/newsfirstlive-kannada/media/media_files/2025/10/19/rohit_kohli_out-2025-10-19-10-06-07.jpg)
ಆಸ್ಟ್ರೇಲಿಯಾ ಹಾಗೂ ಟೀಮ್ ಇಂಡಿಯಾದ ಮೊದಲ ಏಕದಿನ ಪಂದ್ಯಕ್ಕೆ ವಿಘ್ನ ಅಡ್ಡಿಯಾಗಿದ್ದು ಅಭಿಮಾನಿಗಳೆಲ್ಲ ಭಾರೀ ನಿರಾಸೆಗೆ ಒಳಗಾಗಿದ್ದಾರೆ. ಪಂದ್ಯ ಆರಂಭವಾಗುವುದು ಇನ್ನು ತಡವಾಗಲಿದೆ ಎಂದು ಹೇಳಲಾಗುತ್ತಿದೆ.
ಪರ್ತ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ಟೀಮ್ ಇಂಡಿಯಾದ ನಡುವಿನ ಮೊದಲ ಏಕದಿನ ಪಂದ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಮಳೆ ಜೋರಾಗಿ ಸುರಿಯುತ್ತಿದ್ದರಿಂದ ಅಂಪೈರ್​ಗಳು ಮ್ಯಾಚ್ ಅನ್ನು ಸ್ಟಾಪ್ ಮಾಡಿದ್ದಾರೆ. ಮಳೆ ನಿಂತಿತ್ತು ಎಂದು ಅಂಪೈರ್​ಗಳು ಮೈದಾನಕ್ಕೆ ಬರುತ್ತಿದ್ದರು. ಆದರೆ ಮಳೆ ಮತ್ತೊಮ್ಮೆ ಜೋರಾಗಿ ಬಂದಿದ್ದರಿಂದ ಅಂಪೈರ್​ಗಳು ವಾಪಸ್ ತೆರಳಿದ್ದಾರೆ.
ಆಸಿಸ್​ನ ಪರ್ತ್​ ಮೈದಾನದ ಸುತ್ತಮುತ್ತ ಮಳೆ ಬಿಟ್ಟು ಬಿಟ್ಟು ಬರುತ್ತಿದ್ದರಿಂದ ಮ್ಯಾಚ್ ಮತ್ತೆ ಆರಂಭವಾಗುವುದಕ್ಕೆ ಸಮಯ ಹಿಡಿಯಲಿದೆ ಎನ್ನಲಾಗಿದೆ. ಪಿಚ್ ಮೇಲೆ ಕವರ್ ಹಾಕಲಾಗಿದ್ದು ಸುರಕ್ಷತೆ ಕಾಪಾಡಿಕೊಳ್ಳಲಾಗಿದೆ. ಇನ್ನು ಗ್ಯಾಲರಿಯಲ್ಲಿ ಅಭಿಮಾನಿಗಳು ಯಾರು ಇಲ್ಲದಿರುವುದು ಫೋಟೋಗಳಲ್ಲಿ ಕಂಡುಬರುತ್ತಿದೆ.
ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ರಮುಖವಾದ ಮೂರು ವಿಕೆಟ್​ ಕಳೆದುಕೊಂಡು ಭಾರೀ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಓಪನರ್​​ಗಳಾಗಿ ಕ್ರೀಸ್​ಗೆ ಆಗಮಿಸಿದ್ದ ಅನುಭವಿ ಬ್ಯಾಟರ್​ ರೋಹಿತ್ ಶರ್ಮಾ ಹಾಗೂ ನಾಯಕ ಶುಭ್​ಮನ್ ಗಿಲ್​ ಬಂದಷ್ಟೇ ವೇಗವಾಗಿ ಹೊರ ನಡೆದಿದ್ದಾರೆ. ವಿರಾಟ್ ಕೊಹ್ಲಿ ಡಕೌಟ್​ ಆಗಿ ಹೊರ ನಡೆದಿದ್ದಾರೆ. ಸದ್ಯ ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ 6, ಅಕ್ಷರ್ ಪಟೇಲ್ 7 ರನ್​ಗಳಿಂದ ಟೀಮ್ ಇಂಡಿಯಾ 11.5 ಓವರ್​ಗೆ 37 ರನ್​ ಗಳಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ