/newsfirstlive-kannada/media/post_attachments/wp-content/uploads/2024/09/iPhone16.jpg)
ಕುಪರ್ಟಿನೋ ಮೂಲಕ ಆ್ಯಪಲ್​ ಕಂಪನಿ ಐಫೋನ್​ 16 ಸರಣಿಯನ್ನು ಪರಿಚಯಿಸಿದ್ದು, ಇಂದು ಭಾರತದಲ್ಲಿ ಮಾರಾಟ ಪ್ರಾರಂಭವಾಗಿದೆ. ಬಹುತೇಕರು ನೂತನ ಐಫೋನ್​​ ಖರೀದಿಸಲು ಮುಂದಾಗಿದ್ದಾರೆ.
ಮುಂಬೈ, ದೆಹಲಿಯಲ್ಲಿ ಮಳಿಗೆ ಮುಂದೆ ಜನರು ಕ್ಯೂ ನಿಂತಿರುವ ಘಟನೆಯು ಸಾಕ್ಷಿಯಾಗಿದೆ, ಆ್ಯಪಲ್​​ ಸ್ಟೋರ್​ ತೆರೆಯುವುದಕ್ಕೂ ಮುನ್ನವೇ ಜನರು ಐಫೋನ್​ 16 ಖರೀದಿಸಲು ಸಾಲುಗಟ್ಟಿನಿಂತ ಘಟನೆ ದೃಶ್ಯ ಸಮೇತ ಬೆಳಕಿಗೆ ಬಂದಿದೆ.
ಆದರೆ ಐಫೋನನ್ನು ಬರೀ 10 ನಿಮಿಷದಲ್ಲಿ ಮನೆ ಬಾಗಿಲಲ್ಲೇ ಖರೀದಿಸಬಹುದಾಗಿದೆ. ಅದಕ್ಕೆಂದೇ ಆನ್​ಲೈನ್​​ ಕಿರಾಣಿ ವಿತರಣಾ ವೇದಿಕೆ ಬಿಗ್​ಬಾಸ್ಕೆಟ್​​ ಐಫೋನ್​ 16ಗಾಗಿ ಟಾಟಾ ಕ್ರೋಮಾ ಜೊತೆಗೆ ಪಾಲುದಾರಿಕೆ ಹೊಂದಿದೆ.
ಇದನ್ನೂ ಓದಿ: iPhone 16 ಖರೀದಿಸಲು ಕ್ಯೂ ನಿಂತ ಜನರು.. ಮಳಿಗೆ ಮುಂದೆ ಜನಸಾಗರ!
ಬಿಗ್​ ಬಾಸ್ಕೆಟ್​​​ನ ಎಲೆಕ್ಟ್ರಾನಿಕ್ಸ್​​ ವರ್ಗಕ್ಕೆ ಭೆಟಿ ನೀಡುವ ಮೂಲಕ ಐಫೋನ್​ 16 ಸರಣಿ ಖರೀದಿಸಬಹುದಾಗಿದೆ. ಕಂಪನಿಯು ಬರೀ 10 ನಿಮಿಷದಲ್ಲಿ ವಿತರಿಸುವ ಭರವಸೆಯನ್ನು ನೀಡಿದೆ. ಬೆಂಗಳೂರು, ದೆಹಲಿ, ಮುಂಬೈ ಆ್ಯಪಲ್​ ಪ್ರಿಯರು ಖರೀದಿಸಬಹುದಾಗಿದೆ.
ಐಫೋನ್​​ಗಾಗಿ ಕ್ಯೂ ನಿಂತ ಜನರು
ಮುಂಬೈನ ಬಿಕೆಸಿಯಲ್ಲಿರುವ ಮಳಿಗೆಯಲ್ಲಿ ಐಫೋನ್​ 16 ಸರಣಿ ಖರೀದಿಸಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಕಂಡಿದ್ದು, ಬೆರಗುಗೊಳಿಸುವಂತೆ ಮಾಡಿದೆ. ಅತ್ತ ದೆಹಲಿಯಲ್ಲಿ ಇಂತಹದ್ದೇ ದೃಶ್ಯ ಕಂಡುಬಂದಿದೆ.
/newsfirstlive-kannada/media/post_attachments/wp-content/uploads/2024/09/Iphone-16-1-1.jpg)
ಆ್ಯಪಲ್​ ಸ್ಟೋರ್​​ ತೆರೆಯುವ ಮುನ್ನವೇ ಅಂಗಡಿ ಮುಂದೆ ಜನರು ಸೇರಿದ್ದಾರೆ. ಕ್ಯೂ ನಿಂತು ಐಫೋನ್​​ 16 ಸರಣಿ ಖರೀದಿಸಲು ಮುಂದಾಗಿದ್ದಾರೆ. ಕಳೆದ ವರ್ಷ ಐಫೋನ್​ 15 ಮಾರಾಟದ ಸಮಯದಲ್ಲೂ ಇಂತಹದ್ದೇ ದೃಶ್ಯ ಕಂಡುಬಂದಿದೆ.
ದೆಹಲಿ ಸಾಕೇತ್​​ನಲ್ಲಿರುವ ಆ್ಯಪಲ್​​ ಸ್ಟೋರ್​ ಹೊರಗಡೆಯು ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ. ಸದ್ಯ ನೂತನ ಐಫೋನ್​ ಖರೀದಿಸಲು ಇಷ್ಟೊಂದು ಜನರು ಕುತೂಹಲಭರಿತರಾಗಿದ್ದಾರೆ ಎಂಬುದು ಅಚ್ಚರಿಗೆ ದೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us