/newsfirstlive-kannada/media/media_files/2025/10/19/rohit_kohli_bat-2025-10-19-10-07-27.jpg)
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ರಮುಖವಾದ ಮೂರು ವಿಕೆಟ್​ ಕಳೆದುಕೊಂಡು ಭಾರೀ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ವಿರಾಟ್ ಕೊಹ್ಲಿ ಡಕೌಟ್​ ಆಗಿ ಹೊರ ನಡೆದಿದ್ದಾರೆ.
ಪರ್ತ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ಯಾಪ್ಟನ್​ ಮಿಚೆಲ್ ಮಾರ್ಷ್​ ಟಾಸ್ ಗೆದ್ದು, ಭಾರತವನ್ನು ಮೊದಲ ಬ್ಯಾಟಿಂಗ್​ಗೆ ಆಹ್ವಾನಿಸಿದ್ದರು. ಅದರಂತೆ ಓಪನರ್​​ಗಳಾಗಿ ಕ್ರೀಸ್​ಗೆ ಆಗಮಿಸಿದ್ದ ಅನುಭವಿ ಬ್ಯಾಟರ್​ ರೋಹಿತ್ ಶರ್ಮಾ ಹಾಗೂ ನಾಯಕ ಶುಭ್​ಮನ್ ಗಿಲ್​ ಬಂದಷ್ಟೇ ವೇಗವಾಗಿ ಹೊರ ನಡೆದಿದ್ದಾರೆ. ಇದರಿಂದ ಫ್ಯಾನ್ಸ್​ಗೆ ಬೇಸರ ತರಿಸಿದಂತೆ ಆಗಿದೆ.
ಪಂದ್ಯಲ್ಲಿ 14 ಎಸೆತಗಳಲ್ಲಿ 1 ಬೌಂಡರಿ ಸೇಮತ 8 ರನ್​ಗಳಿಂದ ಬ್ಯಾಟಿಂಗ್ ಮಾಡುತ್ತಿದ್ದ ಓಪನರ್ ರೋಹಿತ್ ಶರ್ಮಾ, ಹ್ಯಾಜಲ್​ವುಡ್​ ಬೌಲಿಂಗ್​ನಲ್ಲಿ ಕ್ಯಾಚ್ ಔಟ್ ಆಗಿದ್ದಾರೆ. ಬಳಿಕ ಕ್ರೀಸ್​ಗೆ ವಿರಾಟ್ ಕೊಹ್ಲಿ ಆಗಮಿಸಿ ಆಡುತ್ತಿದ್ದರು. ಪಂದ್ಯದಲ್ಲಿ 8 ಎಸೆತಗಳನ್ನು ಎದುರಿಸಿದ್ದ ವಿರಾಟ್ ಕೊಹ್ಲಿ ಡಕೌಟ್ ಆದರು. ಮಿಚೆಲ್ ಸ್ಟಾರ್ಕ್ ಬೌಲಿಂಗ್​ನಲ್ಲಿ ಕೊಹ್ಲಿ ಬಲವಾದ ಶಾಟ್​ಗೆ ಮುಂದಾದರು. ಆದ್ರೆ ಬಾಲ್​ ಎಡ್ಜ್​ ಆಗಿ ಆಫ್​ ಸೈಡ್​ನಲ್ಲಿ ಕ್ಯಾಚ್ ಆಯಿತು. ಇದರಿಂದ ರನ್ ಗಳಿಸೋ ಮೊದಲೇ ಕೊಹ್ಲಿ ವಿಕೆಟ್ ಒಪ್ಪಿಸಿದರು.
ಈ ವೇಳೆ ಇನ್ನೊಬ್ಬ ಓಪನರ್ ಶುಭ್​ಮನ್ ಗಿಲ್​ ನೆಲೆ ಕಂಡುಕೊಳ್ಳುತ್ತಿದ್ದರು. ಆದರೆ ಅಷ್ಟೊತ್ತಿಗೆ ಗಿಲ್​ ಆಟ ಮುಗಿದಿತ್ತು. 18 ಬಾಲ್​ಗಳಲ್ಲಿ 2 ಬೌಂಡರಿ ಬಾರಿಸಿದ್ದ ನಾಯಕ ಶುಭ್​ಮನ್ ಗಿಲ್ ಅವರು ನಥಾನ್ ಎಲ್ಲೀಸ್​ ಬೌಲಿಂಗ್​ನಲ್ಲಿ ಕೀಪರ್​ಗೆ ಕ್ಯಾಚ್ ಕೊಟ್ಟು ಔಟ್​ ಆದರು. ಇದರಿಂದ ಟೀಮ್ ಇಂಡಿಯಾ 25 ರನ್​ಗೆ ತನ್ನ ಪ್ರಮುಖವಾದ ವಿಕೆಟ್​ ಕೆಳದುಕೊಂಡು ಸಂಕಷ್ಟದಲ್ಲಿ ಇದೆ. ಸದ್ಯ ಕ್ರೀಸ್​ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಆಲ್​ರೌಂಡರ್​ ಅಕ್ಷರ್ ಪಟೇಲ್​ ಬ್ಯಾಟಿಂಗ್ ಮಾಡುತ್ತಿದ್ದು ಭಾರತ 30 ರನ್​ ಗಳಿಸಿದೆ.​
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ