Advertisment

ಬೆಂಗಳೂರಲ್ಲಿ IPL ಪಂದ್ಯ; ಪ್ಲೇಯಿಂಗ್-11ನಿಂದ ಆರ್​ಸಿಬಿಯ ಈ ಮೂವರು ಆಟಗಾರರಿಗೆ ಕೊಕ್?

author-image
Ganesh
Updated On
ಆರ್​ಸಿಬಿ ಮುಂದೆ 5 ಪ್ರಶ್ನೆಗಳು..!! ಮತ್ತೆ ರೊಚ್ಚಿಗೆದ್ದ ರಾಯಲ್ ಅಭಿಮಾನಿಗಳು..!
Advertisment
  • ಆರ್​ಸಿಬಿ ತಂಡದಲ್ಲಿ ಭಾರೀ ಬದಲಾವಣೆ ನಿರೀಕ್ಷೆ
  • ಇಂಪ್ಯಾಕ್ಟ್​ ಪ್ಲೇಯರ್​ ಮೇಲೆ ಎಲ್ಲರ ಕಣ್ಣು ಹೆಚ್ಚಿದೆ
  • ಇಂದು ಸಂಜೆ 7.30ಕ್ಕೆ ಪಂದ್ಯ ಆರಂಭ ಆಗಲಿದೆ

IPL 2024 ರ 15ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಲಿದೆ. ಉಭಯ ತಂಡಗಳು ಈ ಋತುವಿನಲ್ಲಿ ಎರಡನೇ ಗೆಲುವು ಗುರಿಯಲ್ಲಿವೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಜೆ 7.30ಕ್ಕೆ ನಡೆಯಲಿದೆ.

Advertisment

ಲಕ್ನೋ ಇದುವರೆಗೆ ಎರಡು ಪಂದ್ಯಗಳನ್ನು ಆಡಿದ್ದು, ಒಂದರಲ್ಲಿ ಸೋತಿದ್ದರೆ, ಮೂರು ಪಂದ್ಯಗಳನ್ನಾಡಿರುವ ಬೆಂಗಳೂರು ತಂಡ 2ರಲ್ಲಿ ಸೋತಿದೆ. ಇಂತಹ ಪರಿಸ್ಥಿತಿಯಲ್ಲಿ ಎರಡೂ ತಂಡಗಳು ಪ್ಲೇಯಿಂಗ್ 11ನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಆ ದೇವರೇ ವರ ಕೊಟ್ಟಂತೆ ಆಯ್ತು..’ ಕೊಹ್ಲಿ ಕಾಲಿಗೆ ಬಿದ್ದಿದ್ದ ರಾಯಚೂರಿನ ಯುವಕನಿಗೆ ಸಖತ್ ಡಿಮ್ಯಾಂಡ್​..!

ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ 21 ರನ್‌ಗಳಿಂದ ಜಯ ಸಾಧಿಸಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತವರು ನೆಲದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್‌ಗಳಿಂದ ಸೋತಿದೆ. ಹೀಗಾಗಿ ಲಕ್ನೋ ತಂಡ ಪ್ಲೇಯಿಂಗ್ ಇಲೆವೆನ್‌ನಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಆರ್‌ಸಿಬಿ ಗೆಲುವಿನ ಹಳಿಗೆ ಮರಳಲು ಬದಲಾವಣೆ ಮಾಡಬಹುದು.
Advertisment

publive-image

ಕಳಪೆ ಬೌಲಿಂಗ್​ನಿಂದ ಸೋಲು ಅನುಭವಿಸ್ತಿರುವ RCB, ಪ್ರಮುಖ ಬೌಲರ್​​ಗಳಿಗೆ ಬೆಂಜ್ ನೀಡುವ ಸಾಧ್ಯತೆ ಇದೆ. ವೇಗದ ಬೌಲರ್ ಅಲ್ಜಾರಿ ಜೋಸೆಫ್ ಇಂಪ್ರೆಸೀವ್ ಆಗಿಲ್ಲ. ಫರ್ಗುಸನ್, ಜೋಸೆಫ್ ಅವರನ್ನು ಬದಲಾಯಿಸುವ ನಿರೀಕ್ಷೆ ಇದೆ. ರಜತ್ ಪಾಟಿದಾರ್​ ಅವರನ್ನೂ ಕೂರಿಸಬಹುದು. ಪಾಟಿದಾರ್ ಬದಲಿಗೆ, ಆಲ್‌ರೌಂಡರ್ ಮಹಿಪಾಲ್ ಲೊಮ್ರೋರ್ ಆಡುವ ಹನ್ನೊಂದರ ಭಾಗವಾಗಬಹುದು. ಕಳೆದ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ತೋರಿದ ವಿಜಯಕುಮಾರ್ ವೈಶಾಖ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್​​ ಆಗಿ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಸಂಭಾವ್ಯ ಆರ್​ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಕ್ಯಾಮೆರಾನ್ ಗ್ರೀನ್, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಲಾಕಿ ಫರ್ಗುಸನ್, ಮಯಾಂಕ್ ದಾಗರ್, ಮೊಹಮ್ಮದ್ ಸಿರಾಜ್, ಯಶ್ ದಯಾಲ್.

ಇಂಪ್ಯಾಕ್ಟ್ ಆಟಗಾರ- ವಿಜಯಕುಮಾರ್ ವೈಶಾಖ್.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment