/newsfirstlive-kannada/media/post_attachments/wp-content/uploads/2024/03/Panjab-vs-DC.png)
2024ರ ಐಪಿಎಲ್​ ಆರಂಭಗೊಂಡಿದೆ. ಇಂದು 2ನೇ ದಿನಕ್ಕೆ ಕಾಲಿಟ್ಟಿದೆ. ಅಂದಹಾಗೆಯೇ ಇಂದು ಶನಿವಾರ ಬೇರೆ, ಡಬಲ್​ ಧಮಾಕವಿದೆ. ಮೊದಲ ಪಂದ್ಯ ಪಂಜಾಬ್​ ಕಿಂಗ್ಸ್​ vs ಡೆಲ್ಲಿ ತಂಡದ ನಡುವೆ ನಡೆಯಲಿಕ್ಕಿದೆ. ಪಂಜಾಬ್​ ಯದವೀಂದ್ರ ಸಿಂಗ್​ ಕ್ರಿಕೆಟ್​ ಇಂಟರ್​​ನ್ಯಾಷನಲ್​ ಕ್ರಿಕೆಟ್​​ ಸ್ಟೇಡಿಯಂನಲ್ಲಿ ಪಂದ್ಯವಾಡಲಿದ್ದಾರೆ. 2ನೇ ಪಂದ್ಯ 7:30ಕ್ಕೆ ಗಂಟೆಗೆ ಪ್ರಾರಂಭವಾಗಲಿದೆ. ಅದರಲ್ಲಿ ಕೋಲ್ಕತ್ತಾ vs ಹೈದರಾಬಾದ್ ಹೋರಾಡಲಿದೆ. ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ಮ್ಯಾಚ್​ ನಡೆಯಲಿಕ್ಕಿದೆ.
ಪಂಜಾಬ್​ಕಿಂಗ್​ ತಂಡವನ್ನ ಶಿಖರ್​ ಧವನ್​ ಮುನ್ನಡೆಸಿದರೆ, ಅತ್ತ ಡೆಲ್ಲಿ ತಂಡವನ್ನ ರಿಷಭ್​ ಪಂತ್​ ಮುನ್ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಎರಡು ತಂಡ ಇಂದು ಮೊದಲ ಪಂದ್ಯವನ್ನು ಆಡುತ್ತಿದ್ದಾರೆ. ಅಭಿಮಾನಿಗಳಂತೂ ಈ ಪಂದ್ಯವನ್ನು ಕಣ್ತುಂಬಿಕ್ಕೊಳ್ಳಲು ಎದುರು ನೋಡುತ್ತಿದ್ದಾ​ರೆ.
ಒಂದೇ ತಂಡದಲ್ಲಿ ಆರು ವಿಕೆಟ್​ ಕೀಪರ್
ಪಂಜಾಬ್​ ಮತ್ತು ಡೆಲ್ಲಿ ತಂಡವನ್ನು ಗಮನಿಸಿದಾಗ ಇಂದು ರಿಷಭ್​ ಪಂತ್​ ತಂಡ ಗೆಲುವುದ ಸಾಧಿಸುವ ಲಕ್ಷಣ ಕಾಣುತ್ತಿದೆ. ಅಚ್ಚರಿಯ ಸಂಗತಿ ಎಂದರೆ ರಿಷಬ್​ ಗಾಯಗೊಂಡಿರುವ ಹುಲಿಯಾಗಿದ್ದಾರೆ. ಅಪಘಾತದಿಂದ ಚೇತರಿಸಿಕೊಂಡು ಫಿಟ್ನೆಸ್​​ ಟೆಸ್ಟ್​ನಲ್ಲಿ ಸೈ ಎನಿಸಿಕೊಂಡು ಇದೀಗ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಅಂದಹಾಗೆಯೇ, ಡೆಲ್ಲಿ ತಂಡದಲ್ಲಿ ಆರು ಮಂದಿ ವಿಕೆಟ್​ ಕೀಪರ್​ ಇದ್ದಾರೆ. ರಿಷಭ್​ ನಾಯಕನ ಸ್ಥಾನ ಮುನ್ನಡೆಸುವುದರ ಜೊತೆಗೆ ವಿಕೇಟ್​ ಕೀಪರ್​ ಕೂಡ ಆಗಿದ್ದಾರೆ. ಇದಲ್ಲದೆ, ಅಭಿಷೇಕ್​​ ಪೊರೆಲ್​, ಕುಮಾರ್​​ ಕುಶಾಗ್ರ, ರಿಕ್ಕಿ ಭುಯಿ, ಶಾಯ್​ ಹೋಪ್​. ಥ್ರಿಸ್ಟಾನ್​ ಸ್ಟಬ್ಸ್​ ಕೂಡ ವಿಕೇಟ್​ ಕೀಪಿಂಗ್​ನಲ್ಲಿ ಸೈ ಎನಿಸಿಕೊಂಡವರು.
ಪಂಜಾಬ್​ನಲ್ಲಿದ್ದಾರೆ ಮೂವರು ಕೀಪರ್
ಅತ್ತ ಪಂಜಾಬ್​ನಲ್ಲೂ ವಿಕೆಟ್​ ಕೀಪರ್​ ಕೊರತೆಯೇನಿಲ್ಲ. ಮೂವರು ವಿಕೆಟ್​ ಕೀಪರ್​ ಕಾಣಿಸಿಕೊಂಡಿದ್ದಾರೆ. ಜಿತೇಶ್​ ಶರ್ಮಾ, ಜಾನಿ ಬೈರ್ಸ್ಟಾ, ಪ್ರಭಾಸಿಮ್ರಾನ್ ಸಿಂಗ್ ಕೂ ಕೀಪಿಂಗ್​ ಮಾಡುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us