newsfirstkannada.com

IPhone16: ಬಿಡುಗಡೆಗೂ ಮುನ್ನವೇ ಸೋರಿಕೆಯಾಯ್ತು ಐಫೋನ್​ 16 ಫೀಚರ್ಸ್​! ಬೆಲೆ ಎಷ್ಟು ಗೊತ್ತಾ?

Share :

Published May 5, 2024 at 2:38pm

Update May 5, 2024 at 2:45pm

    ಹೊಸ ಐಫೊನ್​ 16ಗಾಗಿ ಕಾಯುತ್ತಿರೋ ಆ್ಯಪಲ್​ ಪ್ರಿಯರು

    ಬಿಡುಗಡೆಗೂ ಮುನ್ನವೇ ಸೋರಿಯಾಗಿದೆ ಐಫೊನ್​ 16 ಬೆಲೆ

    ಡಿಸ್​ಪ್ಲೇ, ಕ್ಯಾಮೆರಾ, ಚಿಪ್​ಸೆಟ್​​, ಬೆಲೆ ಇವೆಲ್ಲದರ ಮಾಹಿತಿ ಇಲ್ಲಿದೆ

ಕುಪರ್ಟಿನೋ ಮೂಲದ ಪ್ರತಿಷ್ಠಿತ ಆ್ಯಪಲ್ ಕಂಪನಿ ಐಫೋನ್​ 16 ಅನ್ನು ತಯಾರಿಸಿದೆ. ನೂತನ ಫೋನ್​ ಬಿಡುಗಡೆಯಾಗಲು ಬಾಕಿ ಇದೆ. ಈಗಾಗಲೇ ಐಪೋನ್​ ಪ್ರಿಯರಂತೂ ನೂತನ ಫೋನ್​ ಬರುವಿಕೆಗಾಗಿ ಕಾಯುತ್ತಿದ್ದಾರೆ. ಆದರೆ ಅಚ್ಚರಿಯ ಸಂಗತಿ ಎಂದರೆ ಬಿಡುಗಡೆಗೂ ಮುನ್ನವೇ ಐಫೋನ್​ 16 ಬೆಲೆ, ವಿಶೇಷತೆಗಳು ಸೋರಿಕೆಯಾಗಿದೆ.

ಐಫೋನ್​ 16 ನೋ ಬಟನ್​ ವಿನ್ಯಾಸದೊಂದಿಗೆ ಬರಲಿದೆ ಎಂದು ಸುಳಿವು ನೀಡಿದೆ. ಟಚ್​ ಸೆನ್ಸಿಬಿಲಿಟಿಯೊಂದಿಗೆ ಐಫೋನ್​ 16 ಕಾರ್ಯನಿರ್ವಹಿಸಲಿದೆ. ಪಂಚ್​ ಹೋಲ್​ ಮತ್ತು ಯುಎಸ್​​ಬಿ ಟೈಪ್​ ಸಿ ಕೇಬಲ್​ನಲ್ಲಿ ಮಾರುಕಟ್ಟೆಗೆ ಧಾವಿಸಲಿದೆಯಂತೆ.

ಐಫೋನ್​​ 16 ಡಿಸ್​ಪ್ಲೇ

ನೂತನ ಐಫೋನ್​​ 6.3 ಇಂಚಿನ ಮತ್ತು 6.9 ಇಂಚಿನ ಡಿಸ್​ಪ್ಲೇಗಳೊಂದಿಗೆ ಬರಲಿದೆ ಎಂದು ವದಂತಿಗಳಿವೆ. ಇದು ಗೇಮಿಂಗ್​ ಅನುಭವವನ್ನು ಸುಧಾರಿಸಲು ನೀಡಲಾಗಿದೆ ಎಂದು ಹೇಲಾಗುತ್ತಿದೆ.

ಐಫೋನ್​ 16ನಲ್ಲಿರುವ ಚಿಪ್​?

ಐಫೋನ್​ 16 ಮತ್ತು ಐಫೋನ್​ 16 ಪ್ಲಸ್​ ಎ18 ಎಒಸಿಯೊಂದಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಐಫೊನ್​ 16 ಪ್ರೊ ಮತ್ತು ಐಫೋನ್​ 16 ಪ್ರೊ ಮ್ಯಾಕ್ಸ್​ ಎ18 ಪ್ರೊ ಚಿಪ್​ ಅನ್ನು ಅಳವಡಿಸಿಕೊಂಡಿದೆ ಎನ್ನಲಾಗುತ್ತಿದೆ.

ಐಫೋನ್​ ಪ್ರಾತಿನಿಧಿಕ ಚಿತ್ರ

ಬ್ಯಾಟರಿ, ವೇಗವಾದ ಚಾರ್ಜಿಂಗ್​ ಬೆಂಬಲ

ಸೋರಿಕೆಯಾದ ಮಾಹಿತಿ ಪ್ರಕಾರ ಐಫೋನ್​ 16ನಲ್ಲಿ 3,561ಎಮ್​ಎಹೆಚ್​ ಬ್ಯಾಟರಿಯನ್ನು ಅಳವಡಿಸಲಾಗಿದೆ. ಐಫೋನ್​ 16 ಪ್ಲಸ್​ನಲ್ಲಿ 4,006ಎಮ್​ಎಹೆಚ್​​ ಬ್ಯಾಟರಿಯನ್ನು ಅಳವಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಪ್ರೋ ಮಾದರಿಗಳು 4,676 ಎಮ್​ಎಹೆಚ್​ ಬ್ಯಾಟರಿ ಬೆಂಬಲದೊಂದಿಗೆ ಬರಲಿದೆ ಎಂಬ ವದಂತಿಗಳಿವೆ.

ಇದಲ್ಲದೆ ವೇಗವಾಗಿ ಚಾಜಿಂಗ್​ ಆಗುವ ಸೌಲಭ್ಯವನ್ನು ನೀಡಲಾಗಿದೆಯಂತೆ. ಅದಕ್ಕೆಂದೇ 40 ವ್ಯಾಟ್​​ ವೈರ್ಡ್​​ ಚಾಜಿಂಗ್​, 20 ವ್ಯಾಟ್​​ ಮ್ಯಾಗ್​ ಸೇಫ್​ ಚಾರ್ಜಿಂಗ್​ ಬೆಂಬಲವನ್ನು ಪಡೆದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಬುದ್ಧಿ ಕಲಿಯದ ನೇಪಾಳ.. ಭಾರತದ ಭೂಪ್ರದೇಶವನ್ನು 100 ರೂಪಾಯಿ ನೋಟಿನಲ್ಲಿ ಮುದ್ರಿಸಲು ನಿರ್ಧಾರ

ಕ್ಯಾಮೆರಾ ಹೇಗಿದೆ?

ಐಫೋನ್​ 16 ಪ್ರೊ ಮ್ಯಾಕ್ಸ್ ಆಪ್ಟಿಕಲ್​ ಜೂಮ್​ನೊಂದಿಗೆ ಸೂಪರ್​ ಟೆಲಿಫೋಟೋ ಪೆರಿಸ್ಕೋಪ್​​ ಕ್ಯಾಮೆರಾ ಅಳವಡಿಸಿಕೊಂಡಿದೆ ಎನ್ನಲಾಗುತ್ತಿದೆ. 5ಎಕ್ಸ್​ ಜೂಮ್​ನೊಂದಿಗೆ ಕ್ರೀಡೆ, ವನ್ಯಜೀವಿಗಳ ಫೋಟೋ ವಿಡಿಯೋ ಸೆರೆಹಿಡಿಯಬಹುದಾಗಿದೆ ಎಂಬ ವದಂತಿಗಳಿವೆ. ಇದಲ್ಲದೆ ಆ್ಯಂಟಿ-ರಿಫ್ಲೆಕ್ಟಿವ್​ ಆಪ್ಟಿಕಲ್​​ ತಂತ್ರಜ್ನಾವನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ನೂತನ ಐಫೋನ್​ ಅಪ್​ಗ್ರೇಡ್​ ಮಾಡಿದ 48 ಮೆಗಾಫಿಕ್ಸೆಲ್​​ ಅಲ್ಟ್ರಾ ವೈಡ್​​ ಲೆನ್ಸ್​ನೊಂದಿಗೆ ಬರಲಿದೆ ಎಂದು ಸೋರಿಕೆ ಮಾಹಿತಿಗಳು ಹೇಳಿವೆ.

ಇನ್ನು ಸೆಪ್ಟೆಂಬರ್​ ತಿಂಗಳಿನಲ್ಲಿ ಐಫೋನ್​ 16 ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ. ಬಳಿಕ ಮಾರುಕಟ್ಟೆಯಲ್ಲಿ ಮಾರಾಟ ಪ್ರಕ್ರಿಯೆ ಮುಂದುವರೆಸಲಿವೆ.

ಬೆಲೆ ಎಷ್ಟಿರಲಿದೆ?

ಐಫೋನ್​ 15 ಬೆಲೆ ಗಮನಿಸಿದರೆ ಐಫೋನ್​​ 16 ಬೆಲೆ ಗಣನೀಯವಾಗಿ ಏರಿಕೆ ಮಾಡಬಹುದು ಎಂದು ಅಂದಾಜಿಸಲಾಗಿದೆ. ಸೋರಿಕೆಯಾದ ಮಾಹಿತಿ ಪ್ರಕಾರ ಬಿಡಿಭಾಗಗಳು, ಹೊಸ ಫೀಚರ್ಸ್​ಗೆ ಅನುಗುಣವಾಗಿ 100 ಡಾಲರ್​ ಏರಿಕೆಯಾಗಬಹುದು. ಭಾರತದಲ್ಲಿ ಸುಮಾರು 10 ಸಾವಿರದವರೆಗೆ ಜಿಗಿತ ಕಾಣಬಹುದು ಎಂದು ಹೇಳಲಾಗುತ್ತಿದೆ. ಸದ್ಯ ಐಫೋನ್​ 15 ಬೆಲೆ 79,900 ರೂಪಾಯಿ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPhone16: ಬಿಡುಗಡೆಗೂ ಮುನ್ನವೇ ಸೋರಿಕೆಯಾಯ್ತು ಐಫೋನ್​ 16 ಫೀಚರ್ಸ್​! ಬೆಲೆ ಎಷ್ಟು ಗೊತ್ತಾ?

https://newsfirstlive.com/wp-content/uploads/2024/05/Iphone-16-1.jpg

Load More