IPL 2025: ಎಷ್ಟು ಆಟಗಾರರನ್ನ ರಿಟೈನ್ ಮಾಡಬಹುದು? ರಿಟೈನ್ ಆಟಗಾರರಿಗೆ ಸಿಗೋ ಹಣವೆಷ್ಟು ಗೊತ್ತಾ?

author-image
AS Harshith
Updated On
IPL 2025; ಯಾವ್ಯಾವ ಪ್ಲೇಯರ್ ಎಷ್ಟೆಷ್ಟು ಕೋಟಿ ರೂಪಾಯಿಗೆ ರಿಟೈನ್..? ಇಲ್ಲಿದೆ ಫುಲ್ ಲಿಸ್ಟ್​
Advertisment
  • ಫ್ರಾಂಚೈಸಿ ಬಿಡೋಕೆ ಆಟಗಾರರಿಗೆ ಇದಿಯಾ ಅವಕಾಶ..?
  • ಅತಿ ಹೆಚ್ಚು ಮೊತ್ತಕ್ಕೆ ರಿಟೈನ್ ಆಗಿರುವ ಆಟಗಾರ ಯಾರು..?
  • RTM- ರೈಟ್ ಟು ಮ್ಯಾಚ್ ನಡೆಯೋದು ಹೇಗೆ ಗೊತ್ತಾ?

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಿಟೆನ್ಶನ್​​​​​​​​​​​​ ಲಿಸ್ಟ್​ ಅನೌನ್ಸ್​ ಮೆಂಟ್​​ಗೆ, ಕೌಂಟ್​​ಡೌನ್ ಶುರುವಾಗಿದೆ. ಫ್ರಾಂಚೈಸಿ ಮಾಲೀಕರು ರಿಟೆನ್ಶನ್ ಮಾಡಿರೋ ಆಟಗಾರರ ಹೆಸರನ್ನ ಪ್ರಕಟಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಮತ್ತೊಂದೆಡೆ ಕ್ರಿಕೆಟ್ ಅಭಿಮಾನಿಗಳಿಗೆ, ತಮ್ಮ ನೆಚ್ಚಿನ ಆಟಗಾರರ ಕಥೆ ಏನು ಅನ್ನೋ ಕುತೂಹಲ ಶುರುವಾಗಿದೆ. ಹಾಗಾದ್ರೆ ಆಟಗಾರರ ರಿಟೆನ್ಶನ್ ನಡೆಯೋದೇಗೆ? ಇಲ್ಲಿದೆ ಮಾಹಿತಿ.

ನವೆಂಬರ್ 31. ಈ ದಿನವನ್ನ ಕೇವಲ ಕ್ರಿಕೆಟಿಗರಷ್ಟೇ ಅಲ್ಲ!. ಕ್ರಿಕೆಟ್ ಅಭಿಮಾನಿಗಳೂ ಸಹ, ಚಾತಕ ಪಕ್ಷಿಯಂತೆ ಎದುರು ನೋಡ್ತಿದ್ದಾರೆ. ಯಾವ ಆಟಗಾರನನ್ನ ಫ್ರಾಂಚೈಸಿ ಉಳಿಸಿಕೊಂಡಿದೆ. ಯಾವ ಆಟಗಾರನನ್ನ ರೈಟ್ ಟು ಮ್ಯಾಚ್ ಮಾಡಬೇಕು. ಯಾವ ಆಟಗಾರನನ್ನ ತಂಡದಿಂದ ಕೈಬಿಡಬೇಕು ಅನ್ನೋ ಲೆಕ್ಕಾಚಾರವನ್ನ, ಈಗಾಗಲೇ ತಂಡಗಳ ಮಾಲೀಕರು ಸಖತ್​ ಆಗಿ ಹೋಂ ವರ್ಕ್ ಮಾಡಿದ್ದಾರೆ. ಹಾಗಾಗಿ ಇವತ್ತಿನ ದಿನ, ಅತ್ಯಂತ ಮಹತ್ವದ ದಿನವಾಗಿದೆ..!

ಎಷ್ಟು ಆಟಗಾರರನ್ನ ಫ್ರಾಂಚೈಸಿ ರಿಟೈನ್ ಮಾಡಿಕೊಳ್ಳಬಹುದು..?

ಒಂದು ತಂಡ ಒಟ್ಟು 6 ಮಂದಿ ಆಟಗಾರರನ್ನ ರಿಟೆನ್ಶನ್ ಮಾಡಿಕೊಳ್ಳಬಹುದು. ಅದರಲ್ಲಿ ಐದು ಮಂದಿ ಇಂಟರ್​ನ್ಯಾಷನಲ್ ಪ್ಲೇಯರ್​ಗಳನ್ನ ಡೈರೆಕ್ಟ್ ಆಗಿ ರಿಟೈನ್ ಮಾಡಿಕೊಳ್ಳಬಹುದು. ಅಥವಾ 4 ಮಂದಿ ಇಂಟರ್​ನ್ಯಾಷನಲ್ ಪ್ಲೇಯರ್ಸ್​ನ ಉಳಿಸಿಕೊಂಡು, ಇಬ್ಬರು ಅನ್​ಕ್ಯಾಪ್ಡ್ ಆಟಗಾರರನ್ನ ರೈಟ್ ಟು ಮ್ಯಾಚ್ ಮಾಡಬಹುದು.

publive-image

ರಿಟೈನ್ ಆಗಿರೋ ಆಟಗಾರರಿಗೆ ಸಿಗೋ ಹಣ ಎಷ್ಟು..?

ಈ ಬಾರಿ ಬಿಸಿಸಿಐ ಮತ್ತು ಐಪಿಎಲ್​​​​ ಗವರ್ನಿಂಗ್ ಕೌನ್ಸಿಲ್, ಆಟಗಾರರ ರಿಟೆನ್ಶನ್​​​​​​​​​​​​​ಗಾಗೇ 120 ಕೋಟಿ ರೂಪಾಯಿ ಪರ್ಸ್ ನೀಡಿದೆ. ಅದರಲ್ಲಿ ಟಾಪ್ ಫೈವ್ ರಿಟೈನ್ ಆಟಗಾರರಿಗೆ, ಒಟ್ಟು 75 ಕೋಟಿ ರೂಪಾಯಿ ಫಿಕ್ಸ್ ಮಾಡಿದೆ. ಮೊದಲು ರಿಟೈನ್ ಆಗೋ ಆಟಗಾರನಿಗೆ 18 ಕೋಟಿ, 2ನೇ ಆಟಗಾರನಿಗೆ 14 ಕೋಟಿ, 3ನೇ ಆಟಗಾರನಿಗೆ 18 ಕೋಟಿ ಮತ್ತು 4ನೇ ಆಟಗಾರನಿಗೆ 14 ಕೋಟಿ ರೂಪಾಯಿ ನೀಡಲು ಅವಕಾಶ ಇದೆ. ಹಾಗೇ ಅನ್​ಕ್ಯಾಪ್ಟ್​ ಪ್ಲೇಯರ್​ಗೆ 4 ಕೋಟಿ ರೂಪಾಯಿ, ನೀಡಬಹುದಾಗಿದೆ. ​

ರೈಟ್ ಟು ಮ್ಯಾಚ್ ನಡೆಯೋದು ಹೇಗೆ..?

ರೈಟ್ ಟು ಮ್ಯಾಚ್ ಕಾರ್ಡ್ ಇದು ಫ್ರಾಂಚೈಸಿಗಳ ಪಾಲಿಗೆ, ಅತ್ಯಂತ ಪ್ರಮುಖ ಟ್ರಂಪ್ ಕಾರ್ಡ್. ಒಬ್ಬ ಆಟಗಾರನನ್ನ ಫ್ರಾಂಚೈಸಿ ರಿಟೈನ್ ಮಾಡಿಕೊಳ್ಳದಿದ್ರೆ, ಆತ ಆಕ್ಷನ್​​ಗೆ ಹೋಗ್ತಾನೆ. ಆಕ್ಷನ್​ನಲ್ಲಿ ಆತನನ್ನ ಹೊಸ ಫ್ರಾಂಚೈಸಿ ಖರೀದಿಸಿದ್ರೆ, ಆತನನ್ನ ಈ ಹಿಂದೆ ಪ್ರತಿನಿಧಿಸಿದ್ದ ಫ್ರಾಂಚೈಸಿ ಖರೀದಿಸಬಹುದು. ಆದ್ರೆ ಈ ಬಾರಿ ಹೆಚ್ಚು ಮೊತ್ತ ನೀಡಿ, ಹಳೇ ಫ್ರಾಂಚೈಸಿ ಖರೀದಿಸಬೇಕು. ರೈಟ್ ಟು ಮ್ಯಾಚ್ ಮೂಲಕ, ಒಬ್ಬ ಅಥವಾ ಇಬ್ಬರು ಆಟಗಾರರನ್ನ ಖರೀದಿಸಲು ಅವಕಾಶ ಇದೆ.

ಇದನ್ನೂ ಓದಿ: ಫ್ಯಾನ್ಸ್​ ತಲೆಗೆ ಕೆಲಸ ಕೊಟ್ಟ RCB.. ರಿಟೈನ್ ಪ್ಲೇಯರ್ಸ್​ ಹೆಸರು ಅಭಿಮಾನಿಗಳು ಹೇಳಬೇಕಾ?

ಅತಿ ಹೆಚ್ಚು ಮೊತ್ತಕ್ಕೆ ರಿಟೈನ್ ಆಗಿರುವ ಆಟಗಾರ SRHನ ಕ್ಲಾಸೆನ್..!

ಐಪಿಎಲ್ ಇತಿಹಾಸದಲ್ಲೇ ಸನ್​ರೈಸರ್ಸ್​ ಹೈದ್ರಾಬಾದ್ ಫ್ರಾಂಚೈಸಿ, ಆಕ್ಷನ್​ಗೂ ಮುನ್ನ ದಾಖಲೆ ಬರೆದಿದೆ. ರಿಟೆನ್ಶನ್ ಮಾಡಿರುವ ಒಬ್ಬ ಆಟಗಾರನಿಗೆ ಹೈದ್ರಾಬಾದ್ ತಂಡ, 23 ಕೋಟಿ ರೂಪಾಯಿ ನೀಡಿ ಅಚ್ಚರಿ ಮೂಡಿಸಿದೆ. ಇದುವರೆಗೂ ಯಾವ ಫ್ರಾಂಚೈಸಿಯೂ, ಒಬ್ಬ ಆಟಗಾರನಿಗೆ ಇಷ್ಟೊಂದು ದೊಡ್ಡ ಮೊತ್ತದ ಹಣ ನೀಡಿದ ಉದಾಹರಣೆಯೇ ಇರಲಿಲ್ಲ. ಆದ್ರೆ ಕ್ಲಾಸಿಕ್ ಕ್ಲಾಸನ್ ಉಳಿಸಿಕೊಳ್ಳಲು, SRH ಮುಂದಿದ್ದ ದಾರಿ, ಇದೊಂದೇ..!

ಫ್ರಾಂಚೈಸಿ ಬಿಡೋಕೆ ಆಟಗಾರರಿಗೆ ಇದೆ ಅವಕಾಶ..!

ಹೌದು..! ಫ್ರಾಂಚೈಸಿಗಳು ಆಯಾ ತಂಡಗಳ ಆಟಗಾರರನ್ನ ರಿಟೈನ್ ಮಾಡಿಕೊಳ್ಳಲು, ಆಟಗಾರರ ಅನುಮತಿ ಪಡೆದುಕೊಳ್ಳಲೇಬೇಕು. ಆಟಗಾರರು ಒಪ್ಪಿದ್ರೆ ಮಾತ್ರ ರಿಟೆನ್ಶನ್. ಇಲ್ದಿದ್ರೆ ಆಟಗಾರರು ವಿಂಡೋ ಟ್ರಾನ್ಸ್​ಫರ್ ಅಥವಾ ಆಕ್ಷನ್​ಗೆ ಹೋಗಬಹುದು. ಇಲ್ಲಿ ಆಟಗಾರರ ನಿರ್ಧಾರವೇ ಫೈನಲ್ ಆಗಿರುತ್ತೆ. ಫ್ರಾಂಚೈಸಿ ಮಾಲೀಕರು, ಯಾವ ಕಾರಣಕ್ಕೂ ಆಟಗಾರರ ಮೇಲೆ ಒತ್ತಡ ಹಾಕುವಂತಿಲ್ಲ..! ಇದು ಬಿಸಿಸಿಐ ಮತ್ತು ಐಪಿಎಲ್ ರೂಲ್ಸ್.

ಇದನ್ನೂ ಓದಿ: ಖ್ಯಾತ IPL​ ಆಟಗಾರನಿಗೆ ಆಘಾತ.. ಭಾವನಾತ್ಮಕ ಪೋಸ್ಟ್​ ಹಂಚಿಕೊಂಡ ಸ್ಟಾರ್​​ ಕ್ರಿಕೆಟಿಗ

ಒಟ್ನಲ್ಲಿ ಯಾವ ಆಟಗಾರ ಯಾವ ತಂಡದಲ್ಲಿ ಉಳಿದುಕೊಂಡಿದ್ದಾನೆ. ಯಾರನ್ನ ಫ್ರಾಂಚೈಸಿ ಕೈಬಿಟ್ಟಿದೆ. ಯಾರು ಆಕ್ಷನ್​ಗೆ ಹೋಗ್ತಾರೆ ಅನ್ನೋದು, ಇಂದು ಸಂಜೆಯೊಳಗೆ ಕ್ಲಿಯರ್ ಪಿಚ್ಚರ್ ಸಿಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment