/newsfirstlive-kannada/media/post_attachments/wp-content/uploads/2024/04/Harsh-Jain.jpg)
ಹಣೆಬರಹ ಯಾವಾಗ, ಹೇಗೆ ಬದಲಾಗುತ್ತೋ ಗೊತ್ತಿಲ್ಲ. ಆದ್ರೆ ಒಂದಲ್ಲಾ ಒಂದು ದಿನ ಗೆಲುವು ಪ್ರತಿಯೊಬ್ಬರ ಜೀವನದಲ್ಲೂ ಬಂದೇ ಬರುತ್ತೆ. ಅದರಂತೆಯೇ ಹರ್ಷ್ ಜೈನ್ ಜೀವನದಲ್ಲೂ ಆಗಿದ್ದೇ ಅದು. ಅಂದು ಸ್ಟಾರ್ಟ್ ಅಪ್ ಹುಟ್ಟುಹಾಕಿ 150 ಬಾರಿ ತಿರಸ್ಕಾರಗೊಂಡ ವ್ಯಕ್ತಿ ಇಂದು ಬಹುಕೋಟಿಯ ಒಡೆಯ ಅಂದ್ರೆ ನಂಬ್ತೀರಾ? ನಂಬಲೇ ಬೇಕು?.
ಡ್ರೀಮ್ 11 ಬಗ್ಗೆ ಕೇಳಿದ್ದೀರಾ?. ಇದು ಭಾರತದ ಅತಿ ದೊಡ್ಡ ಫ್ಯಾಂಟಸಿ ಕ್ರೀಡಾ ವೆಬ್ಸೈಟ್. ಸದ್ಯ ಐಪಿಎಲ್ ಪಂದ್ಯಾಟದ ವೇಳೆ ಈ ಕ್ರೀಡಾ ವೆಬ್ಸೈಟ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಅಷ್ಟರಮಟ್ಟಿಗೆ ಡ್ರೀಮ್ 11 ಕ್ರಿಕೆಟ್ ಅಭಿಮಾನಿಗಳ ಮನ ಕದ್ದಿದೆ.
2008ರಲ್ಲಿ ಭಾರತೀಯ ಗೇಮಿಂಗ್ ಸ್ಟಾರ್ಟ್ಅಪ್ ಡ್ರೀಮ್ 11 ಸ್ಥಾಪನೆಗೊಂಡಿತು. 2019ರಲ್ಲಿ ಜನಪ್ರಿಯತೆಗೆ ಬಂತು. ಬಳಿಕ 2020ರಲ್ಲಿ ವಿಸ್ಕೃತ ಮಾರುಕಟ್ಟೆಯೊಂದಿಗೆ ಐಪಿಎಲ್ ಪ್ರಯೋಜಕರಾಗಿಯೂ ಸೇವೆ ಸಲ್ಲಿಸಿತು. ಸದ್ಯ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಪ್ರಯೋಜಕರಾಗಿದ್ದಾರೆ. 150 ಮಿಲಿಯನ್ಗೂ ಅಧಿಕ ಬಳಕೆದಾರರನ್ನು ಡ್ರೀಮ್ 11 ಒಳಗೊಂಡಿದೆ.
[caption id="attachment_57804" align="alignnone" width="800"]ಹರ್ಷ್ ಜೈನ್ ಫ್ಯಾಮಿಲಿ[/caption]
ಇದನ್ನೂ ಓದಿ: RCB vs MI: ಇಂದಿನ ಮ್ಯಾಚ್ ಬಗ್ಗೆ ಭವಿಷ್ಯ ನುಡಿದ ಆಮೆ! ಆರ್ಸಿಬಿ ಕತೆ ಏನು? ವಿಡಿಯೋ ನೋಡಿ
ಡ್ರೀಮ್ 11 ಸಿಇಒ ಹರ್ಷ್ ಜೈನ್ ಈ ಸ್ಟಾರ್ಟ್ ಅಪ್ ಅನ್ನು ಮುನ್ನೆಲೆಗೆ ತರಲು ಸಾಕಷ್ಟು ಶ್ರಮ ವಹಿಸಿದ್ದರು. ಅಚ್ಚರಿಯ ಸಂಗತಿ ಎಂದರೆ ವ್ಯವಹಾರದ ವಿಚಾರವಾಗಿ 150 ಬಾರಿ ತಿರಸ್ಕಾರಗೊಂಡ ಡ್ರೀಮ್ 11 ಇಂದು ತನ್ನದೇ ರೀತಿಯಲ್ಲಿ ಹೆಸರು ಮಾಡಿದೆ.
ಹರ್ಷ್ ಜೈನ್ ಡ್ರೀಮ್ 11ವನ್ನು ಪ್ರಾರಂಭಿಸಿದಾಗ ಅನೇಕ ನಿರಾಕರಣೆ ಮತ್ತು ಅಡೆತಡೆಗಳನ್ನು ಎದುರಿಸುತ್ತಾ ಬರುತ್ತಾಋಎ. ಆದರೆ ಬರುಬರುತ್ತಾ ಅತ್ಯಂತ ಯಶಸ್ವಿ ಗೇಮಿಂಗ್ ಫ್ಲಾಟ್ಫಾರ್ಮ್ ಅನ್ನು ರಚಿಸುವ ಮೂಲಕ ಹೆಸರುಗಳಿಸಿದರು.
[caption id="attachment_57802" align="alignnone" width="800"]ಹರ್ಷ್ ಜೈನ್ ಮತ್ತು ಭವಿತ್[/caption]
ಹರ್ಷ್ ಜೈನ್
ಜೈ ಕಾರ್ಪ್ ಲಿಮಿಟೆಡ್ನ ಅಧ್ಯಕ್ಷರಾಗಿದ್ದ ಆನಂದ್ ಜೈನ್ರವರ ಮಗನೇ ಹರ್ಷ್ ಜೈನ್. ಮುಂಬೈನಲ್ಲಿ ಜನಿಸಿದ ಇವರು ಗೇಮಿಂಗ್ ಮತ್ತು ಕ್ರೀಡೆಯಲ್ಲಿ ಉತ್ಸಾಹಿಯಾಗಿದ್ದರು. ಲಂಡನ್ನಲ್ಲಿ ಹೈಸ್ಕೂಲ್ ವ್ಯಾಸಂಗ ಮುಗಿಸಿ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕ್ ಎಂಜಿನಿಯರಿಂಗ್ನಲ್ಲಿ ಬ್ಯಾಚುರಲ್ ಆಫ್ ಸೈನ್ಸ್ ಪದವಿ ಪಡೆದರು. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಿದರು.
ವಿದ್ಯಾಭ್ಯಾಸ ಮುಗಿಸಿದ ಬಳಿಕ ಮೈಕ್ರೋಸಾಫ್ಟ್ನಲ್ಲಿ ಇಂಟರ್ನ್ ಆಗಿ ಕೆಲಸ ಮಾಡಿದರು. ಆ ಬಳಿಕ ಭಾರತ ಬಂದು ಉದ್ಯೋಗದ ಬಗ್ಗೆ ಯೋಚಿಸುತ್ತಿದ್ದಾಗ ಐಪಿಎಲ್ ಕೂಡ ಆರಂಭವಾಯಿತು. ಇದನ್ನು ಗಮನದಲ್ಲಿಟ್ಟುಕೊಂಡು ತನ್ನ ಸ್ನೇಹಿತ ಭವಿತ್ ಜೊತೆಗೂಡಿ ಡ್ರೀಮ್ 11 ಸ್ಟಾರ್ಟ್ ಅಪ್ ಪ್ರಾರಂಭಿಸಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ