ಟೀಮ್ ಇಂಡಿಯಾಗೆ ಅದೃಷ್ಟ.. ಪಂದ್ಯ ಡ್ರಾ ಆದರೂ ಏಷ್ಯಾ ಕಪ್​ ಫೈನಲ್​ಗೆ ಎಂಟ್ರಿ!

ಏಷ್ಯಾಕಪ್ ಟೂರ್ನಿಯಲ್ಲಿ ಜಪಾನ್​ನ ಮಹಿಳಾ ಹಾಕಿ ತಂಡದ ವಿರುದ್ಧ 1-1 ರಿಂದ ಭಾರತದ ಮಹಿಳಾ ಹಾಕಿ ತಂಡ ಡ್ರಾ ಸಾಧಿಸಿದರೂ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಸೆಪ್ಟೆಂಬರ್ 13 ರಂದು ನಡೆದ ಪಂದ್ಯದಲ್ಲಿ ಕೊರಿಯಾವನ್ನು ಚೀನಾ ಸೋಲಿಸುತ್ತಿದ್ದಂತೆ ಇತ್ತ ಟೀಮ್ ಇಂಡಿಯಾ ಫೈನಲ್​ಗೆ ಲಗ್ಗೆ ಇಟ್ಟಿದೆ.

author-image
Bhimappa
HOCKEY_TEAM_FINAL
Advertisment

ಏಷ್ಯಾಕಪ್ ಟೂರ್ನಿಯಲ್ಲಿ ಜಪಾನ್​ನ ಮಹಿಳಾ ಹಾಕಿ ತಂಡದ ವಿರುದ್ಧ 1-1 ರಿಂದ ಭಾರತದ ಮಹಿಳಾ ಹಾಕಿ ತಂಡ ಡ್ರಾ ಸಾಧಿಸಿದರೂ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಸೆಪ್ಟೆಂಬರ್ 13 ರಂದು ನಡೆದ ಪಂದ್ಯದಲ್ಲಿ ಕೊರಿಯಾವನ್ನು ಚೀನಾ ಸೋಲಿಸುತ್ತಿದ್ದಂತೆ ಇತ್ತ ಟೀಮ್ ಇಂಡಿಯಾ ಫೈನಲ್​ಗೆ ಲಗ್ಗೆ ಇಟ್ಟಿದೆ. 

ಚೀನಾ ಮಹಿಳಾ ಟೀಮ್ ಹಾಗೂ ಕೊರಿಯಾ ಮಹಿಳಾ ಟೀಮ್ ನಡುವೆ ಸೂಪರ್-4 ಹಂತದ ಕೊನೆಯ ಪಂದ್ಯ ಇಂದು ನಡೆಯಿತು. ಈ ಪಂದ್ಯದ ಮೇಲೆ ಟೀಮ್ ಇಂಡಿಯಾದ ಫೈನಲ್ ಪ್ರವೇಶ ನಿಂತಿತ್ತು. ಚೀನಾ ವಿರುದ್ಧ ಕೊರಿಯಾ ಎರಡು ಗೋಲುಗಳ ಅಂತರದಿಂದ ಗೆಲ್ಲಬೇಕಾಗಿತ್ತು. ಆದರೆ ಪಂದ್ಯದಲ್ಲಿ 1-0 ಗೋಲುಗಳಿಂದ ಕೊರಿಯಾ ಸೋಲುಂಡಿದೆ. ಹೀಗಾಗಿ 2022ರ ಆವೃತ್ತಿಯಲ್ಲಿ 3ನೇ ಸ್ಥಾನ ಪಡೆದಿದ್ದ ಭಾರತವನ್ನ ಚೀನಾನೇ ಫೈನಲ್​ಗೆ ಕರೆದುಕೊಂಡು ಹೋದಂತೆ ಆಗಿದೆ. 

ಹಾಲಿ ಚಾಂಪಿಯನ್ ಆಗಿರುವ ಜಪಾನ್ ತಂಡದ ವಿರುದ್ಧ 1-1 ರಿಂದ ಟೀಮ್ ಇಂಡಿಯಾ ವುಮೆನ್ಸ್​ ಡ್ರಾ ಸಾಧಿಸಿದ್ದರು. ಇದರ ನಂತರ ಫೈನಲ್‌ ಪಂದ್ಯದ ಅರ್ಹತೆಗಾಗಿ ಕೊರಿಯಾ ಮತ್ತು ಚೀನಾ ನಡುವಿನ ಪಂದ್ಯದ ಫಲಿತಾಂಶಕ್ಕಾಗಿ ಭಾರತ ಕಾಯುತ್ತಿತ್ತು. ಈಗ ಭಾರತಕ್ಕೆ ವರವಾಗುವಂತೆ ಫಲಿತಾಂಶ ಬಂದಿರುವುದು ಆಟಗಾರ್ತಿಯರಲ್ಲಿ ಖುಷಿ ಡಬಲ್ ಆಗಿದೆ. ಅಲ್ಲದೇ ಕೋಚ್ ಹರೇಂದ್ರ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಪ್ರತಿಷ್ಠೆಯ ಪಂದ್ಯ ಗೆಲ್ಲಲು ಟೀಮ್ ಇಂಡಿಯಾ ಪಣ.. ಹೈವೋಲ್ಟೇಜ್ ಪಂದ್ಯಕ್ಕೂ ಮೊದಲು ಫಿಟ್ನೆಸ್ ಡ್ರಿಲ್!

HOCKEY_TEAM

ಒಂದು ವೇಳೆ ಜಪಾನ್ ವಿರುದ್ಧ ಟೀಮ್ ಇಂಡಿಯಾ ವುಮೆನ್ಸ್​ ಗೆದ್ದಿದ್ದರೇ ನೇರವಾಗಿ ಚೀನಾ ವಿರುದ್ಧ ಫೈನಲ್​ಗೆ ಎಂಟ್ರಿ ಕೊಡುತ್ತಿದ್ದರು. ಆದರೆ ಡ್ರಾ ಆಗಿದ್ದರಿಂದ ಚೀನಾ-ಕೊರಿಯಾ ಪಂದ್ಯಕ್ಕೆ ಕಾಯಬೇಕಾಯಿತು. ಇನ್ನು ಭಾರತ ಹಾಗೂ ಚೀನಾ ನಡುವಿನ ಫೈನಲ್ ಮ್ಯಾಚ್​ ಭಾನುವಾರ ನಡೆಯಲಿದೆ. ಈ ಫೈನಲ್​ನಲ್ಲಿ ಚಾಂಪಿಯನ್ ಆದ ಟೀಮ್, ಮುಂದಿನ ವರ್ಷ ಬೆಲ್ಜಿಯಂ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯಲಿದೆ. 

ಇನ್ನು ಏಷ್ಯಾ ಕಪ್​ನಲ್ಲಿ ಈಗಾಗಲೇ ಪುರುಷರ ಹಾಕಿ ಟೀಮ್ ಇಂಡಿಯಾ ಟ್ರೋಫಿ ಗೆದ್ದು ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದುಕೊಂಡಿದೆ. ಸೌತ್ ಕೊರಿಯಾ ವಿರುದ್ಧ ಗೆದ್ದು ಬೀಗಿದೆ. ಈಗ ಮಹಿಳೆಯರ ಸರದಿಯಾಗಿದೆ. ಹೀಗಾಗಿ ಚೀನಾ ಮಹಿಳಾ ತಂಡವನ್ನ ಮಣಿಸಿ ಟ್ರೋಫಿಗೆ ಮುತ್ತಿಕ್ಕಿ, ವರ್ಲ್ಡ್​​ಕಪ್​ ಅರ್ಹತೆ ಪಡೆದುಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Team India Hockey Hockey
Advertisment