ಸಿರಿಯಾ ಐಸಿಸ್ ನೆಲೆಗಳ ಮೇಲೆ ಅಮೆರಿಕ ಏರ್‌ಸ್ಟ್ರೈಕ್..‌ 35ಕ್ಕೂ ಹೆಚ್ಚು ಉಗ್ರರ ನೆಲೆಗಳು ಪುಡಿಪುಡಿ..!

ಸಿರಿಯಾದಲ್ಲಿರುವ ಐಸಿಸ್ ವಿರುದ್ಧ ಅಮೆರಿಕ, ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದೆ. CENTCOM ಆಪರೇಷನ್ ಹಾಕೈ ಸ್ಟ್ರೈಕ್ ಅಡಿಯಲ್ಲಿ 35 ಕ್ಕೂ ಹೆಚ್ಚು ಭಯೋತ್ಪಾದಕ ನೆಲೆಗಳ ಮೇಲೆ ಏರ್‌ಸ್ಟ್ರೈಕ್‌ ನಡೆಸಿದೆ.

author-image
Ganesh Kerekuli
Hawkeye Strike (1)
Advertisment

ಸಿರಿಯಾದಲ್ಲಿರುವ ಐಸಿಸ್ ವಿರುದ್ಧ ಅಮೆರಿಕ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿದೆ. CENTCOM ಆಪರೇಷನ್ ಹಾಕೈ ಸ್ಟ್ರೈಕ್ ಅಡಿಯಲ್ಲಿ 35 ಕ್ಕೂ ಹೆಚ್ಚು ಭಯೋತ್ಪಾದಕ ನೆಲೆಗಳ ಮೇಲೆ ಏರ್‌ಸ್ಟ್ರೈಕ್‌ ನಡೆಸಿದೆ. 

ಸಿರಿಯಾದಲ್ಲಿ ಕಾರ್ಯನಿರ್ವಹಿಸ್ತಿರುವ ಉಗ್ರರ ಜಾಲವನ್ನು ಮಟ್ಟ ಹಾಕಲು ಅಮೆರಿಕದ ಕೇಂದ್ರೀಯ ಕಮಾಂಡ್ ಅಟ್ಯಾಕ್‌ ಮಾಡಿದೆ.  ಸಿರಿಯಾದಲ್ಲಿನ ಅನೇಕ ಇಸ್ಲಾಮಿಕ್ ಸ್ಟೇಟ್ (ISIS) ನೆಲಗಳು ಪುಡಿಪುಡಿ ಆಗಿವೆ. ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕದ ಕೇಂದ್ರೀಯ ಕಮಾಂಡ್, ಅಮೆರಿಕ ಕಾಲಮಾನದ ಪ್ರಕಾರ ಸುಮಾರು ಮಧ್ಯಾಹ್ನ 12:30 ಕ್ಕೆ ದಾಳಿಗಳು ನಡೆದಿವೆ. ಈ ದಾಳಿಗಳು ಸಿರಿಯಾದ ವಿವಿಧ ಪ್ರದೇಶಗಳಲ್ಲಿನ ISIS ನೆಲೆಗಳನ್ನು ಗುರಿಯಾಗಿಸಿಕೊಂಡಿವೆ. 90ಕ್ಕೂ ಹೆಚ್ಚು ಆಯುಧಗಳನ್ನು ಬಳಸಿ ಉಗ್ರರ ನೆಲೆಗಳನ್ನು ಉಡೀಸ್‌ ಮಾಡಲಾಗಿದೆ ಎಂದು ವರದಿಯಾಗಿದೆ. 

ಭಯೋತ್ಪಾದನೆ ವಿರುದ್ಧ ಸಂದೇಶ

ಇವತ್ತಿನ ದಾಳಿ ಭಯೋತ್ಪಾದನೆ ವಿರುದ್ಧ. ಅಮೆರಿಕ ಭಯೋತ್ಪಾದನೆ ವಿರುದ್ಧ ಹೋರಾಡಲು ಬದ್ಧವಾಗಿದೆ. ಭಯೋತ್ಪಾದನೆ ವಿರುದ್ಧ ನಿರಂತರವಾಗಿ ಹೋರಾಟ ಮಾಡ್ತಿದೆ.  US ಪಡೆಗಳು ಮತ್ತು ಮಿತ್ರ ಪಡೆಗಳ ಮೇಲಿನ ಭಯೋತ್ಪಾದಕ ದಾಳಿಗಳನ್ನು ತಡೆಗಟ್ಟುವುದು ನಮ್ಮ ಉದ್ದೇಶ. ಭವಿಷ್ಯದ ಬೆದರಿಕೆಗಳನ್ನು ಮೆಟ್ಟಿ ನಿಲ್ಲೋದು, ಈ ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸುವುದೇ ಇವತ್ತಿನ ದಾಳಿಯ ಟಾರ್ಗೆಟ್‌ ಆಗಿತ್ತು. ನಮ್ಮ ಪಡೆಗಳಿಗೆ ಹಾನಿ ಮಾಡಲು ಪ್ರಯತ್ನಿಸುವ ಯಾರೇ ಆದರೂ, ಎಲ್ಲಿಯೇ ಇದ್ದರೂ ಹೊಸಕಿ ಹಾಕುತ್ತೇವೆ ಎಂದು CENTCOM  ಎಚ್ಚರಿಕೆ ನೀಡಿದೆ. 

Hawkeye Strike

ಪಾಲ್ಮಿರಾ ದಾಳಿಗೆ ಪ್ರತಿಯಾಗಿ ಕಾರ್ಯಾಚರಣೆ 

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ದೇಶನದ ಮೇರೆಗೆ ಡಿಸೆಂಬರ್ 19, 2025 ರಂದು ಆಪರೇಷನ್ ಹಾಕಿ ಸ್ಟ್ರೈಕ್ ಅನ್ನು ಪ್ರಾರಂಭಿಸಲಾಯಿತು. ಡಿಸೆಂಬರ್ 13, 2025 ರಂದು ಸಿರಿಯಾದ ಪಾಲ್ಮಿರಾದಲ್ಲಿ ಐಸಿಸ್ ದಾಳಿ ನಡೆದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಇದರಲ್ಲಿ ಇಬ್ಬರು ಅಮೇರಿಕನ್ ಸೈನಿಕರು ಮತ್ತು ಒಬ್ಬ ಅಮೇರಿಕನ್ ನಾಗರಿಕ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಸೀರಿಯಲ್‌ಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಸ್ಪರ್ಧಿ ಸೂರಜ್ ಸಿಂಗ್..! Video

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  

US military operation Operation Haki Strike
Advertisment