ತಿಂಗಳಿಗೆ ಕೇವಲ ₹10 ಸಾವಿರ ಹೂಡಿಕೆ ಮಾಡಿ, 17 ಲಕ್ಷ ರೂ. ಗಳಿಸಿ; ಏನಿದು ಸರ್ಕಾರಿ ಯೋಜನೆ​?

author-image
Ganesh Nachikethu
Updated On
ಬಡ ಹೈನುಗಾರನ ಖಾತೆಗೆ 257 ಕೋಟಿ ರೂಪಾಯಿಗೆ ಜಾಕ್​ಪಾಟ್​; ಬೆಚ್ಚಿಬಿದ್ದ ಅಧಿಕಾರಿಗಳು..
Advertisment
  • ತಿಂಗಳಿಗೆ ಕೇವಲ 10 ಸಾವಿರ ಹೂಡಿಕೆ ಮಾಡಿ 17 ಲಕ್ಷ ಗಳಿಸಿ
  • ಇದು 18 ವರ್ಷ ಮೇಲ್ಪಟ್ಟವರಿಗೆ ಮಾಡಲಾದ ಸರ್ಕಾರಿ ಸ್ಕೀಮ್​​
  • ಅಪಾಯವಿಲ್ಲದ ಕಡೆ ಹಣ ಹೂಡಿಕೆ ಮಾಡಿ ನೆಮ್ಮದಿಯಿಂದಿರಿ!

ನಿಮಗೆ ಯಾವುದೇ ಅಪಾಯವಿಲ್ಲದ ಕಡೆ ಹಣ ಹೂಡಿಕೆ ಮಾಡುವ ಯೋಚನೆಯೇ. ರಿಯಲ್​ ಎಸ್ಟೇಟ್​​, ಸ್ಟಾಕ್​ ಮಾರ್ಕೆಟ್​​, ಎಸ್​ಐಪಿ ಬಗ್ಗೆ ಅಷ್ಟು ನಂಬಿಕೆ ಇಲ್ಲವೇ. ಹಾಗಾದ್ರೆ ನೀವು ಹಣ ಹೂಡಿಕೆ ಮಾಡಲು ಬೆಸ್ಟ್​ ಆಪ್ಷನ್​ ಎಂದರೆ ಪೋಸ್ಟ್​ ಆಫೀಸ್​ ಸ್ಕೀಮ್​​.

ಯೆಸ್​​, ಅಂಚೆ ಇಲಾಖೆಯಿಂದ ಹಲವಾರು ಸೇವಿಂಗ್ಸ್​ ಪ್ಲಾನ್ಸ್​ ಜಾರಿ ಮಾಡಲಾಗಿದೆ. ನೀವು ಪೋಸ್ಟ್​ ಆಫೀಸ್​ ಸ್ಕೀಮ್​ನಲ್ಲಿ ಹೂಡಿಕೆ ಮಾಡಿದ್ರೆ ಕೇವಲ ಸುರಕ್ಷಿತ ಖಾತ್ರಿಪಡಿಸುವುದು ಅಷ್ಟೇ ಅಲ್ಲ ಜತೆಗೆ ದೊಡ್ಡ ಮಟ್ಟದ ಲಾಭ ತರುತ್ತದೆ.

publive-image

ಯಾವುದು ಆ ಸ್ಕೀಮ್​​?

ಅಂಚೆ ಕಚೇರಿ ಎಲ್ಲರಿಗೂ ಇಷ್ಟವಾಗೋ ರೀತಿ ಸ್ಕೀಮ್​ ಒಂದು ಜಾರಿಗೆ ತಂದಿದೆ. ಆ ಯೋಜನೆ ಮತ್ಯಾವುದು ಅಲ್ಲ ಪೋಸ್ಟ್ ಆಫೀಸ್ ಆರ್‌ಡಿ ಯೋಜನೆ. ಈ ಯೋಜನೆ ಅಡಿಯಲ್ಲಿ ನೀವು ತಿಂಗಳಿಗೆ ಕೇವಲ 100 ರೂ. ಹೂಡಿಕೆ ಮಾಡುವ ಮೂಲಕ ಖಾತೆ ತೆರೆಯಬಹುದು. ಬೇಕಾದಲ್ಲಿ ಜಂಟಿ ಖಾತೆ ಕೂಡ ಓಪನ್​ ಮಾಡಬಹುದು. ಇದರಲ್ಲಿ ನೀವು ಶೇಕಡಾ 6.8 ವಾರ್ಷಿಕ ಬಡ್ಡಿ ಪಡೆಯಬಹುದು.

ಐದು ವರ್ಷದಲ್ಲಿ ಎಷ್ಟು ಬಡ್ಡಿ ಸಿಗಲಿದೆ?

ನೀವು ತಿಂಗಳಿಗೆ 10 ಸಾವಿರ ಹೂಡಿಕೆ ಮಾಡಿದ್ರೆ ವಾರ್ಷಿಕ 1.20 ಲಕ್ಷ ರೂ. ಆಗಲಿದೆ. 5 ವರ್ಷಗಳ ನಂತರ ಇದು ರೂ. 5,99,400 ಆಗಿರುತ್ತದೆ. 6.8 ರಷ್ಟು ವಾರ್ಷಿಕ ಬಡ್ಡಿ ದರದಲ್ಲಿ ನೀವು ರೂ. 1,15,427 ಒಟ್ಟು ಬಡ್ಡಿ ಪಡೆಯಬಹುದು. ಅಂದರೆ 5 ವರ್ಷಗಳಲ್ಲಿ ಬರೋಬ್ಬರಿ 7,14,827 ನಿಧಿ ಸಂಗ್ರಹಿಸಬಹುದು. ಹೀಗೆ ಇನ್ನೂ 5 ವರ್ಷ ಮುಂದುವರಿಸಿದ್ರೆ 10 ವರ್ಷಗಳಲ್ಲಿ 12 ಲಕ್ಷ ರೂ. ಬಡ್ಡಿ ಸೇರಿಸಿ ಒಟ್ಟು 17,08,546 ಗಳಿಸಬಹುದು. ಈ ಯೋಜನೆಗೆ ಸೇರಲು ಕನಿಷ್ಠ 18 ವರ್ಷ ವಯಸ್ಸು ಆಗಿರಬೇಕು.

ಇದನ್ನೂ ಓದಿ:SBI ಬ್ಯಾಂಕ್​ನಿಂದ ಭರ್ಜರಿ ಗುಡ್​ನ್ಯೂಸ್​; 10 ಸಾವಿರ ಹುದ್ದೆಗಳಿಗೆ ನೇಮಕಾತಿ; ಸಂಬಳ ಎಷ್ಟು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment