/newsfirstlive-kannada/media/media_files/2025/10/19/gold_new-2025-10-19-13-28-41.jpg)
ನವದೆಹಲಿ: ಚಿನ್ನಾಭರಣಗಳ ಬೆಲೆಯಲ್ಲಿ ಸತತ ಏರಿಕೆ ಆಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷ್ಯ. ಇದು ಆಭರಣ ಪ್ರಿಯರಿಗೆ ತುಂಬಾ ಬೇಸರ ತರಿಸಿತ್ತು. ಕಳೆದ ಹಲವು ತಿಂಗಳುಗಳಿಂದ ದರದಲ್ಲಿ ಹೆಚ್ಚಳ ಆಗುತ್ತಿದ್ದ ಬಂಗಾರ, ದೆಹಲಿಯಲ್ಲಿ ಇಂದು ಭಾರೀ ಮಟ್ಟದಲ್ಲಿ ಇಳಿಕೆ ಕಂಡಿರುವುದು ಗ್ರಾಹಕರಿಗೆ ಖುಷಿ ತರಿಸಿದೆ.
ದೆಹಲಿಯಲ್ಲಿ ಚಿನ್ನದ ದರ ಭಾರೀ ಪ್ರಮಾಣದಲ್ಲಿ ಏರಿಕೆ ಆಗಿತ್ತು. ರಾಜಧಾನಿಯಲ್ಲಿ 10 ಗ್ರಾಂ ಚಿನ್ನ ಬರೋಬ್ಬರಿ 1,34,800 ರೂಪಾಯಿ ಆಗಿತ್ತು. ಆದರೆ ಈಗ ಈ ಬೆಲೆಯಲ್ಲಿ 2,400 ರೂಪಾಯಿ ಕಡಿಮೆ ಆಗಿದ್ದು 1,32,400 ರೂಪಾಯಿಗೆ ಇಳಿಕೆ ಆಗಿದೆ. ಆದರೂ ಈ ಹಣ ದೊಡ್ಡಮಟ್ಟದ್ದೇ ಆಗಿದೆ. ದೀಪಾವಳಿಗೆ ಬಂಗಾರ ಕೊಂಡುಕೊಳ್ಳಬೇಕು ಎನ್ನುವವರಿಗೆ ಇದು ಕೊಂಚ ಸಮಾಧಾನಕರ ಎಂದು ಹೇಳಬಹುದು ಅಷ್ಟೇ.
ಅಖಿಲ ಭಾರತ ಸರಾಫಾ ಸಂಘದ ಪ್ರಕಾರ, ಶೇಕಡಾ 99.9 ರಷ್ಟು (24 karat) ಶುದ್ಧ ಇರುವಂತಹ ಬಂಗಾರ ಶುಕ್ರವಾರ ಅಂದರೆ ಅಕ್ಟೋಬರ್​ 17 ರಂದು 10 ಗ್ರಾಂಗೆ 3,200 ರೂಪಾಯಿ ಏರಿಕೆ ಆಗಿ ಸಾರ್ವಕಾಲಿಕ ಗರಿಷ್ಠ 1,34,800 ರೂಪಾಯಿಗೆ ತಲುಪಿತ್ತು. ಆದರೆ ಈ ಬೆಲೆಯಲ್ಲಿ 2,400 ರೂಪಾಯಿ ಕಡಿಮೆ ಆಗಿದ್ದು 1,32,400 ರೂಪಾಯಿಗೆ 10 ಗ್ರಾಂ ಚಿನ್ನ ಖರೀದಿಸಬಹುದು. ಒಂದು ಗ್ರಾಂ ಚಿನ್ನಕ್ಕೆ 13,240 ರೂಪಾಯಿ ಆಗಿದೆ.
ಇದನ್ನೂ ಓದಿ: ಭಾರತ vs ಆಸ್ಟ್ರೇಲಿಯಾದ ಮೊದಲ ಪಂದ್ಯಕ್ಕೆ ವಿಘ್ನ.. ಮತ್ತೆ ಮ್ಯಾಚ್ ಆರಂಭ ಆಗುತ್ತಾ?
ಕಳೆದ ವರ್ಷ 2024ರ ಅಕ್ಟೋಬರ್​ 24 ರಂದು 24 ಕ್ಯಾರೆಟ್​ ಬಂಗಾರ ಪ್ರತಿ 10 ಗ್ರಾಂಗೆ 81,400 ರೂಪಾಯಿ ಇತ್ತು. ಆದರೆ ಈ ಸಲ ಬರೋಬ್ಬರಿ 51,000 ರೂಪಾಯಿ ಹೆಚ್ಚಳವಾಗಿದ್ದು ಶೇ. 62.65 ಏರಿಕೆ ಕಂಡಿದೆ. ಇದರಿಂದ ಬಂಗಾರ ಇಂದು ತುಂಬಾ ದುಬಾರಿಯಾಗಿದೆ. ಈಗ ಒಂದು ಗ್ರಾಂ ಚಿನ್ನಕ್ಕೆ 13,240 ರೂಪಾಯಿ ಇದ್ದು 10 ಗ್ರಾಂಗೆ 1,32,400 ರೂಪಾಯಿ ಇದೆ.
ಇನ್ನು ಬೆಳ್ಳಿ ಕೂಡ ದರದಲ್ಲಿ ಭಾರೀ ಹೆಚ್ಚಳ ಕಂಡಿತ್ತು. ಇದು 1 ಕೆ.ಜಿಗೆ 1,77,000 ರೂಪಾಯಿ ಆಗಿತ್ತು. ಬಡವರ ಬಂಗಾರ ಎಂದೇ ಕರೆಯಿಸಿಕೊಳ್ಳುತ್ತಿದ್ದ ಬೆಳ್ಳಿ ದರದಲ್ಲಿ ಈಗ 7,000 ರೂಪಾಯಿ ಕಡಿಮೆ ಆಗಿದೆ. ಹೀಗಾಗಿ ಇಂದಿನ ಸಿಲ್ವರ್ ದರ 1 ಕೆ.ಜಿಗೆ ಇದರಲ್ಲಿ ಎಲ್ಲ ತೆರಿಗೆ ಸೇರಿ 1,70,000 ರೂಪಾಯಿ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ