/newsfirstlive-kannada/media/post_attachments/wp-content/uploads/2024/05/Iphone-17.jpg)
ಐಫೊನ್​ 16 ಮಾರುಕಟ್ಟೆಗೆ ಬರಲು ಸಿದ್ಧತೆ ಮಾಡಿಕೊಂಡಿದೆ. ಇನ್ನು 4 ತಿಂಗಳಲ್ಲಿ ನೂತನ ಫೋನ್​ ಮಾರುಕಟ್ಟೆಗೆ ಬರಲಿದೆ. ಸೆಪ್ಟೆಂಬರ್​ನಲ್ಲಿ ಐಫೋನ್​ 16 ಆ್ಯಪಲ್​ ಪ್ರಿಯರ ಮನ ತಣಿಸಲಿದೆ. ಆದರೆ ಅದಕ್ಕೂ ಮುನ್ನ ಐಫೊನ್​ 17 ಸ್ಲಿಮ್​ ಫೀಚರ್​ ಲೀಕ್​ ಆಗಿದೆ.
ಸದ್ಯ ಸೋರಿಕೆಯಾದ ಮಾಹಿತಿಯಂತೆ ಐಫೋನ್​ 17 ಸೀರಿಸ್​​ 6.55 ಇಂಚಿನ ಡಿಸ್​ಪ್ಲೇ, ಜೊತೆಗೆ ಹಳೆಯ ಮಾಡೆಲ್​ಗಿಂತ ಸ್ಲಿಮ್​ ಆಗಿ ಬರಲಿದೆಯಂತೆ.
ಚಿಕ್ಕ ಡಿಸ್​​ಪ್ಲೇಯಲ್ಲಿ ಐಫೋನ್​ 17 ಪ್ಲಸ್​ ಬರಲಿದೆ. ಆದರೆ ಐಫೋನ್​ 17 ಪ್ರೊ ಮ್ಯಾಕ್ಸ್​​ ಮಾತ್ರ ಐಫೋನ್​ 17, ಐಫೋನ್​ 17 ಪ್ರೊಗಿಂತ ಗಾತ್ರದಲ್ಲಿ ದೊಡ್ಡದಾಗಿರಲಿದೆ. 6.1 ಮತ್ತು 6.3 ಡಿಸ್​ಪ್ಲೇ ಜೊತೆಗೆ ಬರಲಿದೆ ಎನ್ನಲಾಗಿದೆ.
ವಿಶ್ಲೇಷಕ​ ಜೆಫ್​​ ಪು ಹೇಳುವಂತೆ, ಐಫೊನ್​ 17 ಸಿರೀಸ್​​ ವಿಭಿನ್ನವಾದ ವಿನ್ಯಾಸ, ಭಿನ್ನವಾದ ಮುಂಭಾಗದ ಕ್ಯಾಮೆರಾ ಜೊತೆಗೆ ಚಿಕ್ಕ ಡೈನಾಮಿಕ್​ ಐಸ್​ಲ್ಯಾಂಡ್​ ಜೊತೆಗೆ ಬರಲಿದೆ.
ಐಫೊನ್​ 17, ಐಫೋನ್​ 17 ಸ್ಲಿಮ್​ ಮತ್ತು ಐಫೋನ್​ ಪ್ರೊ ಅಲ್ಯುಮೀನಿಯಂ ಡಿಸೈನ್​​ನೊಂದಿಗೆ ಬರಲಿದೆ. ಐಫೋನ್​ 17 ಪ್ರೊ ಮ್ಯಾಕ್ಸ್​ ಟೈಟಾನಿಯಂನೊಂದಿಗೆ ಬರಲಿದೆ. ಇನ್ನು ಪ್ರೊ ಮ್ಯಾಕ್ಸ್​ ವರ್ಷನ್​ ಡೈನಾಮಿಕ್​ ಐಸ್​ಲ್ಯಾಂಡ್​ ಫೀಚರ್​​ ಜೊತೆಗೆ ಕಾಣಿಸಲಿದೆ. ನೆಟಾಲೆನ್ಸ್​ ಪ್ರೊಕ್ಸಿಮಿಟಿ ಸೆನ್ಸಾರ್​ನೊಂದಿಗೆ ಬರಲಿದೆಯಂತೆ.
ಕ್ಯಾಮೆರಾ
ಸದ್ಯ ಹರಿದಾಡುತ್ತಿರುವ ವದರಂತಿಗಳ ಪ್ರಕಾರ, ಐಫೋನ್​ 17 ಸಿರೀಸ್​ ಮುಂಭಾಗ 24 ಮೆಘಾಪಿಕ್ಸೆಲ್​ ಸ್ಪೋರ್ಟ್ಸ್​ ಕ್ಯಾಮೆರಾ, 12 ಮೆಗಾಫಿಕ್ಸೆಲ್​ ಫೇಸಿಂಗ್​ ಕ್ಯಾಮೆರಾದೊಂದಿಗೆ ಬರಲಿದೆ ಎನ್ನಲಾಗುತ್ತಿದೆ.
ಐಫೋನ್​ 17 ಸಿರೀಸ್​ ಬಿಡುಗಡೆ
ಐಫೋನ್​ 16 ಸಿರೀಸ್​ ಇದೇ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಐಫೋನ್​ 17 ಸಿರೀಸ್​ 2025ರಲ್ಲಿ ಬಿಡುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಹೊಸದಾಗಿ ಪರಿಚಯಿಸುವ ‘ಸ್ಲಿಮ್’​ ಮೊಡೆಲ್​ ಪ್ಲಸ್​ ವೇರಿಯಂಟ್​ನ ಬದಲಿಯಾಗಿದೆ. ಇದು ಆ್ಯಪಲ್​ ಮಿನಿ ಮೋಡೆಲ್​ಗಳಿಗೂ ಸಾಥ್​ ನೀಡಲಿದೆ ಎಂದು ಹೇಲಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us