ಬೌಂಡರಿ-ಸಿಕ್ಸರ್ ಅಬ್ಬರ ಅಭಿಮಾನಿಗಳಿಗೆ ಹಬ್ಬದೂಟ
ಮುಂಬೈ ಬೌಲರ್ಗಳ ಮೇಲೆ ಹೈದ್ರಾಬಾದ್ ಬ್ಯಾಟರ್ಸ್ ಸವಾರಿ
20 ಓವರ್, 3 ವಿಕೆಟ್, ಬರೋಬ್ಬರಿ 277 ರನ್ ಚಚ್ಚಿದ SRH
38 ಸಿಕ್ಸ್.. 33 ಬೌಂಡರಿ.. 523 ರನ್..! ಅಬ್ಬಬ್ಬಾ..! ನಿನ್ನೆ ಹೈದ್ರಾಬಾದ್ ಗ್ರೌಂಡ್ನಲ್ಲಿ ಬೌಲರ್ಗಳ ಮೇಲೆ ಬ್ಯಾಟ್ಸ್ಮನ್ಗಳು ಅಕ್ಷರಶಃ ಸವಾರಿ ಮಾಡಿದ್ರು. ಬ್ಯಾಟ್ಸ್ಮನ್ಗಳ ಬೌಂಡರಿ, ಸಿಕ್ಸರ್ಗಳ ಸುರಿಮಳೆ ಸುರಿಸ್ತಿದ್ರೆ ಫ್ಯಾನ್ಸ್ ಹುಚ್ಚೆದ್ದು ಕಣೀತಿದ್ರು. ಒಂದೇ ಮಾತಲ್ಲಿ ಹೇಳಬೇಕಂದ್ರೆ ನಿನ್ನೆ ಫ್ಯಾನ್ಸ್ಗೆ ಸಿಕ್ಕಿದ್ದು, ಪೈಸಾ ವಸೂಲ್ ಟ್ರೀಟ್ಮೆಂಟ್.
ರನ್.. ರನ್.. ರನ್.. ಹೈದ್ರಾಬಾದ್ನಲ್ಲಿ ನಿನ್ನೆ ರನ್ ಮಳೆಯೇ ಸುರಿದು ಬಿಡ್ತು. ಬೌಂಡರಿಗಳ ಭರಾಟೆ, ಸಿಕ್ಸರ್ಗಳ ಅಬ್ಬರ.. ಫೀಲ್ಡ್ನಲ್ಲಿ SRH ಬ್ಯಾಟ್ಸ್ಮನ್ಗಳು ರುಬ್ತಾ ಇದ್ರೆ, ಸ್ಟ್ಯಾಂಡ್ನಲ್ಲಿದ್ದ ಓನರ್ ಕಾವ್ಯಾ ಮಾರನ್ ಒನ್ ಮೋರ್ ಒನ್ ಮೋರ್ ಅಂತಿದ್ದರು.
ಆರಂಭದಲ್ಲೇ ಮುಂಬೈ ಇಂಡಿಯನ್ಸ್ಗೆ ‘ಹೆಡ್ಡೇಕ್’
ಟಾಸ್ ಗೆದ್ದು ಬೌಲಿಂಗ್ಗಿಳಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಮಯಾಂಕ್ ಅಗರ್ವಾಲ್ ವಿಕೆಟ್ ಕಬಳಿಸ್ತು. 2ನೇ ಓವರ್ನ ಮೊದಲ ಎಸೆತದಲ್ಲೇ ಟ್ರಾವಿಡ್ ಹೆಡ್ ಕ್ಯಾಚ್ ಡ್ರಾಪ್ ದೊಡ್ಡ ಯಡವಟ್ಟು ಮಾಡ್ತು. ಜೀವದಾನ ಪಡೆ ಹೆಡ್ ಮುಂಬೈ ಬೌಲರ್ಗಳ ಮಾರಣ ಹೋಮ ನಡೆಸಿದರು. ಕೇವಲ 24 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಹಿತ 62 ರನ್ ಚಚ್ಚಿದರು.
ಬೊಂಬಾಟ ಆಟವಾಡಿದ ಅಭಿಷೇಕ್ ಶರ್ಮಾ
ಹೆಡ್ ಜೊತೆ ಜೊತೆಗೆ ಅಭಿಷೇಕ್ ಶರ್ಮಾ ಕೂಡ ಡೇರ್ ಡೆವಿಲ್ ಆಟವಾಡಿದ್ರು. 7 ಸಿಕ್ಸರ್, 3 ಬೌಂಡರಿ ಸಿಡಿಸಿದ ಯಂಗ್ ಬ್ಯಾಟ್ಸ್ಮನ್ ಜಸ್ಟ್ 23 ಎಸೆತಗಳಲ್ಲಿ 63 ರನ್ ಸಿಡಿಸಿದರು. ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಪತನದ ಬಳಿಕ ಕಣಕ್ಕಿಳಿದ ಹೆನ್ರಿಚ್ ಕ್ಲಾಸೆನ್ ಮುಂಬೈ ಬೌಲರ್ಗಳ ಮೇಲೆ ಸವಾರಿ ನಡೆಸಿದ್ರು. ಬೌಂಡರಿ-ಸಿಕ್ಸರ್ಗಳಲ್ಲೇ ರನ್ ಡೀಲ್ ಮಾಡಿದ ಕ್ಲಾಸೆನ್ 235.29ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ರು. 7 ಸಿಕ್ಸರ್, 4 ಬೌಂಡರಿ ಸಹಿತ 34 ಎಸೆತಗಳಲ್ಲಿ ಅಜೇಯ 80 ರನ್ ಚಚ್ಚಿದ್ರು. ಕ್ಲಾಸೆನ್ಗೆ ಸಾಥ್ ನೀಡಿದ ಮರ್ಕರಮ್ ಅಜೇಯ 42 ರನ್ ಸಿಡಿಸಿದ್ರು. ಮರ್ಕರಮ್ ಇನ್ನಿಂಗ್ಸ್ನಲ್ಲೂ 2 ಬೌಂಡರಿ, 1 ಸಿಕ್ಸರ್ಗಳಿದ್ವು.
20 ಓವರ್, 3 ವಿಕೆಟ್, ಬರೋಬ್ಬರಿ 277 ರನ್
ಪರಿಣಾಮ 20 ಓವರ್ಗಳ ಅಂತ್ಯಕ್ಕೆ ಕೇವಲ 3 ವಿಕೆಟ್ ಕಳೆದುಕೊಂಡ ಹೈದ್ರಾಬಾದ್ 277 ರನ್ ಸಿಡಿಸಿತು. ಈ ಮೂಲಕ ಆರ್ಸಿಬಿ ಹೆಸರಲ್ಲಿದ್ದ ಅತಿ ಹೆಚ್ಚು ರನ್ ದಾಖಲೆಯನ್ನ ಉಡೀಸ್ ಮಾಡಿತು.
ಇದನ್ನೂ ಓದಿ: ಕೊನೆಗೂ ಖುಷಿಪಟ್ಟ ಕಾವ್ಯ ಮಾರನ್; SRH ಬ್ಯಾಟಿಂಗ್ ನೋಡಿ ಕುಣಿದು ಕುಪ್ಪಳಿಸಿದ ವಿಡಿಯೋ
278 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಸುಲಭಕ್ಕೆ ಸೋಲೊಪ್ಪಿಕೊಳ್ಳಲಿಲ್ಲ. ರಣರಂಗದಲ್ಲಿ ಗೆಲುವಿಗಾಗಿ ಇನ್ನಿಲ್ಲಿದ ಕಸರತ್ತು ನಡೆಸ್ತು. 278 ರನ್ಗಳ ಬಿಗ್ ಟಾರ್ಗೆಟ್ ನೀಡಿದ ಸನ್ರೈಸರ್ಸ್ ಹೈದ್ರಾಬಾದ್, ಮುಂಬೈ ಇಂತಾ ಫೈಟ್ ಕೊಡುತ್ತೆ ಅಂತಾ ಕನಿಷ್ಟ ಊಹಿಸಿಯೂ ಇರಲಿಲ್ಲ. ಆದ್ರೆ ಮುಂಬೈನ ಹೋರಾಟ ನೋಡಿ ಹೈದ್ರಾಬಾದ್ ಪಡೆ ಒಂದು ಕ್ಷಣ ಬೆಚ್ಚಿಬಿತ್ತು.
ಮುಂಬೈ ಇಂಡಿಯನ್ಸ್ ಅಬ್ಬರದ ಆರಂಭ..!
ಬೆಟ್ಟದಂಥ ಟಾರ್ಗೆಟ್ ಬೆನ್ನತ್ತಿದ ಮುಂಬೈ ಅಬ್ಬರದ ಆರಂಭ ಪಡೆಯಿತು. ರೋಹಿತ್ ಶರ್ಮಾ, ಇಶಾನ್ ಕಿಶನ್ ಘರ್ಜಿಸಿದ್ರು. ಕೇವಲ 3 ಓವರ್ಗಳಲ್ಲೇ ತಂಡ 50 ರನ್ ಗಡಿ ದಾಟಿತು. ಇಶಾನ್ ಕಿಶನ್ 13 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಹಿತ 34 ರನ್ ಚಚ್ಚಿದ್ರು. ರೋಹಿತ್ ಶರ್ಮಾ 12 ಎಸೆತಗಳಲ್ಲಿ 26 ರನ್ ಸಿಡಿಸಿ ಔಟ್ ಆದರು.
ತಿಲಕ್ ವರ್ಮಾ-ನಮನ್ಧಿರ್ ಸೂಪರ್ ಜೊತೆಯಾಟ
ಬಳಿಕ ಜೊತೆಯಾದ ತಿಲಕ್ ವರ್ಮಾ, ನಮನ್ ಧಿರ್ ಕೂಡ ಬೌಂಡರಿ-ಸಿಕ್ಸರ್ಗಳಲ್ಲೇ ರನ್ ಡೀಲ್ ಮಾಡಿದರು. ಹೈದ್ರಾಬಾದ್ ಬೌಲರ್ಗಳ ಮೇಲೆ ಸವಾರಿ ಮಾಡಿ ಜಸ್ಟ್ 7.3 ಓವರ್ಗಳಲ್ಲೇ ತಂಡವನ್ನು 100ರ ಗಡಿ ದಾಟಿಸಿದ್ರು. 14 ಎಸೆತಗಳಲ್ಲಿ 30 ರನ್ ಸಿಡಿಸಿ ನಮನ್ ಔಟ್ ಆದರು.
ಹೋಮ್ಗ್ರೌಂಡ್ನಲ್ಲಿ ತಿಲಕ್ ವರ್ಮಾ ಆರ್ಭಟ..!
ಹೋಮ್ಗ್ರೌಂಡ್ನಲ್ಲಿ ಮುಂಬೈ ಬ್ಯಾಟರ್ ತಿಲಕ್ ವರ್ಮಾ ಅಬ್ಬರಿಸಿದ್ರು. ಸನ್ರೈಸರ್ಸ್ ಬೌಲರ್ಸ್ಗಳನ್ನ ದಿಟ್ಟವಾಗಿ ಎದುರಿಸಿದ ತಿಲಕ್, ಬೌಂಡರಿ ಸಿಕ್ಸರ್ ಸುರಿಮಳೆಗೈದ್ರು. ಕೇವಲ 24 ಎಸೆತಗಳಲ್ಲೇ ಹಾಫ್ ಸೆಂಚುರಿ ಸಿಡಿಸಿ ಸಂಭ್ರಮಿಸಿದರು. ಬರೋಬ್ಬರಿ 6 ಸಿಕ್ಸರ್, 2 ಬೌಂಡರಿ ಸಿಡಿಸಿದ ತಿಲಕ್ ವರ್ಮಾ, ಮಯಾಂಕ್ ಅಗರ್ವಾಲ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಇದರೊಂದಿಗೆ ಮುಂಬೈ ಇಂಡಿಯನ್ಸ್ ಸೋಲಿನ ಹಾದಿ ತುಳಿಯಿತು.
5ನೇ ವಿಕೆಟ್ಗೆ ಕ್ರಿಸ್ನಲ್ಲಿ ಜೊತೆಯಾದ ಟಿಮ್ ಡೇವಿಡ್-ಹಾರ್ದಿಕ್ ಪಾಂಡ್ಯ ಕೂಡ ದೊಡ್ಡ ಹೊಡೆತಗಳನ್ನ ಸಿಡಿಸಿದ್ರು. ರನ್ಗಳಿಕೆಯ ವೇಗ ಕಡಿಮೆಯಾಯ್ತು. ಸನ್ರೈಸರ್ಸ್ ಬೌಲರ್ಸ್ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ರು. ಹಾರ್ದಿಕ್ ಪಾಂಡ್ಯ 24 ರನ್ಗಳಿಸಿ ಔಟಾದ್ರೆ, ಟಿಮ್ ಡೇವಿಡ್ ಕೊನೆವರೆಗೂ ಹೋರಾಟ ನಡೆಸಿದರು. ಅಂತಿಮವಾಗಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡ ಮುಂಬೈ ಇಂಡಿಯನ್ಸ್ 246 ರನ್ ಕಲೆ ಹಾಕಿತು. ಬಿಗ್ ಮ್ಯಾಚ್ನಲ್ಲಿ ಹೈದ್ರಾಬಾದ್ 32 ರನ್ಗಳ ಗೆಲುವು ದಾಖಲಿಸಿತು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್