Advertisment

ಇರಾನ್ ಸುಪ್ರೀಂ ಲೀಡರ್ ಆಗಿ ಅಯತೊಲ್ಲಾ ಅಧಿಕೃತ ಆಯ್ಕೆ.. ‘ಹುಡುಕಿ ಹೊಡೆಯುತ್ತೇವೆ’ ಎಂದು ಟ್ರಂಪ್ ಮತ್ತೆ ಧಮ್ಕಿ..!

ಆಯತೊಲ್ಲಾ ಅಲಿ ಮೊಜ್ತಬಾ ಆಯ್ಕೆ ಅಧಿಕೃತ ಘೋಷಣೆ ಹಿನ್ನಲೆ, ಹೊಸ ನಾಯಕನ ಆಯ್ಕೆಯಲ್ಲಿ ನಮ್ಮ ಅನುಮೋದನೆ ಪಡೆಯದಿದ್ದರೆ, ಆತ ಬಹಳ ದಿ‌ನ ಉಳಿಯಲ್ಲ ಅಂತಾ ಟ್ರಂಪ್ ವಾರ್ನಿಂಗ್​ ನೀಡಿದ್ದಾರೆ.

author-image
Ganesh Kerekuli
TRUMP WARNED MOJTAB
Advertisment
  • ಇರಾನ್ ಸುಪ್ರೀಂ ಲೀಡರ್ ಆಗಿ ಆಯತೊಲ್ಲಾ ಅಲಿ ಮೊಜ್ತಾಬಾ ಆಯ್ಕೆ
  • ಇರಾನ್​ನಲ್ಲಿ ಯಾರೇ ಸುಪ್ರೀಂ ಲೀಡರ್ ಆದ್ರೂ ಅವರನ್ನ ಕೊಲ್ಲುತ್ತೇವೆ
  • ಆಯತೊಲ್ಲಾ ಅಲಿ ಮೊಜ್ತಾಬಾಗೆ ಡೊನಾಲ್ಡ್​​ ಟ್ರಂಪ್ ವಾರ್ನಿಂಗ್
  • ಇರಾನ್​​-ಇಸ್ರೇಲ್, US​ ವಾರ್​.. ನೀರು, ಎಣ್ಣೆಗಾಗಿ ಪರದಾಟ

ಇರಾನ್-ಅಮೆರಿಕಾ, ಇಸ್ರೇಲ್​ ಯುದ್ಧ 12ನೇ ದಿನಕ್ಕೆ ಕಾಲಿಟ್ಟಿದ್ದು ಇರಾನ್​ನ ಪರಮೋಚ್ಛ ನಾಯಕ ಆಯತೋಲ್ಲಾ ಅಲಿ ಖಮೇನಿಯ ಹ*ತ್ಯೆಯಾಗಿದೆ. ಬೆನ್ನಲ್ಲೇ ಭಾನುವಾರ ಖಮೇನಿಯ ಮಗ ಆಯತೊಲ್ಲಾ ಅಲಿ ಮೊಜ್ತಬಾ ಅವರನ್ನು ಇರಾನ್​ನ​ ಸುಪ್ರೀಂ ಲೀಡರ್ ಆಗಿ ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಕಳೆದ ವಾರವೇ ಆಯ್ಕೆ ಮಾಡಿದ್ದರೂ ಅಧಿಕೃತ ಘೋಷಣೆ ಆಗಿರಲಿಲ್ಲ. ಇದೀಗ ಸುಪ್ರೀಂ ಲೀಡರ್ ಆಗಿ ಖಮೇನಿಯ ಎರಡನೇ ಪುತ್ರನನ್ನ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ. 

Advertisment

ಬೆನ್ನಲ್ಲೇ ಗುಡಗಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಇರಾನ್​ನಲ್ಲಿ ಯಾರೇ ಸುಪ್ರೀಂ ಲೀಡರ್ ಆದರೂ ಅವರನ್ನು ಹುಡಕಿ ಹೊಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಆಯತೊಲ್ಲಾ ಅಲಿ ಮೊಜ್ತಬಾ ಆಯ್ಕೆಯನ್ನು ಭಾನುವಾರ ಅಧಿಕೃತವಾಗಿ ಘೋಷಣೆ ಬೆನ್ನಲ್ಲೇ, ಹೊಸ ನಾಯಕನ ಆಯ್ಕೆಯಲ್ಲಿ ನಮ್ಮ ಅನುಮೋದನೆ ಪಡೆಯದಿದ್ದರೆ ಆತ ಬಹಳ ದಿ‌ನ ಉಳಿಯಲ್ಲ ಅಂತಾ ಟ್ರಂಪ್ ಕಟ್ಟೆಚ್ಚರಿಕೆ ನೀಡಿದ್ದಾರೆ.

ಇರಾನ್​ನ ತೈಲ ಡಿಪೋ ಮೇಲೆ ಅಟ್ಯಾಕ್

ಇರಾನ್​ನ ಸಹರಾನ್ ಬಳಿಯ ತೈಲ ಡಿಪೋ ಮೇಲೆ ಬಾಂಬ್ ಹಾಕಿ ಇಸ್ರೇಲ್, ಅಮೆರಿಕ ಪ್ರತಿದಾಳಿ ಮಾಡಿವೆ. ಇರಾನ್ ಆದಾಯದ ಮೂಲವೇ ಕಚ್ಚಾತೈಲದ ರಫ್ತಾಗಿತ್ತು ಇದೀಗ ಆದಾಯದ ಮೂಲಕ್ಕೆ ಅಮೆರಿಕಾ, ಇಸ್ರೇಲ್ ಕೊಳ್ಳಿ ಇಟ್ಟಿದೆ. ಸಹರಾನ್ ಆಯಿಲ್ ಡಿಪೋದಿಂದ ತೈಲ ಸೋರಿಕೆಯಾಗಿ ರಸ್ತೆಯಲ್ಲಿ ಹರಿದು ಬೆಂಕಿ ಹೊತ್ತಿಕೊಂಡಿದೆ. ಟೆಹ್ರಾನ್​ನ ನಾಲ್ಕು ತೈಲ ಸಂಗ್ರಹಾಗಾರಗಳ ಮೇಲೆ ದಾಳಿ ನಡೆದಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ. ಈ ದಾಳಿಯಿಂದಾಗಿ ಇರಾನ್ ರಾಜಧಾನಿ ಟೆಹ್ರಾನ್​ನಲ್ಲಿ   ದಟ್ಟವಾದ ಹೊಗೆ ಆವರಿಸಿದ್ದು, ರಾತ್ರಿಯೇ ಹಗಲಿನಂತೆ ಭಾಸವಾಗುವ ಹಾಗೆ ಇಂಧನ ಹೊತ್ತಿ ಉರಿದಿದೆ.

ಇಷ್ಟಕ್ಕೇ ತಣ್ಣಗಾಗದ ಅಮೆರಿಕ, ಇಸ್ರೇಲ್​ ತೈಲದ ಬಳಿಕ ಕುಡಿಯುವ ನೀರಿನ ಶುದ್ದೀಕರಣ ಘಟಕಗಳನ್ನ ಟಾರ್ಗೆಟ್ ಮಾಡಿ ದಾಳಿ ಮಾಡಿದೆ. ಗಲ್ಪ್ ರಾಷ್ಟ್ರ ಹಾಗೂ ಇರಾನ್​ನ ಹಾರ್ಮುಜ್ ಜಲಸಂಧಿಯ ಬಳಿಯ ಕೀಸಂ ದ್ವೀಪದ ನೀರು ಶುದ್ದೀಕರಣ ಘಟಕದ ಮೇಲೆ ದಾಳಿ ಮಾಡಲಾಗಿದೆ. ಇದರಿಂದ ಇರಾನ್​ನ 30 ಗ್ರಾಮಗಳಿಗೆ ಕುಡಿಯುವ ನೀರಿನ ಸಂಪರ್ಕ ಕಡಿತಗೊಂಡಿದೆ. ಆದರೆ ನಾವು ಉಪ್ಪು ನೀರು ಶುದ್ದೀಕರಣ ಘಟಕಗಳ ಮೇಲೆ ದಾಳಿ ಮಾಡಿಲ್ಲ ಎಂದು ಅಮೆರಿಕ, ಇಸ್ರೇಲ್ ಸಮಜಾಯಿಷಿ ನೀಡುತ್ತಿವೆ.

Advertisment

ಇದನ್ನೂ ಓದಿ:ಟಿ-20 ವಿಶ್ವಕಪ್ ಗೆದ್ದ ಭಾರತ ತಂಡ-ಆಟಗಾರರ ಸಂಭ್ರಮಾಚರಣೆಯ ಫೋಟೋಗಳು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

bomb blast America IRAN AND ISRALE WAR IRAN DONALD TRUMP Donald trump direct warning to Ayotholla ali khameni
Advertisment
Advertisment
Advertisment