/newsfirstlive-kannada/media/post_attachments/wp-content/uploads/2024/09/iPhone-1.jpg)
ಐಫೋನ್​ ಮತ್ತು ಕೆಲವು ಆ್ಯಪಲ್​ ಸಾಧನವನ್ನು ಬಳಸುವವರು ಕೂಡಲೇ ಅಪ್ಡೇಟ್​ ಮಾಡಲು ಸರ್ಕಾರ ಸೂಚಿಸಿದೆ. ಭಾರತೀಯ ಕಂಪ್ಯೂಟರ್​ ಎಮರ್ಜೆನ್ಸ್​ ರೆಸ್ಪಾನ್ಸ್​ ಟೀಂ​ ವಿವಿಧ ಆ್ಯಪಲ್​​ ಉತ್ಪನ್ನಗಳ ದೋಷಗಳ ಬಗ್ಗೆ ಎಚ್ಚರಿಕೆ ನೀಡಿದೆ.
ಆ್ಯಪಲ್​ ಐಒಎಸ್​​​18, ಐಪ್ಯಾಡ್​​ಒಎಸ್​​ 17.7 ಮತ್ತು ಮ್ಯಾಕ್​​​ಓಎಸ್​​​ 14.7ಗೆ ಮುಂಚಿತವಿರುವ ಸಾಧನಗಳ ಮೇಲೆ ಸೈಬರ್​ ದಾಳಿಕೋರರು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಸೈಬರ್​​ ದಾಳಿಕೋರರು ಅನಧಿಕೃತ ಪ್ರವೇಶ ಪಡೆದು ಸಮಸ್ಯೆ ತಂದಿಡಲಿದ್ದಾರೆ ಎಂದು ಎಚ್ಚರಿಸಿದೆ.
ಭದ್ರತಾ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದೆ. ಸೈಬರ್​ ದಾಳಿಕೋರರು ನ್ಯೂನತೆಗಳನ್ನು ಬಳಸಿಕೊಂಡು ದಾಳಿ ಮಾಡಬಹುದು. ಕೋಡ್​ ಕಾರ್ಯಗೊಳಿಸುವ ಮೂಲಕ ಭದ್ರತಾ ಕ್ರಮಗಳನ್ನು ಬೈಪಾಸ್​​ ಮಾಡಬಹುದು ಎಂದಿದೆ.
ಅಪಾಯದಲ್ಲಿರುವ ಆವೃತ್ತಿಗಳು:
18ರ ಹಿಂದಿನ ಐಒಎಸ್ ಆವೃತ್ತಿಗಳು ಮತ್ತು 17.7ರ ಹಿಂದಿನ ಆವೃತ್ತಿಗಳು
14.7ಗಿಂತ ಹಿಂದಿನ ಮ್ಯಾಕ್​​ಓಎಸ್​​ ಸೊನೊಮಾ ಆವೃತ್ತಿಗಳು
13.7ಗಿಂತ ಹಿಂದಿನ ಮ್ಯಾಕ್​ ಓಎಸ್​​​ ವೆಂಚುರಾ ಆವೃತ್ತಿಗಳು
15ರ ಮ್ಯಾಕ್​​ಓಎಸ್​​ ಸೀಕೋಯ ಆವೃತ್ತಿಗಳು
18ರ ಮೊದಲ ಟಿವಿಓಎಸ್​​ ಆವೃತ್ತಿಗಳು
11ರ ಮೊದಲ ವಾಚ್​​​ಓಎಸ್​​ ಆವೃತ್ತಿಗಳು
18ರ ಹಿಂದಿನ ಸಫಾರಿ ಆವೃತ್ತಿಗಳು
16ರ ಹಿಂದಿನ ಎಕ್ಸ್​ಕೋಡ್​​​ ಆವೃತ್ತಿಗಳು.
2ವಿಷನ್​ಓಎಸ್​​ ಆವರ್ತಿಗಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ