/newsfirstlive-kannada/media/post_attachments/wp-content/uploads/2024/05/RCB-41.jpg)
ಐಪಿಎಲ್​ 2024ರ ಪ್ಲೇ ಆಫ್ ರೇಸ್​ ರೋಚಕವಾಗಿದೆ. ದಿನದಿಂದ ದಿನಕ್ಕೆ ತಂಡಗಳ ವರಸೆ ಬದಲಾಗುತ್ತಿದ್ದು, ಮಾಡು ಇಲ್ಲವೇ ಮಡಿ ಅಂತಾ ಹೊರಾಟ ಮಾಡುತ್ತಿವೆ. ಅಂತೆಯೇ ನಿನ್ನೆ ನಡೆದ ಪಂದ್ಯದಲ್ಲಿ ಎಲ್​ಎಸ್​ಜಿ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಬಗ್ಗು ಬಡಿದಿದೆ.
ಡೆಲ್ಲಿ ಕ್ಯಾಪಿಟಲ್ಸ್​ ಗೆಲುವು ದಾಖಲಿಸುತ್ತಿದ್ದಂತೆಯೇ ಪಾಯಿಂಟ್ಸ್​ ಟೇಬಲ್​ನಲ್ಲಿ ಆರ್​​ಸಿಬಿಯನ್ನು ಬೀಟ್ ಮಾಡಿ ಮೇಲೆ ಹೋಗಿದೆ. ಈ ಮೂಲಕ ಪ್ಲೇ ಆಫ್ ಕನಸು ಕಾಣುತ್ತಿರುವ ಆರ್​ಸಿಬಿ ಐದನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿದಿದೆ.
ಆರ್​ಸಿಬಿ ಹೋರಾಟಕ್ಕೆ ಅಡ್ಡಿಯಾಗುತ್ತಾ..?
ಖಂಡಿತ ಇಲ್ಲ! ಡೆಲ್ಲಿ ಕ್ಯಾಪಿಟಲ್ಸ್​ ಈಗಾಗಲೇ ತನ್ನ ಕೋಟಾದ 14 ಪಂದ್ಯಗಳನ್ನೂ ಆಡಿ ಪೂರ್ಣಗೊಳಿಸಿದೆ. -0.377 ನೆಟ್​​ ರನ್​​ ರೇಟ್​ನೊಂದಿಗೆ 7 ಪಂದ್ಯಗಳನ್ನು ಗೆದ್ದು 14 ಪಾಯಿಂಟ್ಸ್​​ಗೆ ಮಾಡಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಬಳಿ ಮುಂದೆ ಯಾವುದೇ ಲೀಗ್ ಪಂದ್ಯಗಳು ಉಳಿದಿಲ್ಲ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಪ್ಲೇ ಆಫ್ ಕನಸು ಕಾಣಲು ಯಾವುದೇ ಆಯ್ಕೆಗಳಿಲ್ಲ.
/newsfirstlive-kannada/media/post_attachments/wp-content/uploads/2024/05/RCB-CSK-1.jpg)
ಆದರೆ ನೆಟ್​​ ರನ್​​​ ರೇಟ್​ನಲ್ಲಿ ಮುಂದೆ ಇರುವ ಆರ್​ಸಿಬಿಗೆ ಇನ್ನೂ ಒಂದು ಪಂದ್ಯ ಬಾಕಿ ಇದೆ. ಮೇ 18 ರಂದು ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಆರ್​ಸಿಬಿಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಇಲ್ಲಿ ಆರ್​ಸಿಬಿ ಸಿಎಸ್​ಕೆ ವಿರುದ್ಧ 18 ರನ್​ಗಳ ಅಂತರದಲ್ಲಿ ಅಥವಾ 18.1 ಓವರ್​ ಒಳಗೆ ಗೆಲುವು ಸಾಧಿಸಿದರೆ ಆರ್​ಸಿಬಿ ಪ್ಲೇ-ಆಫ್ ಪ್ರವೇಶ ಮಾಡಲಿದೆ.
ಇನ್ನು ರಾಜಸ್ಥಾನ್ ರಾಯಲ್ಸ್​, ಕೋಲ್ಕತ್ತ ನೈಟ್ ರೈಡರ್ಸ್​ ಪ್ಲೇ-ಆಫ್ ಪ್ರವೇಶ ಮಾಡಿವೆ. ಮೂರನೇ ಸ್ಥಾನದ ಮೇಲೆ ಸನ್ ರೈಸರ್ಸ್ ಹೈದರಾಬಾದ್ ಕಣ್ಣಿಟ್ಟಿದೆ. ಹೈದರಾಬಾದ್ ಬಳಿ ಇನ್ನೂ ಎರಡು ಪಂದ್ಯಗಳು ಬಾಕಿ ಇದ್ದು, ಯಾವುದಾದರೂ ಒಂದು ಪಂದ್ಯ ಗೆದ್ದರೆ ಪ್ಲೇ-ಪ್ರವೇಶ ಖಚಿತವಾಗಲಿದೆ. ಇತ್ತ ನಾಲ್ಕನೇ ಪ್ಲೇಸ್​ಗೆ ಸಿಎಸ್​ಕೆ ಮತ್ತು ಆರ್​ಸಿಬಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಡಲಿದೆ.
ಇದನ್ನೂ ಓದಿ:ಆರ್​ಸಿಬಿ ಪ್ಲೇ ಆಫ್ ಹಾದಿ ಮತ್ತಷ್ಟು ಸುಲಭ.. ಬದಲಾದಂತಿದೆ ಬೆಂಗಳೂರು ತಂಡದ ಅದೃಷ್ಟ..!
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us