/newsfirstlive-kannada/media/media_files/2025/10/19/trump-2025-10-19-14-19-00.jpg)
ಬೃಹತ್​ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಶಂಕಿತ ಸಬ್​​ಮರೀನ್​ ಅನ್ನು ಸಮುದ್ರದಲ್ಲಿ ಹೊಡೆದುರುಳಿಸಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರು ಹೇಳಿದ್ದಾರೆ. ಇದು ಕೆರಿಬಿಯನ್​ನ ಕಳ್ಳಮಾರ್ಗದ ಮೂಲಕ ಸಾಗುವಾಗ ಅಮೆರಿಕನ್ ಸೇನೆ ದಾಳಿ ಮಾಡಿ ನಾಶಗೊಳಿಸಿದೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಸಮೇತ ಪೋಸ್ಟ್ ಶೇರ್ ಮಾಡಿರುವ ಡೊನಾಲ್ಡ್​ ಟ್ರಂಪ್ ಅವರು, ದೊಡ್ಡ ಪ್ರಮಾಣದಲ್ಲಿ ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಜಲಾಂತರ್ಗಾಮಿ ನೌಕೆಯನ್ನು ಹೊಡೆದುರುಳಿಸಿರುವುದು ನಮಗೆ ಯಶಸ್ಸು ಸಿಕ್ಕಿದೆ. ಈ ಜಲಾಂತರ್ಗಾಮಿ ನೌಕೆಯಲ್ಲಿ ಫೆಂಟನಿಲ್ ಸೇರಿದಂತೆ ಅನೇಕ ಮಾದಕವಸ್ತುಗಳು ಇದ್ದವು. ಅಮೆರಿಕ ಕಡೆಗೆ ಬರುವಾಗ ದಾಳಿ ಮಾಡಿ ಹೊಡೆದುರುಳಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೀಪಾವಳಿ ಧಮಾಕ.. ಆಭರಣ ಪ್ರಿಯರಿಗೆ ಗುಡ್​ನ್ಯೂಸ್​, ಬೆಲೆಯಲ್ಲಿ ಭಾರೀ ಇಳಿಕೆ ಕಂಡ ಚಿನ್ನ!
ಈ ಘಟನೆಯಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಇಬ್ಬರು ಭಯೋತ್ಪಾದಕರು ಜೀವ ಕಳೆದುಕೊಂಡಿದ್ದು ಇನ್ನಿಬ್ಬರನ್ನು ಜೀವಂತವಾಗಿ ಸೆರೆಹಿಡಿಯಲಾಗಿದೆ. ಇವರನ್ನು ತೀವ್ರ ವಿಚಾರಣೆಯ ನಂತರ ಅವರ ದೇಶಕ್ಕೆ ಕಳುಹಿಸಿಕೊಡಲಾಗುವುದು. ಜಲಾಂತರ್ಗಾಮಿ ನೌಕೆಯಲ್ಲಿ ಭಾರೀ ಪ್ರಮಾಣದಲ್ಲಿ ಡ್ರಗ್ ಇದ್ದು ಇದನ್ನು ನಾಶಪಡಿಸಿದ್ದರಿಂದ 25,000 ಅಮೆರಿಕನ್ ಜನರ ಜೀವ ಉಳಿಸಿದ್ದೇನೆ ಎಂದು ಟ್ರಂಪ್ ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಈ ದಾಳಿಯಲ್ಲಿ ಅಮೆರಿಕನ್ ಸೇನೆಗೆ ಯಾವುದೇ ಹಾನಿಯಾಗಿಲ್ಲ. ನನ್ನ ಕಣ್ಣುಗಳ ಎದುರಿಗೆ ಭೂಮಿ ಅಥವಾ ಸಮುದ್ರದ ಮೂಲಕ ಅಕ್ರಮವಾಗಿ ಮಾದಕವಸ್ತುಗಳನ್ನು ಸಾಗಣೆ ಮಾಡಲು ಬಿಡುವುದಿಲ್ಲ. ಇಂತಹ ಭಯೋತ್ಪಾದನೆಯನ್ನು ಯುನೈಟೆಡ್​ ಸ್ಟೇಟ್ಸ್​ ಆಫ್ ಅಮೆರಿಕ ಸಹಿಸುವುದಿಲ್ಲ ಎಂದು ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ. ಸೆಪ್ಟೆಂಬರ್​​ನಿಂದ ಈವರೆಗೆ ಒಟ್ಟು 6 ಹಡಗುಗಳನ್ನು ನಾಶಪಡಿಸಲಾಗಿದೆ. ಇದರಲ್ಲಿ 27 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದ್ದು ಆದರೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ