/newsfirstlive-kannada/media/media_files/2025/09/13/chandra_us-2025-09-13-21-27-23.jpg)
ಅಮೆರಿಕದ ಡಲ್ಲಾಸ್‌ನ ಮೋಟೆಲ್‌ನಲ್ಲಿ ಭಾರತೀಯ ಮೂಲದ ಚಂದ್ರಮೌಳಿ ನಾಗಮಲ್ಲಯ್ಯ (50)ರನ್ನ ಅವರ ಕುಟುಂಬದ ಸಮ್ಮುಖದಲ್ಲೇ ಬರ್ಬರವಾಗಿ ಜೀವ ತೆಗೆಯಲಾಗಿತ್ತು. ಆದರೆ ಇವರು ಮೂಲತಹ ಬೆಂಗಳೂರಿನ ನಿವಾಸಿ ಎನ್ನುವ ಮಾಹಿತಿ ಇದೀಗ ಬಹಿರಂಗಗೊಂಡಿದೆ.
ಚಂದ್ರಮೌಳಿ ನಾಗಮಲ್ಲಯ್ಯ ಮೂಲತಹ ಆಂಧ್ರ ಪ್ರದೇಶದ ಧರ್ಮವರಂನವರು ಆದರೂ ತಮ್ಮ ಜೀವನದ ಹೆಚ್ಚಿನ ಸಮಯವನ್ನು ಬೆಂಗಳೂರಿನಲ್ಲಿ ಕಳೆದಿದ್ದಾರೆ. ಸಿಲಿಕಾನ್ ಸಿಟಿಯ ಆರ್.ಟಿ ನಗರದಲ್ಲಿದ್ದ ಇವರು ಇಂದಿರಾ ನಗರದ ಕೇಬ್ರಿಡ್ಜ್ ಶಾಲೆಯಲ್ಲಿ ಓದಿದ್ದರು. ಇದಾದ ಮೇಲೆ ಬಸವನಗುಡಿಯ ನ್ಯಾಷನಲ್ ಕಾಲೇಜ್ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಇಷ್ಟೇ ಅಲ್ಲದೇ ಬೆಂಗಳೂರಿನಲ್ಲಿ ಹಲವಾರು ಕಡೆ ಸಣ್ಣ ಸಣ್ಣ ವ್ಯಾಪಾರ-ವ್ಯವಹಾರಗಳನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ.
2018ರಲ್ಲಿ ಇವರು ಅಮೆರಿಕಕ್ಕೆ ತೆರಳಿ ಅಲ್ಲಿ ಸ್ಯಾನ್ ಆಂಟೋನಿಯದಲ್ಲಿ ಮೊದಲು ನೆಲೆಸಿದ್ದರು. ಇದಾದ ಮೇಲೆ ಡಲ್ಲಾಸ್ನಲ್ಲಿ ವಾಸವಿದ್ದರು. ಕಳೆದ 5 ವರ್ಷಗಳಿಂದ ಮೋಟೆಲ್‌ನಲ್ಲಿ ಮ್ಯಾನೇಜರ್ ಆಗಿದ್ದರು. ಜೊತೆಗೆ ಅಮೆರಿಕದ ಟೆಕ್ಸಾಸ್ನಲ್ಲಿರುವ ಅವರ ಸಂಬಂಧಿಗಳ ಜೊತೆ ಹಾಸ್ಪಿಟಲಿಟಿ ಬ್ಯುಸಿನೆಸ್ ಕೂಡ ಮಾಡುತ್ತಿದ್ದರು. ಚಂದ್ರಮೌಳಿ ಮಗ ಗೌರವ ತಂದೆಗೆ ನೆರವಾಗಲು ಹಾಸ್ಪಿಟಲಿಟಿ ಮ್ಯಾನೇಜ್ ಮಾಡುವ ಬಗ್ಗೆ ಅಭ್ಯಾಸುತ್ತಿದ್ದನು.
ಇದನ್ನೂ ಓದಿ:ಟೀಮ್ ಇಂಡಿಯಾಗೆ ಅದೃಷ್ಟ.. ಪಂದ್ಯ ಡ್ರಾ ಆದರೂ ಏಷ್ಯಾ ಕಪ್ ಫೈನಲ್ಗೆ ಎಂಟ್ರಿ!
ಚಂದ್ರಮೌಳಿಯ ಸದ್ಯದಲ್ಲೇ ಭಾರತಕ್ಕೆ ಭೇಟಿ ನೀಡುವ ಯೋಜನೆಯಲ್ಲಿದ್ದರು. ಇಲ್ಲಿ ತಾಯಿ ಹಾಗೂ ಕುಟುಂಬದವರನ್ನು ಭೇಟಿ ಮಾಡಲು ಅಕ್ಟೋಬರ್ನಲ್ಲಿ ಬರಬೇಕಿತ್ತು. ಆದರೆ ಅವರ ಮರಣ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗಾಗಿ ಅವರ ಕುಟುಂಬವು ಡಲ್ಲಾಸ್ಗೆ ತೆರಳುವ ಸಾಧ್ಯತೆ ಇದೆ. ಇನ್ನು ಚಂದ್ರಮೌಳಿಯ ಜೀವ ತೆಗೆದ ಆರೋಪಿ ಕ್ಯೂಬಾದ ಯೊರ್ಡಾನಿಸ್ ಕೊಬೊಸ್-ಮಾರ್ಟಿನೆಜ್ (37)ನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇನ್ನು ಗೋಫಂಡ್ಮೀ (GoFundMe) ನಿಧಿಸಂಗ್ರಹವು ಕೇವಲ ಎರಡು ದಿನಗಳಲ್ಲಿ 85,000 ಯುಎಸ್ ಡಾಲರ್ ಕಲೆಕ್ಟ್ (75,03,545 ರೂ.) ಮಾಡಿದೆ. ಈ ಹಣವನ್ನು ಚಂದ್ರಮೌಳಿಯ ಅಂತ್ಯಕ್ರಿಯೆಯ ಖರ್ಚು ಹಾಗೂ ಅವರ ಮಗನ ವಿದ್ಯಾಭ್ಯಾಸಕ್ಕೆ ಉಪಯೋಗಿಸಲಾಗುತ್ತದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ