newsfirstkannada.com

RCB ಮ್ಯಾನೇಜ್ಮೆಂಟ್ ವಿರುದ್ಧ ಫ್ಯಾನ್ಸ್​ ನಿಗಿನಿಗಿ ಕೆಂಡ; ರೂಪೇಶ್ ರಾಜಣ್ಣ ಕೂಡ ತೀವ್ರ ಖಂಡನೆ..!

Share :

Published March 28, 2024 at 12:17pm

Update March 28, 2024 at 12:18pm

    ಅಷ್ಟಕ್ಕೂ ಆರ್​ಸಿಬಿ ಮ್ಯಾನೇಜ್ಮೆಂಟ್ ಮಾಡಿದ ತಪ್ಪೇನು?

    ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ನಡೆದ ಪ್ರಮಾದ ಏನು?

    RCB ಮ್ಯಾನೇಜ್ಮೆಂಟ್ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ ಆ ವಿಡಿಯೋ

ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂಜಾಬ್​ ವಿರುದ್ಧದ ಪಂದ್ಯದ ವೇಳೆ ವಿರಾಟ್​​​ ಕೊಹ್ಲಿ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ್ದ. ಇದನ್ನ ನೀವು ನೋಡಿರ್ತಿರಾ. ಆದ್ರೆ, ಅದಾದ ಬಳಿಕ ಏನಾಯ್ತು ಅಂತಾ ನಿಮಗೆ ಗೊತ್ತಾ? ಆರ್​​ಸಿಬಿ ಮ್ಯಾನೇಜ್​ಮೆಂಟ್​ ವಿರುದ್ಧ ಫ್ಯಾನ್ಸ್ ನಿಗಿನಿಗಿ ಕೆಂಡಕಾರಲು ಶುರುಮಾಡಿದ್ದಾರೆ.

ಇದನ್ನೂ ಓದಿ: 38 ಸಿಕ್ಸ್​​, 33 ಬೌಂಡರಿ, 523 ರನ್..! ರನ್​​.. ರನ್​.. ರನ್​​.. ಹೈದ್ರಾಬಾದ್​ನಲ್ಲಿ ರನ್​ ಮಳೆ ಸುರಿದ ಕಂಪ್ಲೀಟ್ ಕಹಾನಿ..!

ವಿರಾಟ್​​ ಕೊಹ್ಲಿಯನ್ನ ಒಂದು ಬಾರಿ ಮುಟ್ಟ ಬೇಕು, ಮಾತಾಡಿಸಬೇಕು ಅನ್ನೋದು ದೇವರಂತೆ ಆರಾಧಿಸೋ ಅಭಿಮಾನಿಗಳ ಮನದಾಳದ ಹಂಬಲ. ಈ ಒಂದು ಆಸೆಯನ್ನ ತೀರಿಸಿಕೊಳ್ಳಲು ಅಭಿಮಾನಿಗಳು ಎಂತದ್ದನ್ನ ಬೇಕಾದ್ರೂ ಮಾಡೋಕೆ ರೆಡಿಯಾಗಿರ್ತಾರೆ. ಪಂದ್ಯದ ನಡುವೆ ಮೈದಾನಕ್ಕೆ ನುಗ್ಗೋಕೂ ಹಿಂದೆ ಮುಂದೆ ನೋಡಲ್ಲ. ಮೊನ್ನೆ ನಡೆದ ಆರ್​​ಸಿಬಿ ಹಾಗೂ ಪಂಜಾಬ್​ ಕಿಂಗ್ಸ್​ ನಡುವಿನ ಪಂದ್ಯ ನಿಮಗೆ ನೆನಪಿರಬಹುದು. ಚಿನ್ನಸ್ವಾಮಿ ಮೈದಾನದಲ್ಲಿ ಆಡಿದ ಸೀಸನ್​ನ ಮೊದಲ ಪಂದ್ಯದಲ್ಲೇ, ಕಿಂಗ್​ ಕೊಹ್ಲಿ ಘರ್ಜಿಸಿದ್ರು. ಕೊಹ್ಲಿ ಅಬ್ಬರಕ್ಕೆ ಪಂಜಾಬ್​ ಥಂಡಾ ಹೊಡೆದ್ರೆ, ಫ್ಯಾನ್ಸ್​ ಹುಚ್ಚೆದ್ದು ಕುಣಿದ್ರು. ಇದೇ ವೇಳೆ ಒಬ್ಬ ಫ್ಯಾನ್​ ಮೈದಾನಕ್ಕೆ ಎಂಟ್ರಿ ಕೊಟ್ಟೇ ಬಿಟ್ಟ.​

ಪಂದ್ಯದ ನಡುವೆ ಮೈದಾನಕ್ಕೆ ನುಗ್ಗಿದ ಕೊಹ್ಲಿ ಫ್ಯಾನ್​​

ಆರ್​​ಸಿಬಿ ಬ್ಯಾಟಿಂಗ್​ನ ವೇಳೆ ಭದ್ರತಾ ನಿಯಮಗಳನ್ನ ಉಲ್ಲಂಘಿಸಿದ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗೇ ಬಿಟ್ಟ. ಸೀದಾ ವಿರಾಟ್​ ಕೊಹ್ಲಿ ಬಳಿ ಓಡಿದ ಅಭಿಮಾನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ. ಜೊತೆಗೆ ಕೊಹ್ಲಿಯನ್ನ ತಬ್ಬಿಕೊಂಡು ಸಂಭ್ರಮಿಸಿದ. ಮೈದಾನಕ್ಕೆ ನುಗ್ಗಿ ಕೊಹ್ಲಿ ಆಶೀರ್ವಾದ ಪಡೆದು, ಹಗ್​ ಮಾಡಿದ ಅಭಿಮಾನಿಯ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸೆನ್ಸೇಷನ್​ ಸೃಷ್ಟಿಸಿತು. ಕೊಹ್ಲಿ ಸ್ಪಂದಿಸಿದ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ಫ್ಯಾನ್ ಧೈರ್ಯಕ್ಕೆ ಸಲಾಂ ಎಂದೆಲ್ಲ ಹೊಗಳಿದ್ರು. ಮೈದಾನದಿಂದ ಹೊರಬಂದ ಬಳಿಕ ಆತನಿಗೆ ಆಗಿದ್ದೇನು ಗೊತ್ತಾ..?

ಹಿಗ್ಗಾಮುಗ್ಗಾ ಥಳಿಸಿದ ಭದ್ರತಾ ಸಿಬ್ಬಂದಿ

ಕೊಹ್ಲಿ ಅಭಿಮಾನಿಯನ್ನ ಮೈದಾನದಿಂದ ಹೊರಗೆ ತಂದಿದ್ದೇ ತಡ, ಭದ್ರತಾ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮನಬಂದಂತೆ ಅಭಿಮಾನಿಯನ್ನ ಥಳಿಸಿ ಕ್ರೌರ್ಯ ಮೆರೆದಿದ್ದಾರೆ.

‘ಲಾಯಲ್​ ಫ್ಯಾನ್​​​​​’ಗೆ ಇದೆಂಥಾ ಶಿಕ್ಷೆ.?

ಅಭಿಮಾನಿ ನಿಯಮಗಳನ್ನ ಗಾಳಿಗೆ ತೂರಿ ಮೈದಾನಕ್ಕೆ ನುಗ್ಗಿದ್ದು ನಿಸ್ಸಂಶಯವಾಗಿ ತಪ್ಪು. ಆ ತಪ್ಪಿಗೆ ಈ ರೀತಿ ಶಿಕ್ಷೆಗೆ ಕೊಡೋದು ಎಷ್ಟು ಸರಿ.? ಆತನನ್ನ ಪೋಲಿಸ್​ಗೆ ಒಪ್ಪಿಸಬೇಕಿತ್ತು. ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆ ಕೊಡಬೇಕಿತ್ತು. ಅದನ್ನ ಬಿಟ್ಟು ಹೀಗೆ ಮನಬಂದಂತೆ ಥಳಿಸಿದ್ದು ಒಪ್ಪುವಂತಾ ವಿಚಾರವೇ ಅಲ್ಲ ಅನ್ನೋದು ಫ್ಯಾನ್ಸ್​ ವಾದವಾಗಿದೆ.

RCB ಮ್ಯಾನೇಜ್​ಮೆಂಟ್​ ವಿರುದ್ಧ ಫ್ಯಾನ್ಸ್​​ ಗರಂ

ಲಾಯಲ್​ ಫ್ಯಾನ್ಸ್​​ನ ಅಪರಿಮಿತ ಪ್ರೀತಿ, ಅಭಿಮಾನವೇ ಆರ್​​ಸಿಬಿಯ ಬಂಡವಾಳವಾಗಿದೆ. ಉಳಿದೆಲ್ಲಾ ಫ್ರಾಂಚೈಸಿಗಳಿಗೆ ಹೋಲಿಸಿದ್ರೆ, ಟಿಕೆಟ್​ ವಿಚಾರದಲ್ಲಿ ದುಪ್ಪಟ್ಟು ಹಣ ಸುಲಿಗೆ ಮಾಡ್ತಿದೆ. ಆದ್ರೂ, ಅಭಿಮಾನ ಕಡಿಮೆಯಾಗಿಲ್ಲ. ಆ ಅಭಿಮಾನಿ ಮಾಡಿದ್ದು ತಪ್ಪೇ.! ಆದ್ರೂ, ಕನಿಷ್ಟ ಪಕ್ಷ ಆತನನ್ನ ಹೀಗೆ ಹಿಗ್ಗಾಮುಗ್ಗಾ ಥಳಿಸಿದಂತೆ ನೋಡಕೊಳ್ಳಬಹುದಾದ ಅವಕಾಶ ಆರ್​​​ಸಿಬಿ ಮ್ಯಾನೇಜ್​ಮೆಂಟ್​ಗಿತ್ತು. ಆದ್ರೆ, ಮ್ಯಾನೇಜ್​ಮೆಂಟ್​​ನ ಮೌನ ಅಭಿಮಾನಿಗಳನ್ನ ಕೆರಳುವಂತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCB ಮ್ಯಾನೇಜ್ಮೆಂಟ್ ವಿರುದ್ಧ ಫ್ಯಾನ್ಸ್​ ನಿಗಿನಿಗಿ ಕೆಂಡ; ರೂಪೇಶ್ ರಾಜಣ್ಣ ಕೂಡ ತೀವ್ರ ಖಂಡನೆ..!

https://newsfirstlive.com/wp-content/uploads/2024/03/RCB-18.jpg

Load More