ್ರೆಡಿಟ್ ರೋಹಿತ್ ಶರ್ಮಾ ಹಾಗೂ ಗೌತಮ್ ಗಂಭೀರ್​ ನಡುವಿನ ಮುಸುಕಿನ ಗುದ್ದಾಟ ಜಗಜ್ಜಾಹೀರಾಗುವಂತೆ ಮಾಡಿದೆ. ಇದಕ್ಕೆ ಕಾರಣ ರೋಹಿತ್ ಶರ್ಮಾರ ಈ ಒಂದು ಹೇಳಿಕೆ.
ಇದನ್ನೂ ಓದಿ: ದೀಪಾವಳಿಗೂ ಮುನ್ನವೇ ಪಟಾಕಿ ದುರಂತ.. ಪ್ರಾಣಬಿಟ್ಟ 7 ಕಾರ್ಮಿಕರು
ಟಿ20 ವಿಶ್ವಕಪ್ಗೆ ರಾಹುಲ್ ಭಾಯ್ ಪ್ಲಾನ್ ಮಾಡಿದ್ದರು. ಅವರ ಚಿಂತನೆ, ಪ್ಲ್ಯಾನ್ಗಳನ್ನೇ ನಾವು ಚಾಂಪಿಯನ್ಸ್ ಟ್ರೋಫಿಯಲ್ಲೂ ಅಳವಡಿಸಿದೆವು. 2023ರ ಏಕದಿನ ವಿಶ್ವಕಪ್ನ ಫೈನಲ್ನಲ್ಲಿ ಸೋತಿದ್ದೆವು. ರಾಹುಲ್ ದ್ರಾವಿಡ್ ಹಾಗೂ ನಾವು ಹೊಸ ಕೆಲಸದ ವಿಧಾನಕ್ಕೆ ಬದ್ಧವಾಗಿದ್ದವು. ಎಲ್ಲಾ ಆಟಗಾರರು ಈ ವಿಧಾನಕ್ಕೆ ಒಗ್ಗಿಕೊಂಡರು. ಇದರಿಂದ ಟಿ20 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಂತಾಯಿತು
-ರೋಹಿತ್ ಶರ್ಮಾ, ಟೀಂ ಇಂಡಿಯಾ ಆಟಗಾರ
ಗಂಭೀರ್​​ಗೆ ಕೌಂಟರ್.
ರೋಹಿತ್ ಶರ್ಮಾ, ಕೇವಲ ರಾಹುಲ್ ದ್ರಾವಿಡ್ ಬಗ್ಗೆ ಮಾತ್ರವೇ ಗುಣಗಾನ ಮಾಡಲಿಲ್ಲ. ರಾಹುಲ್ ದ್ರಾವಿಡ್ ಪ್ಲಾನ್​ಗಳ ಜೊತೆಗೆ ಟೀಮ್ ಇಂಡಿಯಾದ ಹಲವು ವರ್ಷಗಳ ಶ್ರಮವನ್ನು ಒತ್ತಿ ಹೇಳಿದ್ದರು. ಆ ಮೂಲಕ ಆಗತಾನೇ ಟೀಮ್ ಇಂಡಿಯಾದ ಹೆಡ್​ ಕೋಚ್ ಆಗಿ ಬಂದ ಗೌತಮ್ ಗಂಭೀರ್​​​, ಕಾಣಿಕೆ ಏನಿಲ್ಲ ಎಂಬ ಕೌಂಟರ್ ನೀಡಿದರು.
ನಾನು ಆ ತಂಡವನ್ನು ಪ್ರೀತಿಸುತ್ತೇನೆ. ಅವರೊಂದಿಗೆ ಆಡಲು ಇಷ್ಟ ಪಡುತ್ತೇನೆ. ಈ ಜರ್ನಿಯಲ್ಲಿ ನಾವು ಹಲವು ವರ್ಷಗಳಿಂದ ತಂಡದ ಭಾಗವಾಗಿದ್ದೇನೆ. ಇದು ಒಂದು, ಎರಡು ವರ್ಷಗಳ ಕೆಲಸ ಅಲ್ಲ. ಹಲವು ವರ್ಷಗಳು ಕೆಲಸ ಮಾಡಿದ್ದೇವೆ. ಹಲವು ಬಾರಿ ಟ್ರೋಫಿ ಗೆಲ್ಲುವ ಹತ್ತಿರ ಬಂದೆವು. ಅಂತಿಮ ಹಂತ ದಾಟಲು ಸಾಧ್ಯವಾಗಲಿಲ್ಲ. ಆಗ ನಾವು ವಿಭಿನ್ನವಾದದ್ದನ್ನು ಪ್ರಯತ್ನಿಸಬೇಕು ಎಂದು ಅರಿತುಕೊಂಡೆವು. ಅದಕ್ಕೆ ಎರಡು ಹಾದಿಗಳಿವೆ ಎಂಬುದನ್ನು ಕಂಡುಕೊಂಡೆವು, ಮೊದಲನೇಯದು ಏನನ್ನಾದರೂ ಮಾಡುವ ಆಲೋಚನೆ, ಎರಡನೇಯದು ನಿಜವಾಗಿಯೂ ಮಾಡುವುದು. ಇದು ಒಬ್ಬ ಅಥವಾ ಇಬ್ಬರು ಆಟಗಾರರಿಂದ ಮಾಡಲು ಸಾಧ್ಯವಿಲ್ಲ ಎಂಬುದು ಗೊತ್ತಿತ್ತು. ಪ್ರತಿಯೊಬ್ಬರೂ ಆ ದೃಷ್ಟಿಕೋನವನ್ನ ಒಪ್ಪಿಕೊಳ್ಳಬೇಕಾಗಿತ್ತು. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಿದ್ದ ಎಲ್ಲಾ ಆಟಗಾರರು ಆ ಮನಸ್ಥಿತಿಯನ್ನು ಬೆಳೆಸಿಕೊಂಡರು. ಪಂದ್ಯಗಳನ್ನು ಹೇಗೆ ಗೆಲ್ಲುವುದು, ನಮ್ಮನ್ನು ನಾವು ಹೇಗೆ ಸವಾಲಿಗೆ ಒಡ್ಡುವುದು, ಯಾವುದನ್ನೂ ಹಗುರವಾಗಿ ಪರಿಗಣಿಸದಿರುವುದು ಹೇಗೆ ಎಂಬುದರ ಬಗ್ಗೆ ಚರ್ಚಿಸಿದೆವು. ನಾವು ಪ್ರತಿ ಪಂದ್ಯದಲ್ಲೂ ಆ ಗುಣಗಳನ್ನ ತರುವತ್ತ ಗಮನಹರಿಸಿದೆವು
-ರೋಹಿತ್ ಶರ್ಮಾ, ಟೀಂ ಇಂಡಿಯಾ ಆಟಗಾರ
ಇದನ್ನೂ ಓದಿ: SRH ಕ್ಯಾಪ್ಟನ್​, ಸ್ಫೋಟಕ ಬ್ಯಾಟರ್​ಗೆ ಬಿಗ್ ಆಫರ್.. ವರ್ಷಕ್ಕೆ 58 ಕೋಟಿ ರೂಪಾಯಿ!
ಏಕದಿನ ನಾಯಕತ್ವದಿಂದ ಕೊಕ್
ರೋಹಿತ್ ಶರ್ಮಾರ ಈ ಒಂದು ಹೇಳಿಕೆಯೇ ಈ ಎರಡು ಪ್ರಶ್ನೆಗಳನ್ನು ಉದ್ಭವಿಸಿದೆ. ಇದಕ್ಕೆ ಕಾರಣ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದೊಂದು. ಮತ್ತೊಂದು ಏಕದಿನ ನಾಯಕತ್ವದಿಂದ ಕೊಕ್ ನೀಡಿದ್ದು.. ಈ ಎರಡು ಘಟನೆಗಳಿಂದಲೇ ರೋಹಿತ್ ಶರ್ಮಾ, ಚಾಂಪಿಯನ್ಸ್​ ಟ್ರೋಫಿಯ ಗೆಲುವಿನ ಕ್ರೆಡಿಟ್ ದ್ರಾವಿಡ್​ಗೆ ನೀಡಿದ್ರಾ ಎಂಬ ಪ್ರಶ್ನೆ ಹುಟ್ಟಿಹಾಕೊಂಡಿದೆ. ಗೆಲುವಿನ ಕ್ರೆಡಿಟ್ ರಾಹುಲ್​ಗೆ ದ್ರಾವಿಡ್​ಗೆ ನೀಡಿದ್ದು ಸರಿ ಇದೆ. 2023ರ ಏಕದಿನ ವಿಶ್ವಕಪ್​​ ತಂಡವನ್ನೇ ಚಾಂಫಿಯನ್ಸ್​ ಟ್ರೋಫಿಯಲ್ಲೂ ಮುಂದುವರಿಸಲಾಗಿತ್ತು. ಆದ್ರೆ, ಈ ಏಕದಿನ ತಂಡವನ್ನ ಬಹು ವರ್ಷಗಳಿಂದ ಕಟ್ಟಿದ್ದು ದ್ರಾವಿಡ್ ಅನ್ನೋದು ಅಲ್ಲೆಗೆಳೆಯುವಂತಿಲ್ಲ. ಇದೇ ಕಾರಣಕ್ಕೆ ರೋಹಿತ್​, ದ್ರಾವಿಡ್​ಗೆ ಕ್ರೆಡಿಟ್ ನೀಡಿದರ ಹಿಂದಿನ ಮರ್ಮ.
ಒಟ್ನಲ್ಲಿ.. ರೋಹಿತ್ ಶರ್ಮಾ ಹಾಗೂ ಗೌತಮ್ ಗಂಭೀರ್ ನಡುವೆ ಮುನಿಸಿರಬಹುದು. ರಾಹುಲ್ ದ್ರಾವಿಡ್ ಕಟ್ಟಿದ ವಿನ್ನಿಂಗ್ ಟೀಮ್ ಕಾಂಬಿನೇಷನ್, ರೂಪುರೇಷಗಳೇ ಗೆಲುವಿನ ಮಂತ್ರವಾಗಿತ್ತು ಅನ್ನೋದು ನೂರಕ್ಕೆ ನೂರರಷ್ಟು ಸತ್ಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ