newsfirstkannada.com

ಈ ಬಾರಿಯು ಟ್ರೋಫಿ ಗೆಲ್ಲಲ್ವಾ.. RCBಯ ವೀಕ್​ ಬೌಲಿಂಗ್​​​​​ಗೆ ಮಾಜಿ ಕ್ರಿಕೆಟರ್ಸ್ ಭಾರೀ​ ಟೀಕೆ!

Share :

Published March 31, 2024 at 9:30am

Update March 31, 2024 at 9:49am

  ಆರ್​ಸಿಬಿ ಈ ವೈಫಲ್ಯಕ್ಕೆ ಟೀಮ್ ಮ್ಯಾನೇಜ್​ಮೆಂಟ್​ ನೇರ ಹೊಣೆ

  ಟಿ20 ಕ್ರಿಕೆಟ್​ನಲ್ಲಿ ರನ್​​​​​​ಗಳಿಗೆ ಕಡಿವಾಣ ಹಾಕುವುದೇ ತುಂಬಾ ಮುಖ್ಯ

  ನ್ಯೂ ಬೌಲರ್​​ ಯಶ್​ ದಯಾಳ್​​​, ಅಲ್ಜರಿ ಜೋಸೆಫ್​​ ಅಸ್ಥಿರ ಪ್ರದರ್ಶನ

ವರ್ಷಗಳು ಉರುಳುತ್ತಿವೆ. ಆದರೆ ಆರ್​ಸಿಬಿ ಹಣೆಬರಹ ಬದಲಾಗುವ ಹಾಗೇ ಕಾಣ್ತಿಲ್ಲ. ರೆಡ್​ ಆರ್ಮಿ ಆನ್​​ಫೀಲ್ಡ್​ನಲ್ಲಿ ಹಳೇ ಚಾಳಿ ಮುಂದುವರಿಸಿದೆ. ಚೊಚ್ಚಲ ಟ್ರೋಫಿ ಗೆಲ್ಲುವ ಬಿಗ್ ಡ್ರೀಮ್​ ಈ ಸಲವೂ ನುಚ್ಚುನೂರಾಗುವ ಲಕ್ಷಣ ಗೋಚರಿಸಿದೆ. ಅಭಿಮಾನಿ ದೇವರುಗಳು ಕಪ್​​​ ಆಸೆ ಕೈಬಿಡೋದೆ ಉತ್ತಮ. ಯಾಕೆ ಅಂತೀರಾ?.

16 ವರ್ಷಗಳ ಕಪ್​​​ ವನವಾಸ ಮುಂದುವರೆಯುತ್ತಾ..?

ರಾಯಲ್​ ಚಾಲೆಂಜರ್ಸ್​ ಬೆಂಗಳೂರು.. ಇಲ್ಲಿತನಕ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಈ ಸಲವು ಯಾವ ಲಕ್ಷಣವೂ ಗೋಚರಿಸ್ತಿಲ್ಲ. ಯಾಕಂದ್ರೆ ಬೌಲಿಂಗ್​​​​ ತುಂಬಾ ವೀಕ್​​​ ಇದೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​ ಸಿಎಸ್​ಕೆ ಹಾಗೂ ಕೆಕೆಆರ್ ಎದುರಿನ ಸೋಲು. ಎರಡೂ ಪಂದ್ಯಗಳಲ್ಲಿ ಆರ್​ಸಿಬಿ ಬೌಲಿಂಗ್​ ದೌರ್ಬಲ್ಯ ಬಟಾಬಯಲಾಗಿದೆ.

ಫ್ಯಾನ್ಸ್ ಏನೋ 16 ವರ್ಷದಿಂದ ಆರ್​ಸಿಬಿ ಈ ವರ್ಷ ಕಪ್ ಗೆಲ್ಲುತ್ತೆ, ಮುಂದಿನ ವರ್ಷ ಕಪ್ ಗೆಲ್ಲುತ್ತೆ ಅಂತ ಕನಸು ಕಾಣ್ತಿದ್ದಾರೆ. ಆ ಬಿಗ್​​ ಡ್ರೀಮ್​​ ಬರೀ ಕನಸಾಗಿ ಉಳಿಯೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಸಾಲು ಸಾಲು ಬೌಲಿಂಗ್ ಎಡವಟ್ಟು, ಅಂತಹದೊಂದು ಪ್ರಶ್ನೆಯನ್ನ ಹುಟ್ಟುಹಾಕಿದೆ. ಇದನ್ನ ನಾವು ಮಾತ್ರ ಹೇಳ್ತಿಲ್ಲ. ಇಂಗ್ಲೆಂಡ್​ ಮಾಜಿ ಕ್ಯಾಪ್ಟನ್​ ಮೈಕಲ್​ ವಾನ್​​ ಕೂಡ ಆರ್​ಸಿಬಿ ಬೌಲಿಂಗ್​​​​​​​​ ಅನ್ನ ಟೀಕಿಸಿದ್ದಾರೆ. ಬರೀ ಮೈಕಲ್​​ ವಾನ್ ಅಷ್ಟೆ ಅಲ್ಲ, ಸನ್​ರೈಸರ್ಸ್​ ಹೈದ್ರಾಬಾದ್​​ ತಂಡದ ಮಾಜಿ ಹೆಡ್​​ಕೋಚ್​ ಟಾಮ್​​​ ಮೋಡಿ ಕೂಡ ಆರ್​ಸಿಬಿ ಕಳಪೆ ಬೌಲಿಂಗ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ

ಆರ್​​ಸಿಬಿ ತಂಡ ಇಂತಹ ಬೌಲಿಂಗ್ ಅಟ್ಯಾಕ್​​​ ಹೊಂದಿ ಐಪಿಎಲ್ ಟ್ರೋಫಿ ಗೆಲ್ಲುವುದು ಅಸಾಧ್ಯ.

ಮೈಕಲ್ ವಾನ್​​, ಮಾಜಿ ಕ್ರಿಕೆಟಿಗ

ಇಬ್ಬರು ವಿದೇಶಿ ಬೌಲರ್ಸ್​ ಆಡಿಸಬೇಕು

ಆರ್​ಸಿಬಿಗೆ ಬೇರೆ ಆಯ್ಕೆಗಳಿಲ್ಲ. ಇಬ್ಬರು ವಿದೇಶಿ ಪರಿಣತ ವೇಗಿಗಳನ್ನ ಆಡಿಸಬೇಕು. ಲೂಕಿ ಫರ್ಗೂಸನ್ ಹಾಗೂ ಟಾಪ್ಲೆ ಆಡಿದರೆ ಉತ್ತಮ.

ಟಾಮ್​​ ಮೂಡಿ, ಮಾಜಿ ಕ್ರಿಕೆಟಿಗ

ದುಬಾರಿ ಬೌಲಿಂಗ್ ಎಕಾನಮಿ.. ಸುಧಾರಿಸೋದ್ಯಾವಾಗ..?

ಮಾಜಿ ಕ್ರಿಕೆಟರ್ಸ್​ ಆರ್​ಸಿಬಿ ಬೌಲರ್​ಗಳನ್ನ ಟೀಕಿಸೋದ್ರಲ್ಲಿ ತಪ್ಪಿಲ್ಲ ಬಿಡಿ. ಯಾಕಂದ್ರೆ ರೆಡ್ ಆರ್ಮಿ ಬೌಲಿಂಗ್ ವಿಭಾಗವೇ ಲಯ ತಪ್ಪಿದೆ. ಫಾಸ್ಟ್ ಹಾಗೂ ಸ್ಪಿನ್ನ್​ ಬೌಲರ್​ಗಳು ಎಕಾನಮಿ ಕಾಯ್ದುಕೊಳ್ಳುವಲ್ಲಿ ಕಂಪ್ಲೀಟ್ ಎಡವಿದ್ದಾರೆ.

ಆರ್​​ಸಿಬಿ ಬೌಲರ್ಸ್​ ಎಕಾನಮಿ

ಲೆಗ್ ಬ್ರೇಕರ್​ ಕರನ್ ಶರ್ಮಾ ಪ್ರಸಕ್ತ ಐಪಿಎಲ್​ನಲ್ಲಿ 12ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ವೇಗಿ ಅಲ್ಜರಿ ಜೋಸೆಫ್​​ 11.89 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ರೆ, ಮೊಹಮ್ಮದ್​ ಸಿರಾಜ್ 10 ಹಾಗೂ ಗ್ಲೆನ್​ ಮ್ಯಾಕ್ಸ್​ವೆಲ್​ 9 ರ ಎಕಾನಮಿಯಲ್ಲಿ ರನ್​​ ಬಿಟ್ಟುಕೊಟ್ಟಿದ್ದಾರೆ.

ಹರಾಜಿನಲ್ಲಿ ಎಡವಟ್ಟು..ಬೌಲಿಂಗ್ ಚಿಂತೆ ದುಪ್ಪಟ್ಟು..!

ಆರ್​ಸಿಬಿ ಈ ವೈಫಲ್ಯಕ್ಕೆ ಟೀಮ್ ಮ್ಯಾನೇಜಜ್​ಮೆಂಟ್​ ನೇರ ಹೊಣೆ. ಯಾಕಂದ್ರೆ ಟಿ20 ಕ್ರಿಕೆಟ್​ನಲ್ಲಿ ರನ್​​​​​​ಗೆ ಕಡಿವಾಣ ಹಾಕೋದು ತುಂಬಾ ಮುಖ್ಯ. ಇದು ಫ್ರಾಂಚೈಸಿಗೆ ಅರ್ಥವಾಗ್ಲಿಲ್ಲ. ಮ್ಯಾಚ್ ವಿನ್ನಿಂಗ್​ ಬೌಲರ್​ಗಳಾದ ಜೋಶ್ ಹೇಜಲ್​ವುಡ್​​, ಹರ್ಷಲ್ ಪಟೇಲ್ ಹಾಗೂ ವಾನಿಂದು ಹಸರಂಗರನ್ನ ತಂಡದ ರಿಲೀಸ್ ಮಾಡ್ತು. ಹರಾಜಿನಲ್ಲಿ ಉತ್ತಮ ಬೌಲರ್​ಗಳನ್ನ ಪಿಕ್​ ಮಾಡಲಿಲ್ಲ. ಇದರಿಂದ ತಂಡಕ್ಕೆ ಹಿನ್ನಡೆಯಾಗಿದೆ.

ಇದನ್ನೂ ಓದಿ: ₹46 ಕೋಟಿ ವ್ಯವಹಾರ ಮಾಡಿದ ಅಂತ ಕಾಲೇಜು ವಿದ್ಯಾರ್ಥಿಗೆ IT ನೋಟಿಸ್.. ಫೊಲೀಸರು ಏನು ಅಂತಾರೆ?

ಈಗಿನ ತಂಡದಲ್ಲಿ ಕ್ವಾಲಿಟಿ ಸ್ಪಿನ್ನರ್​ಗಳಿಲ್ಲ. ಡೆತ್ ಓವರ್​ಗಳಲ್ಲಿ ರನ್​​​​​​​​​​​​​ ಕಂಟ್ರೋಲ್​ ಮಾಡುವ ವೇಗಿಗಳಿಲ್ಲ. ಸಿರಾಜ್​​ ಒಬ್ಬರೇ ತಂಡದ ನಂಬಿಗಸ್ಥ ಬೌಲರ್​​. ನ್ಯೂ ಬೌಲರ್​​ ಯಶ್​ ದಯಾಳ್​​​ ಹಾಗೂ ಅಲ್ಜರಿ ಜೋಸೆಫ್​​ ಅಸ್ಥಿರ ಪ್ರದರ್ಶನ ನೀಡ್ತಿದ್ದಾರೆ. ಚಿನ್ನಸ್ವಾಮಿಯಂತ ಚಿಕ್ಕ ಗ್ರೌಂಡ್​ನಲ್ಲಿ ಬೌಲರ್ಸ್​​ ಸರಾಗವಾಗಿ ರನ್​ ಬಿಟ್ಟು ಕೊಡ್ತಿದ್ದಾರೆ. ಇಂತಹ ವೀಕ್ ಬೌಲಿಂಗ್ ಅಟ್ಯಾಕ್​​ ಇಟ್ಟುಕೊಂಡು ಕಪ್ ಗೆಲ್ಲೋದು ನಿಜಕ್ಕೂ ಕಷ್ಟ. ಮುಂದಿನ ಪಂದ್ಯಗಳಲ್ಲಾದ್ರು ಮಿಸ್ಟೇಕ್ಸ್ ತಿದ್ದಿಕೊಂಡು ಮುನ್ನಡೆದರಷ್ಟೇ ಹೊಸ ಚರಿತ್ರೆ ಸೃಷ್ಟಿಯಾದೀತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಈ ಬಾರಿಯು ಟ್ರೋಫಿ ಗೆಲ್ಲಲ್ವಾ.. RCBಯ ವೀಕ್​ ಬೌಲಿಂಗ್​​​​​ಗೆ ಮಾಜಿ ಕ್ರಿಕೆಟರ್ಸ್ ಭಾರೀ​ ಟೀಕೆ!

https://newsfirstlive.com/wp-content/uploads/2024/03/RCB-Opening-pair.jpg

Load More