/newsfirstlive-kannada/media/post_attachments/wp-content/uploads/2024/03/rohit-sharma-1.jpg)
ರಾಜಸ್ಥಾನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು
ಇಂದು ನಡೆಯುವ 17ನೇ ಐಪಿಎಲ್ ಆವೃತ್ತಿಯ 9ನೇ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ತಂಡಗಳು ಕಾದಾಡಲಿವೆ. ರಿಷಬ್ ಪಂತ್ ಬಳಗ ಮೊದಲ ಪಂದ್ಯದಲ್ಲಿ ಮುಗ್ಗರಿಸಿದೆ. ಇಂದು ತವರಿನಲ್ಲಿ ರಾಜಸ್ಥಾನ ಮಣಿಸಿ ಗೆಲುವಿನ ಲಯಕ್ಕೆ ಮರಳುವ ಲೆಕ್ಕಚಾರದಲ್ಲಿದೆ. ಅತ್ತ ಗೆಲುವಿನ ಹುಮಸ್ಸಿನಲ್ಲಿರೋ ರಾಜಸ್ಥಾನ ಮತ್ತೊಂದು ವಿಕ್ಟರಿ ಮೇಲೆ ಕಣ್ಣಿಟ್ಟಿದೆ. ಏನ್ರಿಚ್ ನೋಕಿಯಾ ಡೆಲ್ಲಿ ಬಳಗ ಸೇರಿಕೊಂಡಿದ್ದು ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ಬಂದಿದೆ.
Matchday hype after this video 📈📈📈 pic.twitter.com/xGjJzjDxrQ
— Rajasthan Royals (@rajasthanroyals) March 28, 2024
ರೋಹಿತ್ ಶರ್ಮಾಗೆ ವಿಶೇಷ ಗೌರವ
ನಿನ್ನೆ ನಡೆದ ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್ಮನ್ ರೋಹಿತ್ ಶರ್ಮಾಗೆ ವಿಶೇಷ ಗೌರವ ನೀಡಲಾಯ್ತು. ನಿನ್ನೆಯ ಪಂದ್ಯದೊಂದಿಗೆ ರೋಹಿತ್ ಮುಂಬೈ ಪರ 200 ಪಂದ್ಯವನ್ನಾಡಿದ ಸಾಧನೆ ಮಾಡಿದ್ರು. ಈ ಹಿನ್ನೆಲೆಯಲ್ಲಿ ಪಂದ್ಯಕ್ಕೂ ಮುನ್ನ ತಂಡದ ಮೆಂಟರ್ ಸಚಿನ್ ತೆಂಡುಲ್ಕರ್ ವಿಶೇಷ ಕ್ಯಾಪ್, ಹಾಗೂ 200 ನಂಬರಿನ ಜೆರ್ಸಿ ನೀಡಿ ಗೌರವಿಸಿದ್ರು.
Moment hai bhai, moment hai 📸#MumbaiMeriJaan#MumbaiIndians#SRHvMIpic.twitter.com/Fo5CE4PN0g
— Mumbai Indians (@mipaltan) March 27, 2024
ಮುಂದಿನ ಪಂದ್ಯಕ್ಕೆ ಲಕ್ನೋ ತಾಲೀಮು
ಲಕ್ನೋ ಸೂಪರ್ ಜೈಂಟ್ಸ್ ಮುಂದಿನ ಐಪಿಎಲ್ ಪಂದ್ಯಕ್ಕೆ ಭರ್ಜರಿ ಅಭ್ಯಾಸ ನಡೆಸಿದೆ. ಫೀಲ್ಡಿಂಗ್ ಕೋಚ್ ಜಾಂಟಿ ರೋಲ್ಡ್ ಆಟಗಾರರಿಗೆ ಡ್ರಿಲ್ ನಡೆಸಿದ್ದಾರೆ. ಫೀಲ್ಡಿಂಗ್ ಸುಧಾರಿಸುವ ನಿಟ್ಟಿನಲ್ಲಿ ಲಕ್ನೋ ಹೆಚ್ಚು ಗಮನ ಹರಿಸಿದೆ. ಆಡಿದ ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಲಕ್ನೋ ತಂಡ ಶನಿವಾರ ತವರಿನ ಅಂಗಳದಲ್ಲಿ ಬಲಾಢ್ಯ ಪಂಜಾಬ್ ಕಿಂಗ್ಸ್ ಸವಾಲನ್ನ ಎದುರಿಸಲಿದೆ.
Ab aapke gharwaapsi ki baari hai 💙
Buy tickets on @bookmyshow now ▶️ https://t.co/opO03nHG6Fpic.twitter.com/2ek3An4yn5— Lucknow Super Giants (@LucknowIPL) March 28, 2024
ಹಾರ್ದಿಕ್ ಪಾದ ಮುಟ್ಟಿ ನಮಸ್ಕರಿಸಿದ ಫ್ಯಾನ್
ಮುಂಬೈ ಕ್ಯಾಪ್ಟನ್ ನೂತನ ನಾಯಕ ಮರು ಅಭಿಮಾನಿಗಳ ಪ್ರೀತಿ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಭಿಮಾನಿಯೊಬ್ಬ ಹಾರ್ದಿಕ್ ಪಾದ ಮುಟ್ಟಿ ನಮಸ್ಕರಿಸಿದ್ದಾರೆ. ಫ್ಯಾನ್ ಜೊತೆ ಪಾಂಡ್ಯ ಆತ್ಮೀಯವಾಗಿ ಮಾತನಾಡಿದ್ದು ಫೋಟೋ ತೆಗೆಸಿಕೊಂಡಿದ್ದಾರೆ. ಇದೇ ವೇಳೆ ಅಭಿಮಾನಿ ಕೈಯಲ್ಲಿ ಹಾಕಿಕೊಂಡಿರೋ ಪಾಂಡ್ಯ ಅವರ ಟ್ಯಾಟೂ ಅನ್ನ ಮುಂಬೈ ನಾಯಕನಿಗೆ ತೋರಿಸಿದ್ದಾರೆ.
https://twitter.com/ChatGPTChr26111/status/1772694373815275938
ಫಿಲಿಪ್ಸ್ VS ನಿತೀಶ್ ನಡುವೆ ರನ್ನಿಂಗ್ ರೇಸ್
ಸನ್ರೈಸರ್ಸ್ ಹೈದ್ರಾಬಾದ್ ತಂಡದ ಗ್ಲೆನ್ ಫಿಲಿಪ್ಸ್ ಹಾಗೂ ನಿತೀಶ್ ಕುಮಾರ್ ನಡುವೆ ರನ್ನಿಂಗ್ ಫೈಟ್ ಏರ್ಪಟ್ಟಿದೆ. 22 ಯಾರ್ಡ್ ಪಿಚ್ನಲ್ಲಿ ವೇಗವಾಗಿ ಗುರಿ ಮುಟ್ಟಲು ಪೈಪೋಟಿ ನಡೆಸಿದ್ರು. ಇಬ್ಬರೂ ಸಮಬಲದ ಹೋರಾಟ ನಡೆಸಿದರಾದ್ರು, ಗ್ಲೆನ್ ಫಿಲಿಪ್ಸ್ ಕೂದಲೆಳೆ ಅಂತರದಲ್ಲಿ ಬೇಗನೆ ಗುರಿ ಮುಟ್ಟಿ ನಿಶೀಶ್ ಕುಮಾರ್ ರೆಡ್ಡಿಯನ್ನ ಸೋಲಿಸಿದ್ರು. ಕೊನೆಗೆ ಹೈದ್ರಾಬಾದ್ ಆಟಗಾರರು ರೇಸ್ ಬಗ್ಗೆ ಪರಸ್ಪರ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ
ಇದನ್ನೂ ಓದಿ: RCB ಮ್ಯಾನೇಜ್ಮೆಂಟ್ ವಿರುದ್ಧ ಫ್ಯಾನ್ಸ್ ನಿಗಿನಿಗಿ ಕೆಂಡ; ರೂಪೇಶ್ ರಾಜಣ್ಣ ಕೂಡ ತೀವ್ರ ಖಂಡನೆ..!
ಹರ್ಷಿತ್ ರಾಣಾ ಭರ್ಜರಿ ಸಮರಾಭ್ಯಾಸ..!
ಆರ್ಸಿಬಿ ಎದುರಿನ ಪಂದ್ಯಕ್ಕೆ ಕೆಕೆಆರ್ ಸಿದ್ಧತೆ ಜೋರಾಗಿದೆ. ಯುವವೇಗಿ ಹರ್ಷಿತ್ ರಾಣ ನೆಟ್ಸ್ನಲ್ಲಿ ಭರ್ಜರಿ ಬೆವರು ಹರಿಸಿದ್ದಾರೆ. ಹರ್ಷಿತ್ ಮೊದಲ ಪಂದ್ಯದಲ್ಲೆ 3 ವಿಕೆಟ್ ಪಡೆದು ಭರವಸೆ ಮೂಡಿಸಿದ್ರು. ನಾಳೆ ನಡೆಯುವ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಹರ್ಷಿತ್ ಮೇಲೆ ಅಪಾರ ನಿರೀಕ್ಷೆ ಗರಿಗೆದರಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್