newsfirstkannada.com

ಬೌಲರ್​ಗಳ ಎದೆಯಲ್ಲಿ ನಡುಕ ಹುಟ್ಟಿಸ್ತಿರೋ SRH.. ಸೂಪರ್​ ಪವರ್​ ಬ್ಯಾಟಿಂಗ್​​ನ ಸಿಕ್ರೇಟ್​ ಏನು?

Share :

Published April 23, 2024 at 12:43pm

    ಹೈದ್ರಾಬಾದ್ ಸೂಪರ್​​ ಪವರ್​​​ ಬ್ಯಾಟಿಂಗ್​​ಗೆ ಕ್ರಿಕೆಟ್​ ಫ್ಯಾನ್ಸ್​ ಎಲ್ಲ ದಂಗು

    IPL ಚರಿತ್ರೆಯಲ್ಲಿ ಹೊಸ ಅಲೆ ಸೃಷ್ಟಿಸ್ತಿರೋ ಸನ್​ ರೈಸರ್ಸ್​ ಹೈದ್ರಾಬಾದ್

    ಹೈದ್ರಾಬಾದ್​ ವಿಧ್ವಂಸಕ ಬ್ಯಾಟಿಂಗ್​ಗೆ ಅಭಿಮಾನಿಗಳು ಏನ್ ಅಂತಾರೆ..?

ಐಪಿಎಲ್​​​​​ ಹೇಳಿಕೇಳಿ ಇಲ್ಲಿ ನಡಿಯೋದು ರನ್ ಜಾತ್ರೆ. ಈ ರನ್ ಭರಾಟೆಯ ಕೂಟವನ್ನ ಸನ್​ರೈಸರ್ಸ್​ ಹೈದ್ರಾಬಾದ್​​ ತಂಡ ಮತ್ತೊಂದು ಲೆವೆಲ್​ಗೆ ಕೊಂಡೊಯ್ದಿದೆ. ಅತಿ ಆಕ್ರಮಣಕಾರಿ ಆಟಕ್ಕೆ ಕ್ರಿಕೆಟ್​ ಜಗತ್ತು ಬೆಚ್ಚಿ ಬಿದ್ದಿದೆ. ದಂಡಂ ದಶಗುಣಂ ಆಟಕ್ಕೆ ಎದುರಾಳಿ ತಂಡ ಥಂಡಾ ಹೊಡಿತಿದೆ. ಅಷ್ಟಕ್ಕೂ ಆರೆಂಜ್ ಆರ್ಮಿಯ ಸೂಪರ್​ ಪವರ್​ ಬ್ಯಾಟಿಂಗ್​​ನ ಸಿಕ್ರೇಟ್​ ಏನು?. ಯಾಕೆ ಪ್ರತಿ ಪಂದ್ಯದಲ್ಲಿ 200 ರನ್ ಟಾರ್ಗೆಟ್ ಮಾಡಿ ಆಡ್ತಿದೆ.?

ಇವರೇನಾ ಮನುಷ್ಯರಾ? ಇಲ್ಲ ಬೇರೆ ಗ್ರಹದಿಂದ ಬಂದವರಾ..?

ಇವ್ರ ಆಟ ನೋಡಿದ್ರೆ ತಲೆ ತಿರುಗ್ತಿದೆ. ಇವರು ನಿಜಕ್ಕೂ ಮನುಷ್ಯರಾ, ಇಲ್ಲ ಗ್ರಹದಿಂದ ಬಂದವರಾ.? ಎದುರಾಳಿ ತಂಡ ಇವರ ವಿರುದ್ಧ ಆಡದೇ ಸೋತೆವೆಂದು ಒಪ್ಪಿಕೊಂಡು ಹಿಂದಕ್ಕೆ ಸರಿಬೇಕು. ಇವ್ಯಾವು ನಾವು ಹೇಳ್ತಿರೋ ಮಾತುಗಳಲ್ಲ. ಪ್ರಸಕ್ತ ಐಪಿಎಲ್​ನಲ್ಲಿ ಹೈದ್ರಾಬಾದ್​ ವಿಧ್ವಂಸಕ ಬ್ಯಾಟಿಂಗ್​ ಕಂಡು ಕ್ರಿಕೆಟ್ ಪ್ರೇಮಿಗಳು ಆಡ್ತಿರೋ ಮಾತುಗಳಿವು.

ಇದನ್ನೂ ಓದಿ: ರೋಹಿತ್​​​-ಕೊಹ್ಲಿರನ್ನ ಓವರ್​ಟೇಕ್ ಮಾಡ್ತಿರೋ ಯಂಗ್​ಸ್ಟರ್ಸ್​.. ಯುವ ಆಟಗಾರರ ಬ್ಯಾಟಿಂಗ್​ಗೆ ದಿಗ್ಗಜರು ಶಾಕ್ 

ಇದನ್ನೂ ಓದಿ: 2 ಹೆಲಿಕಾಪ್ಟರ್ ನಡುವೆ ಭಯಾನಕ ಡಿಕ್ಕಿ.. ಆಗಸದಲ್ಲೇ ಉಸಿರು ಚೆಲ್ಲಿದ 10 ಸಿಬ್ಬಂದಿ

ಅಭಿಮಾನಿಗಳು ಹೇಳಿದ್ದರಲ್ಲಿ ತಪ್ಪಿಲ್ಲ ಬಿಡಿ. ಯಾಕಂದ್ರೆ ತಂಡದ ಬ್ಯಾಟಿಂಗ್ ಘರ್ಜನೆ ಹಾಗಿದೆ. ನಿಜಕ್ಕೂ ಆರೆಂಜ್ ಆರ್ಮಿಯದ್ದು ಸೂಪರ್​ ಪವರ್​ ಬ್ಯಾಟಿಂಗ್. ಈ ಟೂರ್ನಿಯಲ್ಲಿ ಅವರಷ್ಟು ಪವರ್​ಫುಲ್​ ಬ್ಯಾಟಿಂಗ್​​​ ಯಾರದ್ದು ಇಲ್ಲ. ಅದ್ಯಾವ ಮಟ್ಟಿಗೆ ಅಂದ್ರೆ ಆಡಿದ ಏಳು ಪಂದ್ಯಗಳಲ್ಲೆ 4 ಬಾರಿ 200 ಪ್ಲಸ್ ರನ್​ ಚಚ್ಚಿ ಕ್ರಿಕೆಟ್​ ಲೋಕವನ್ನೇ ದಂಗಾಗಿಸಿದ್ದಾರೆ.

ಹೈದ್ರಾಬಾದ್​ ಡಬಲ್​ ಸೆಂಚುರಿ ಧಮಾಕ..!

ಸನ್​ರೈಸರ್ಸ್​ ಹೈದ್ರಾಬಾದ್​​​​​ ತಂಡ ಕೆಕೆಆರ್ ವಿರುದ್ಧ 7 ವಿಕೆಟ್​​ ನಷ್ಟಕ್ಕೆ 208 ರನ್ ಗಳಿಸಿದ್ರೆ, ಮುಂಬೈ ವಿರುದ್ಧ ದಾಖಲೆಯ 277 ರನ್​​​ ಕಲೆ ಹಾಕ್ತು. ಆರ್​ಸಿಬಿ ವಿರುದ್ಧವಂತೂ 3 ವಿಕೆಟ್​ನಷ್ಟಕ್ಕೆ 287 ರನ್ ಗಳಿಸಿ ಐಪಿಎಲ್​​ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ದಾಖಲಿಸ್ತು. ಇನ್ನು ಡೆಲ್ಲಿ ವಿರುದ್ಧ 266 ರನ್​ ಚಚ್ಚಿ ಎಲ್ಲರನ್ನ ಬೆರಗಾಗಿಸ್ತು. ನಿರ್ಭಯವಾಗಿ ಬ್ಯಾಟ್ ಬೀಸ್ತಿರೋ ಹೈದ್ರಾಬಾದ್​ ಬ್ಯಾಟ್ಸ್​ಮನ್​ಗಳು ಸಿಕ್ಸರ್​​​​​​​​​​​​ಗಳ ಹೊಳೆಯನ್ನೆ ಹರಿಸ್ತಿದ್ದಾರೆ. ಚೆಂಡನ್ನ ಬೌಂಡರಿ ಗೆರೆ ದಾಟಿಸೋದ್ರಲ್ಲಿ ಆರೆಂಜ್ ಆರ್ಮಿನೇ ಅಗ್ರಸ್ಥಾನದಲ್ಲಿದೆ.

ಪ್ರಸಕ್ತ ಐಪಿಎಲ್​​​​ನಲ್ಲಿ ಅತಿಹೆಚ್ಚು ಸಿಕ್ಸ್​

ಬೌಲರ್​​ಗಳಿಗೆ ಮನಬಂದಂತೆ ರುಬ್ತಿರೋ ಹೈದ್ರಾಬಾದ್​ ತಂಡ 17ನೇ ಐಪಿಎಲ್​ನಲ್ಲಿ ಒಟ್ಟು 99 ಸಿಕ್ಸ್ ಸಿಡಿಸಿ ಟಾಪರ್ ಅನ್ನಿಸಿಕೊಂಡಿದೆ. ಮುಂಬೈ ಇಂಡಿಯನ್ಸ್​ 77 ಸಿಕ್ಸ್​ನೊಂದಿಗೆ 2ನೇ ಸ್ಥಾನದಲ್ಲಿದ್ರೆ, ಆರ್​ಸಿಬಿ 65 ಸಿಕ್ಸ್ ಸಿಡಿಸಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಕೆಕೆಆರ್​ 62 ಹಾಗೂ ಡೆಲ್ಲಿ 61 ಸಿಕ್ಸ್ ಸಿಡಿಸಿ ಕ್ರಮವಾಗಿ 4 ಹಾಗೂ 5ನೇ ಸ್ಥಾನದಲ್ಲಿದೆ.

ಹೈದ್ರಾಬಾದ್​ ರೌದ್ರವತಾರದ ಸಿಕ್ರೇಟ್ ಏನು..?

ಹೈದ್ರಾಬಾದ್​​​​​​​​ ಹಿಂದೆಂದೂ ಕಾಣದ ರೀತಿಯಲ್ಲಿ ನೆಕ್ಸ್ಟ್​ ಲೆವೆಲ್​ ಬ್ಯಾಟಿಂಗ್​ ಮಾಡ್ತಿದೆ. ಇದಕ್ಕೆಲ್ಲ ಕಾರಣ ಸಿಡಿಗುಂಡು ಟ್ರಾವಿಸ್​​ ಹೆಡ್​​, ಅಭಿಷೇಕ್ ಶರ್ಮಾ ಹೆನ್ರಿಚ್ ಕ್ಲಾಸೆನ್​​​ ಹಾಗೂ ಅಬ್ದುಲ್ ಸಮದ್​​​. ಈ ನಾಲ್ವರು ಬ್ಯಾಟರ್​ಗಳು ವಿಧ್ವಂಸಕ ಆಟವಾಡಿ ಬೃಹತ್​ ಮೊತ್ತ ಕಲೆಹಾಕಲು ಕಾರಣವಾಗ್ತಿದ್ದಾರೆ.

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಗೆ ಥ್ಯಾಂಕ್ಸ್​ ಕೊಟ್ಟು, ತಬ್ಬಿಕೊಂಡಿದ್ದಕ್ಕೆ ಮಹಿಳಾ ASI ಅಮಾನತು

ಅಪ್ರೋಚ್ ಚೇಂಜ್​​​​​.. ನೋ ಡಿಫೆನ್ಸಿವ್​​​​​​..ಓನ್ಲಿ ಅಗ್ರೆಸ್ಸಿವ್..!

ಪ್ಯಾಟ್ ಕಮಿನ್ಸ್ ಕ್ಯಾಪ್ಟನ್​ ಆದ ಬಳಿಕ ಎಸ್​​ಆರ್​ಹೆಚ್​​​ ಬಳಗದ ಅಪ್ರೋಚ್​ ಕಂಪ್ಲೀಟ್ ಬದಲಾಗಿದೆ. ಡಿಫೆನ್ಸಿವ್ ಮೂಡ್​ನಲ್ಲಿ ತಂಡ ಇಲ್ಲವೇ ಇಲ್ಲ. ಅಗ್ರೆಸ್ಸಿವ್​ ಆಟವಾಡಿ ಎದುರಾಳಿ ತಂಡದ ಬೌಲರ್​ಗಳ ಹೆಡೆಮರಿ ಕಟ್ಟುತ್ತಿದ್ದಾರೆ. ಕೆಕೆಆರ್​​ ಹಾಗೂ ಮುಂಬೈನಂತ ಮಾಜಿ ಚಾಂಪಿಯನ್​ ತಂಡಗಳೇ ಹೈದ್ರಾಬಾದ್​​​ ಆಕ್ರಮಣಕಾರಿ ಆಟಕ್ಕೆ ಬೆಚ್ಚಿ ಬಿದ್ದಿವೆ.

ಪವರ್​​ಫುಲ್​ ಬ್ಯಾಟಿಂಗ್​ ತಂಡಕ್ಕೆ ಟ್ರೋಫಿ ಒಲಿಯುತ್ತಾ..?

ಆಡಿದ 7 ಪಂದ್ಯಗಳಲ್ಲಿ ಐದು ಗೆದ್ದಿರೋ ಹೈದ್ರಾಬಾದ್​​​ ತಂಡ ಪ್ರಶಸ್ತಿ ಗೆಲ್ಲುವ ಹಾಟ್​ ಫೇವರಿಟ್​ ತಂಡವಾಗಿ ಗುರುತಿಸಿಕೊಂಡಿದೆ. ಕಮಿನ್ಸ್ ಪಡೆ 3 ವಿಭಾಗದಲ್ಲಿ ಬಲಿಷ್ಠವಾಗಿದೆ. ಬ್ಯಾಟಿಂಗ್​​ನಲ್ಲಿ ಆಕ್ರಮಣಕಾರಿ ಆಟವಾಡ್ತಿದ್ರೆ, ಬೌಲರ್ಸ್​ ಮಿಂಚಿನ ದಾಳಿ ನಡೆಸ್ತಿದ್ದಾರೆ. ಟೂರ್ನಿ ಪೂರ್ತಿ ಆರೆಂಜ್ ಆರ್ಮಿ ಇದೇ ಅಬ್ಬರವನ್ನ ಮುಂದುವರಿಸಿದ್ದೆ ಆದಲ್ಲಿ 8 ವರ್ಷಗಳ ಬಳಿಕ ಟ್ರೋಫಿ ಎತ್ತಿ ಹಿಡಿಯೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬೌಲರ್​ಗಳ ಎದೆಯಲ್ಲಿ ನಡುಕ ಹುಟ್ಟಿಸ್ತಿರೋ SRH.. ಸೂಪರ್​ ಪವರ್​ ಬ್ಯಾಟಿಂಗ್​​ನ ಸಿಕ್ರೇಟ್​ ಏನು?

https://newsfirstlive.com/wp-content/uploads/2024/04/SRH_ABHISHEK.jpg

Load More