/newsfirstlive-kannada/media/media_files/2025/09/13/suryakumar_pandya-1-2025-09-13-18-51-11.jpg)
ಇಂಡೋ-ಪಾಕ್ ಸಮರ ಎರಡು ತಂಡಗಳ ನಡುವಿನ ಬ್ಯಾಟ್-ಬಾಲ್ ಕದನ ಮಾತ್ರವಲ್ಲ, 2 ದೇಶಗಳ ಪ್ರತಿಷ್ಠೆಯ ಕದನ. ಇಂಥಹ ಪ್ರತಿಷ್ಠೆಯ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರು, ಬೆವರಿಳಿಸಿದ್ದಾರೆ. ಸ್ಟ್ರೆಂಥ್ ಆ್ಯಂಡ್ ಕಂಡೀಷನಿಂಗ್ ಕೋಚ್​ ಆಡ್ರಿಯನ್ ಲೆ ರೌಕ್ಸ್ ಆಟಗಾರರನ್ನು ಬೆಂಡೆತ್ತಿದ್ದಾರೆ.
ಇಂಡೋ ಪಾಕ್​ ಹೈಟೆನ್ಶನ್ ಮ್ಯಾಚ್​​ಗೆ ಕೌಂಟ್​ಡೌನ್ ಶುರುವಾಗಿದೆ. ಬದ್ಧ ವೈರಿಗಳ ಬ್ಯಾಟಲ್​​ ವೇಳೆ ಕ್ರಿಕೆಟ್ ಪ್ರೇಮಿಗಳ ಮನಸ್ಸಲ್ಲಿ ಉಂಟಾಗುವ ಉನ್ಮಾದ. ಢವಢವ ನಿಜಕ್ಕೂ ನೆಕ್ಸ್ಟ್​ ಲೆವೆಲ್​. ಫ್ಯಾನ್ಸ್​ ಕಣ್ಣಿಗಂತೂ ಇಂಡೋ ಪಾಕ್​ ಮ್ಯಾಚ್ ಹಬ್ಬವೇ ಆಗಿರುತ್ತೆ. ಈ ಹೈವೋಲ್ಟೇಜ್​ ಮ್ಯಾಚ್​​​​ನ ಪ್ರತಿ ಎಸೆತವನ್ನು ಕಣ್ಣು ಮಿಟಿಕಿಸದೆ ನೋಡೋ ಗಮ್ಮತ್ತೇ ಬೇರೆ. ಇಂಥಹ ಹೈವೋಲ್ಟೇಜ್​ ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಜಾತಕ ಪಕ್ಷಿಯಂತೆ ಕಾಯ್ತಿದೆ. ರೋಮಾಂಚನಕಾರಿ ಮೂಮೆಂಟ್ಸ್​, ಕಣ್ಣಲ್ಲಿ ಸೆರೆಹಿಡಿಯೋಕೆ ಉಭಯ ದೇಶಗಳ ಫ್ಯಾನ್ಸ್​ ಕಾಯ್ತಿದ್ದಾರೆ.
/filters:format(webp)/newsfirstlive-kannada/media/media_files/2025/09/13/gill_style-2025-09-13-18-51-24.jpg)
ಪ್ರತಿಷ್ಠೆಯ ಮ್ಯಾಚ್ ಗೆಲ್ಲೋಕೆ ಟೀಮ್ ಇಂಡಿಯಾ ಪಣ..!
ಭಾರತ, ಪಾಕ್​ ಹೈವೋಲ್ಟೇಜ್​ ಮ್ಯಾಚ್​ಗೆ ಜಸ್ಟ್​ ಒಂದೇ ಒಂದು ದಿನ ಬಾಕಿಯಿದೆ. ಹೈ ಪ್ರೊಫೈಲ್ ಪಂದ್ಯ ಗೆಲ್ಲೋಕೆ ಪಣ ತೊಟ್ಟಿರುವ ಟೀಮ್ ಇಂಡಿಯಾ, ಭಾರೀ ಕಸರತ್ತನ್ನೇ ನಡೆಸ್ತಿದ್ದಾರೆ. ನೆಟ್ಸ್​ನಲ್ಲಿ ಒಂದ್ಕಡೆ ಬೆವರಿಳಿಸುತ್ತ ಸಿದ್ಧತೆ ನಡೆಸ್ತಿರುವ ಟೀಮ್ ಇಂಡಿಯಾ ಆಟಗಾರರು, ಪಾಕ್ ಎದುರಿನ ಪಂದ್ಯಕ್ಕೆ ಸಜ್ಜಾಗ್ತಿದ್ದಾರೆ.
ಪಾಕ್ ಎದುರಿನ ಪಂದ್ಯಕ್ಕೂ ಮುನ್ನ ಆಟಗಾರರ ಫಿಟ್ನೆಸ್ ಡ್ರಿಲ್.!
ಪಾಕ್ ಎದುರು ಗೆಲ್ಲೋ ಹಠದಲ್ಲಿರುವ ಟೀಮ್ ಇಂಡಿಯಾ, ಕೇವಲ ತೆರೆಮರೆಯ ಸಿದ್ಧತೆ ಮಾತ್ರವೇ ನಡೆಸ್ತಿಲ್ಲ, ಸಿದ್ಧತೆಯ ಭಾಗವಾಗಿ ಹೈವೋಲ್ಟೇಜ್​ ಪಂದ್ಯಕ್ಕೂ ಮುನ್ನ ಫಿಟ್ನೆಸ್ ಡ್ರಿಲ್​​​​​​​​ ನಡೆಸಿದ್ದಾರೆ. ಆಟಗಾರರ ಫಿಟ್ನೆಸ್ ಮೇಲೆ ಫೋಕಸ್​ ಮಾಡಿರುವ ಸ್ಟ್ರೆಂಥ್​ ಆ್ಯಂಡ್ ಕಂಡೀಷನಿಂಗ್ ಕೋಚ್​ ಆಡ್ರಿಯನ್ ಲೆ ರೌಕ್ಸ್, ಬ್ರೊನ್ಕೊ ಟೆಸ್ಟ್​ ಮೂಲಕ ಆಟಗಾರ ಬೆಂಡೆತ್ತಿದ್ದಾರೆ. ಹೆಡ್ ಕೋಚ್ ಗೌತಮ್ ಗಂಭೀರ್ ಸಮ್ಮುಖದಲ್ಲೇ ಫಿಟ್ನೆಸ್​​ ಡ್ರಿಲ್ ಮಾಡಿದ್ದಾರೆ.
ಇಂದು ನಾವು ಮಾಡಿದ ಬ್ರೊನ್ಕೊ ರನ್​. ಹೊಸ ರನ್​​, ಹೊಸ ಫಿಟ್ನೆಸ್ ಟೆಸ್ಟ್ ಅಲ್ಲ. ಹಲವು ವರ್ಷಗಳಿಂದ ವಿವಿಧ ಕ್ರೀಡಾ ನಿಯಮಗಳಲ್ಲಿ ಇದೆ. ನಾವು ಇತ್ತೀಚೆಗೆ ಪರಿಚಯಿಸಿದ್ದೇವೆ. ಇದರಲ್ಲಿ ಎರಡು ವಿಧ.. ಒಂದು ತರಬೇತಿಯ ಕಾರ್ಯವಿಧಾನವಾಗಿ ಬಳಸಬಹುದು. ಎರಡನೆಯದಾಗಿ ಫಿಟ್ನೆಸ್​ ಅಳತೆಯಾಗಿ ಬಳಸಬಹುದು. ಆದ್ದರಿಂದ ಆಟಗಾರರ ಫಿಟ್ನೆಸ್ ಮಟ್ಟ​ ತಿಳಿಯುತ್ತದ್ದೆ. ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂಬ ಬಗ್ಗೆ ಒಳ್ಳೆಯ ಕಲ್ಪನೆ ಸಿಗುತ್ತದೆ.
ಫಿಟ್ನೆಸ್ ಮಹತ್ವದ ಬಗ್ಗೆ ಆಟಗಾರರಿಗೆ ಆಡ್ರಿಯನ್ ಪಾಠ..!
ಪಾಕ್ ಪಂದ್ಯಕ್ಕೂ ಮುನ್ನ ಆಟಗಾರರ ದೈಹಿಕ ಕ್ಷಮತೆ ಪರೀಕ್ಷಿಸಿದ ಸ್ಟ್ರೆಂಥ್ & ಕಂಡೀಷನಿಂಗ್ ಕೋಚ್, ಮಾನಸಿಕವಾಗಿಯೂ ಆಟಗಾರರನ್ನು ಹೈವೋಲ್ಟೇಜ್ ಪಂದ್ಯಕ್ಕೆ ಸಜ್ಜುಗೊಳಿಸುವ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ, ಆಟಗಾರರ ಲಾಂಗ್ ಕರಿಯರ್​​ಗೆ ಫಿಟ್ನೆಸ್ ಎಷ್ಟು ಮುಖ್ಯ ಎಂಬುವುದರ ಪಾಠವನ್ನ ಮಾಡಿದ್ದಾರೆ.
ಇದನ್ನೂ ಓದಿ:ಯಶ್​ ಜೊತೆ ನಟನೆ ಮಾಡೋಕೆ ತುಂಬಾ ಇಷ್ಟ.. ನಿತ್ಯಾಶ್ರೀ ಆಸೆಗಳು ಏನೇನು?
/filters:format(webp)/newsfirstlive-kannada/media/media_files/2025/09/13/gaumbhir_bumrha-2025-09-13-18-51-36.jpg)
ಕ್ರಿಕೆಟ್ ಕೌಶಲ್ಯದ ಕ್ರೀಡೆಯಾಗಿದೆ. ನಾವು ಆ ಕೌಶಲ್ಯವನ್ನ ಪೂರಕಗೊಳಿಸುತ್ತ ಕೆಲಸ ಮಾಡುತ್ತೇವೆ. ನೀವು ದೈಹಿಕವಾಗಿ ಸಿದ್ಧರಾಗಿದ್ದರೆ, ನೀವು ಹೆಚ್ಚಿನ ಸೀಸನ್ಸ್​ ಆಡಬಹುದು. ಆಟಗಾರರ ವೃತ್ತಿಜೀವನ ವಿಸ್ತರಿಸಲು ನಾವು ಪ್ರಯತ್ನಿಸುತ್ತೇವೆ. ಈ ನಿಟ್ಟಿನಲ್ಲಿ ಸಹಾಯ ಮಾಡುತ್ತೇವೆ. ಇಂಜುರಿ ಕಡಿಮೆ ಮಾಡಲು ಸಾಕಷ್ಟು ಇಂಪ್ಲಿಮೆಂಟ್ ಮಾಡ್ತೇವೆ. ಆಮೂಲಕ ನಿಮ್ಮ ಕೌಶಲ್ಯ ಆನ್​ ಫೀಲ್ಡ್​ನಲ್ಲಿ ತೋರಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತೇವೆ.
ಕ್ರಿಕೆಟ್ ಅನ್ನೋದು ಸ್ಕಿಲ್​ ಫುಲ್ ಗೇಮ್​. ಆದ್ರೆ, ಇದೇ ಗೇಮ್​ನಲ್ಲಿ ಯಶಸ್ಸು ಕಾಣಬೇಕಾದ್ರೆ, ದೈಹಿಕ ಕ್ಷಮತೆಯೂ ಮುಖ್ಯ. ಆಟಗಾರರು ಇಂಜುರಿಯಿಂದ ದೂರ ಉಳಿದರಷ್ಟೇ ಕರಿಯರ್​ ಸೇವ್ ಆಗುತ್ತೆ. ಅಷ್ಟೇ ಅಲ್ಲ, ಆನ್​ಫೀಲ್ಡ್​ನಲ್ಲಿ ಬೆಸ್ಟ್ ರಿಸಲ್ಟ್​ ಹೊರಬರುತ್ತೆ. ಇದೇ ಕಾರಣಕ್ಕೆ ಆಟಗಾರರನ್ನು ಬ್ರೊನ್ಕೊ ಟೆಸ್ಟ್​ ಮೂಲಕ ಸಜ್ಜುಗೊಳಿಸ್ತಿರುವ ​ ಆಡ್ರಿಯನ್ ಲೆ ರೌಕ್ಸ್, ಪರೋಕ್ಷವಾಗಿ ಪಾಕ್ ಪಂದ್ಯಕ್ಕೂ ಮೆಂಟಲಿ ಸಜ್ಜುಗೊಳಿಸ್ತಿದ್ದಾರೆ. ಬೆಸ್ಟ್ ಪರ್ಫಾಮೆನ್ಸ್ ಆಟಗಾರರಿಂದ ಹೊರಬರುವ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದು, ಎಷ್ಟರ ಮಟ್ಟಿಗೆ ಆನ್​ಫೀಲ್ಡ್​ನಲ್ಲಿ ರಿಸಲ್ಟ್​ ಬರುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us