Advertisment

ಕ್ರಿಕೆಟ್​ನಲ್ಲೂ ರಾಜಕೀಯ​; ಟೀಮ್ ಇಂಡಿಯಾಗೆ ಗಂಭೀರ್​​​ ಎಂಟ್ರಿ.. ಸ್ಟಾರ್​ ಪ್ಲೇಯರ್ಸ್​​ಗೆ ಗೇಟ್​ಪಾಸ್​.!

ಯಶಸ್ವಿ ಜೈಸ್ವಾಲ್​​​ ಟಿ20 ತಂಡದಲ್ಲಿ ಇರಬೇಕು ಎಂದು ನಾನು ನಂಬುತ್ತೇನೆ. ಕೇವಲ ಒಂದು ಟೂರ್ನಮೆಂಟ್‌ಗೆ ಅಲ್ಲ. ಮುಂದಿನ ವಿಶ್ವಕಪ್‌ಗೂ ಸಹ ಇರಬೇಕು. ಜೈಸ್ವಾಲ್​ ಮೂರು ಫಾರ್ಮೆಟ್​​ನಲ್ಲಿ ಟೀಮ್ ಇಂಡಿಯಾಕ್ಕೆ ಆಡಬೇಕು.

author-image
Bhimappa
ROHIT_KOHLI
Advertisment

ಟೀಮ್​ ಇಂಡಿಯಾದಲ್ಲಿ ಆನ್​ಫೀಲ್ಡ್​ ಆಟಕ್ಕಿಂತ, ರಾಜಕೀಯದ ಆಟವೇ ಜೋರಾಗಿ ನಡೆಯುತ್ತೆ ಅನ್ನೋ ಆರೋಪ ಮೊದಲದಿಂದಲೂ ಇದೆ. ಆಟಗಾರರ ಆಯ್ಕೆ ವಿಚಾರದಲ್ಲಂತೂ ಈ ಆರೋಪ ಪದೇ ಪದೇ ಕೇಳಿ ಬರ್ತಿದೆ. ಗೌತಮ್​ ಗಂಭೀರ್​ ಹೆಡ್​ಕೋಚ್​ ಆದ ಬಳಿಕ ಫೇವರಿಸಮ್​ನ ಸದ್ದು ಜೋರಾಗಿದೆ. ಹೆಡ್​​ಕೋಚ್​ ಗಂಭೀರ್​ ಈಗ ಟೀಮ್​ ಇಂಡಿಯಾಗೆ ರಿಯಲ್​ ಬಾಸ್​ ಆಗ್ಬಿಟ್ಟಿದ್ದಾರೆ. ಗಂಭೀರ್​ ಆಡಿಸಿದಂತೆ ಸೆಲೆಕ್ಟರ್ಸ್​ ಆಡ್ತಿದ್ದಾರೆ. 

Advertisment

ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್​ ಇಂಡಿಯಾ ಅನೌನ್ಸ್​ಮೆಂಟ್​ ಆಗಿ ಹಲವು ದಿನಗಳೇ ಆದ್ವು. ಆದ್ರೆ, ಈ ಸೆಲೆಕ್ಷನ್​ ಕುರಿತ ಚರ್ಚೆ ಮಾತ್ರ ನಿಂತಿಲ್ಲ. ಇದಕ್ಕೆ ಕಾರಣ ಗೌತಮ್​ ಗಂಭೀರ್​​ ರಾಜಕೀಯ. ಸದ್ಯ ಟೀಮ್​ ಇಂಡಿಯಾದಲ್ಲಿ ಪವರ್​​ ಫುಲ್ ಪರ್ಸನ್​ ಗೌತಮ್​ ಗಂಭೀರ್ ಆಡಿದ್ದೇ ಆಟ. ಟೀಮ್​ ಸೆಲೆಕ್ಷನ್​ ವಿಚಾರದಲ್ಲಂತೂ ಹೆಡ್​ಕೋಚ್​​​ ಹೇಳಿದ ಮಾತೇ ಫೈನಲ್​​. ಆಸಿಸ್​ ಪ್ರವಾಸಕ್ಕೆ ಮಾಡಿರೋ ಟೀಮ್​ ಸೆಲೆಕ್ಷನ್​ ಗಂಭೀರ್​ ರಾಜಕೀಯದಾಟವನ್ನ ಮತ್ತೆ ಬಟಾಬಯಲು ಮಾಡಿದೆ.

gautam_gambhir (2)

ಅಟ್ಟರ್​​ಫ್ಲಾಪ್​ ಶೋ ನೀಡಿದ್ರೂ ರಾಣಾಗೆ ಸ್ಥಾನ.!

ಗಂಭೀರ್​​ ಕೃಪಾಕಟಾಕ್ಷ ಇದ್ರೆ ಏನ್​ ಬೇಕಾದ್ರೂ ಆಗುತ್ತೆ ಅನ್ನೋದಕ್ಕೆ ಹರ್ಷಿತ್​ ರಾಣಾ ಸೆಲೆಕ್ಷನ್​ ಬೆಸ್ಟ್​ ಎಕ್ಸಾಂಪಲ್​. ಕಳೆದ ಏಷ್ಯಾಕಪ್​ ಟೂರ್ನಿಯಲ್ಲಿ ಹರ್ಷಿತ್​ ರಾಣಾ ಹೀನಾಯ ಪರ್ಫಾಮೆನ್ಸ್​ ನೀಡಿದರು. ಟಿ20ಯಲ್ಲಿ ಬರೋಬ್ಬರಿ 10.18ರ ಎಕಾನಮಿ ಹೊಂದಿರೂ ರಾಣಾ, ಏಕದಿನದಲ್ಲೂ ಪರ್ಫಾಮ್​​ ಮಾಡೋಕೆ ತಿಣುಕಾಡ್ತಿದ್ದಾರೆ. ಆದ್ರೆ, ಈ ರಾಣಾನ ಏಕದಿನ ಹಾಗೂ ಟಿ20 ಎರಡೂ ತಂಡಗಳಿಗೆ ಸೆಲೆಕ್ಟ್​ ಮಾಡಲಾಗಿದೆ. ಪರ್ಫಾಮೆನ್ಸ್​ ನೀಡದಿದ್ರೂ ತಂಡದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಳ್ತಿರೋ ರಾಣಾ ಟೀಮ್​ ಇಂಡಿಯಾದ ಆಲ್​​​ಫಾರ್ಮೆಟ್​ ಪ್ಲೇಯರ್​​ ಆಗಿ ಬಿಟ್ಟಿದ್ದಾನೆ. ಆದ್ರೆ, ಪರ್ಫಾಮ್​ ಮಾಡಿದವರಿಗೆ ಮಾತ್ರ ಗೇಟ್​ಪಾಸ್ ಸಿಕ್ಕಿದೆ. 

ಟೀಮ್​ ಇಂಡಿಯಾಗೆ ಗಂಭೀರ್​ ಎಂಟ್ರಿ.. ಆಟಗಾರರ ಎಕ್ಸಿಟ್​​.!

ಯಶಸ್ವಿ ಜೈಸ್ವಾಲ್​​​ ಟಿ20 ತಂಡದಲ್ಲಿ ಇರಬೇಕು ಎಂದು ನಾನು ನಂಬುತ್ತೇನೆ. ಕೇವಲ ಒಂದು ಟೂರ್ನಮೆಂಟ್‌ಗೆ ಅಲ್ಲ. ಮುಂದಿನ ವಿಶ್ವಕಪ್‌ಗೂ ಸಹ ಇರಬೇಕು. ಜೈಸ್ವಾಲ್​ ಮೂರು ಫಾರ್ಮೆಟ್​​ನಲ್ಲಿ ಟೀಮ್ ಇಂಡಿಯಾಕ್ಕೆ ಆಡಬೇಕು.

Advertisment

ಹೆಡ್​ಕೋಚ್​​ ಪಟ್ಟವೇರೋ ಮುನ್ನ ಸ್ವತಃ ಗೌತಮ್​ ಗಂಭೀರ್​​ ಹೇಳಿದ್ದ ಮಾತುಗಳಿವು. ಆದ್ರೆ, ಈಗ ಏನಾಗಿದೆ.? ಯಶಸ್ವಿ ಜೈಸ್ವಾಲ್​ಗೆ ಟಿ20 ತಂಡದಲ್ಲಿ ಸ್ಥಾನವೇ ಇಲ್ಲದಂತಾಗಿದೆ. ಇಷ್ಟೇ ಅಲ್ಲ, ಏಷ್ಯಾಕಪ್​ ತಂಡದಲ್ಲೂ ಸ್ಥಾನ ಸಿಗಲಿಲ್ಲ. ಆಸಿಸ್​ ಪ್ರವಾಸದ ತಂಡದಲ್ಲೂ ಜೈಸ್ವಾಲ್​ ಇಲ್ಲ.

ನೀವು ಹಾಲಿ ಹೆಡ್​​ಕೋಚ್​ ಗೌತಮ್​ ಗಂಭೀರ್​ ಹಳೆಯ ವಿಡಿಯೋಗಳನ್ನ ನೋಡಿದ್ರೆ, ಯಶಸ್ವಿ ಜೈಸ್ವಾಲ್​ ಯಾವುದೇ ಸಂದರ್ಭಲ್ಲಾದ್ರೂ ಇಂಡಿಯನ್ T20​ ಟೀಮ್​ಗೆ ಬರ್ತಾರೆ. ಆತನನ್ನ ಟಿ20 ತಂಡದಗಿಂದ ಹೊರಗಿಡಲು ಸಾಧ್ಯವಿಲ್ಲ ಎಂದಿದ್ದರು. ಈಗ ಅವರೇ ಕೋಚ್​ ಆಗಿದ್ದಾರೆ. ಆದ್ರೆ, ಜೈಸ್ವಾಲ್​ಗೆ ಜಾಗವಿಲ್ಲ. 

ಮನೋಜ್​ ತಿವಾರಿ. ಮಾಜಿ ಕ್ರಿಕೆಟಿಗ

T20ಯಿಂದ ಶ್ರೇಯಸ್ ಅಯ್ಯರ್​​​​ ಔಟ್​.! 

ಗಂಭೀರ್​​ ರಾಜಕೀಯದಾಟಕ್ಕೆ ಬಲಿಯಾದ ಮತ್ತೊಬ್ಬ ಕ್ರಿಕೆಟಿಗ ಶ್ರೇಯಸ್​ ಅಯ್ಯರ್​. 2024ರ ಐಪಿಎಲ್​ ವಿನ್ನಿಂಗ್​ ಕ್ಯಾಪ್ಟನ್​, 2025ರಲ್ಲಿ ತಂಡವನ್ನ ರನ್ನರ್​ಅಪ್​ ಮಾಡಿದ ಕ್ಯಾಪ್ಟನ್​. ಟಿ20 ಫಾರ್ಮೆಟ್​​ನಲ್ಲಿ ಸಾಲಿಡ್​ ರೆಕಾರ್ಡ್​ ಹೊಂದಿದ್ರೂ, ಗಂಭೀರ್​ ಕೋಚ್​ ಆದ ಬಳಿಕ ಶ್ರೇಯಸ್​ ಅಯ್ಯರ್​ಗೆ ತಂಡದಲ್ಲಿ ಸ್ಥಾನವೇ ಇಲ್ಲದಂತಾಗಿದೆ. 2024ರ ಐಪಿಎಲ್​ ಗೆದ್ದಾದ ಬಳಿಕ ಸಂಪೂರ್ಣ ಕ್ರೆಡಿಟ್​ ಗಂಭೀರ್​ಗೆ ಹೋಗಿತ್ತು. ​ನನಗೆ ಕ್ರೆಡಿಟ್​ ಸಿಗಲಿಲ್ಲ ಎಂದು ಶ್ರೇಯಸ್​ ಸಿಡಿದೆದ್ದಿದ್ರು. ಆ ದ್ವೇಷದ ಕಾರಣದಿಂದಲೇ ಶ್ರೇಯಸ್​ಗೆ ಸ್ಥಾನ ಸಿಕ್ಕಿಲ್ಲ ಅನ್ನೋದು ಕ್ರಿಕೆಟ್​ ವಲಯದ ಟಾಕ್.!

Advertisment

ಫಿನಿಶರ್​​ ರಿಂಕು ಸಿಂಗ್​ ಬೆಂಚ್​ಗೆ ಫಿಕ್ಸ್​.!

ರಿಂಕು ಸಿಂಗ್​.. ಟೀಮ್​ ಇಂಡಿಯಾಗೆ ಸಿಕ್ಕ ನಯಾ ಫಿನಿಶರ್​. ಕಳೆದ ಕೆಲ ತಿಂಗಳ ಹಿಂದೆ ರಿಂಕು ಸಿಂಗ್​ಗೆ ಟೀಮ್​ ಇಂಡಿಯಾದ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಫಿಕ್ಸ್​ ಆಗಿತ್ತು. ಆದ್ರೆ, ಗಂಭೀರ್​ ಕೋಚ್​ ಆದ ಮೇಲೆ ತಂಡದಲ್ಲಿ ಸ್ಥಾನ ಸಿಗ್ತಿದೆ. ಆದ್ರೆ, ಬೆಂಚ್​ ಕಾಯೋದು ಖಾಯಂ ಆಗಿದೆ. 

ಸದ್ದಿಲ್ಲದೆ ಟೀಮ್​ ಇಂಡಿಯಾದಿಂದ ಸೀನಿಯರ್ಸ್​​ ಸೈಡ್​ಲೈನ್​.! 

ಕೊಹ್ಲಿ, ರೋಹಿತ್​ ತಂಡದಿಂದ ಡ್ರಾಪ್​ ಮಾಡೋದ್ರ ಬಗ್ಗೆಯೇ ಹೆಚ್ಚು ಚರ್ಚೆಯಾಗ್ತಿದೆ. ಆದ್ರೆ, ಇವರ ಹೊರತಾಗಿ ಇನ್ನು ಹಲವು ಸೀನಿಯರ್ಸ್​ನ ಸೈಲೆಂಟಾಗಿ ಸೈಡ್​​ಲೈನ್​ ಮಾಡಲಾಗ್ತಿದೆ. ಮೊಹ್ಮಮದ್​ ಶಮಿ ಕಳೆದೆ ಹೋಗಿದ್ದಾರೆ. ರವೀಂದ್ರ ಜಡೇಜಾನ ಒನ್​ ಡೇ ತಂಡದಿಂದ ಡ್ರಾಪ್​ ಮಾಡಲಾಗಿದೆ. ಆಸಿಸ್​ ಪ್ರವಾಸದ ಮಧ್ಯೆಯೇ ಅಶ್ವಿನ್​ ರಿಟೈರ್​ ಆಗಿದ್ದೂ ಆಗಿದೆ. ಹೀಗೆ ಸೀನಿಯರ್ಸ್​ನ ಸೈಡ್​ಲೈನ್​ ಮಾಡ್ತಿರೋದು ಗಂಭೀರ್​ ಪ್ಲಾನ್​ ಅಂತೆ. ಅದ್ಯಾಕೆ ಅನ್ನೋದನ್ನ ಮಾಜಿ ಕ್ರಿಕೆಟಿಗ ಮನೋಜ್​ ತಿವಾರಿ ಹೇಳಿದ್ದಾರೆ ಕೇಳಿ. 

ಇದನ್ನೂ ಓದಿ: ಭಯದಲ್ಲಿ ವಿಜಯ್ ಹಜಾರೆ ಟ್ರೋಫಿ ಆಡ್ತಾರಾ ಕೊಹ್ಲಿ, ರೋಹಿತ್.. ಬಿಗ್ ಸ್ಟಾರ್ಸ್​ಗೆ ಲೈಫ್​ಲೈನ್!

Advertisment

ಟೀಮ್​​ ಇಂಡಿಯಾಗೆ ಸಿಕ್ಕೇಬಿಟ್ರು ಹೊಸ ಕೋಚ್​​​.. ಗೌತಮ್​​ ಗಂಭೀರ್​​​​ಗೆ ಏನಾಯ್ತು?

ತಂಡದಲ್ಲಿ ಸೀನಿಯರ್​ ಆಟಗಾರರು ಅಂದ್ರೆ, ಅಶ್ವಿನ್​, ರೋಹಿತ್​, ವಿರಾಟ್​ ಇವರು ತುಂಬಾ ಕ್ರಿಕೆಟ್​​ ಆಡಿದವರು. ಹೆಡ್​ಕೋಚ್​ ಹಾಗೂ ಉಳಿದ ಸಪೋರ್ಟ್​ ಸ್ಟಾಫ್​ಗಿಂತ ಹೆಚ್ಚು ಆಡಿದವರು. ಇವರು ತಂಡದಲ್ಲಿದ್ರೆ, ಯಾವುದೆ ವಿಚಾರ ಇಷ್ಟವಾಗದಿದ್ರೂ ಅದನ್ನ ಇವ್ರು ಪ್ರಶ್ನೆ ಮಾಡ್ತಾರೆ. ಹೀಗಾಗಿ ಇವರು ತಂಡದಲ್ಲಿ ಇರದಂತೆ ಮಾಡಿದ್ದಾರೆ. 

ಮನೋಜ್​ ತಿವಾರಿ. ಮಾಜಿ ಕ್ರಿಕೆಟಿಗ

ಕ್ರಿಕೆಟ್​ನಿಂದ ರಿಟೈರ್​ ಆಗಿದ್ರೂ, ಟೀಮ್​ ಇಂಡಿಯಾದಲ್ಲಿ ಗೌತಮ್​ ಗಂಭೀರ್​ ಆಟವೇ ಜೋರಾಗಿದೆ. ಬಿಸಿಸಿಐ ಬಾಸ್​​ಗಳು ಕೂಡ ಗಂಭೀರ್​ಗೆ ಪರಮಾಧಿಕಾರ ನೀಡಿ ಸೈಲೆಂಟಾಗಿ ಕುಳಿತಿದ್ದಾರೆ. ಈ ಆಟ ಎಲ್ಲಿವರೆಗೆ ಹೀಗೆ ಮುಂದುವರೆಯುತ್ತೆ ಕಾದು ನೋಡೋಣ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Advertisment
Virat Kohli Gautam Gambhir
Advertisment
Advertisment
Advertisment