/newsfirstlive-kannada/media/post_attachments/wp-content/uploads/2024/05/VIRAT_ROHIT-1.jpg)
ಐಪಿಎಲ್ ಟೂರ್ನಿಯೆಲ್ಲ ಮುಗಿಯುತ್ತಾ ಬಂದಿದ್ದು ಇನ್ನೇನು ನಾಳೆ ಸಂಜೆ​ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಹಂತಿಮ ಹಣಾಹಣಿ ನಡೆಯಲಿದೆ. ಈ ಬಿಗ್ ಟೂರ್ನಿಯಲ್ಲಿ ಎಲ್ಲ ತಂಡಗಳನ್ನು ಮಣಿಸಿ ಕೆಕೆಆರ್, ಎಸ್​ಆರ್​ಹೆಚ್​ ಫೈನಲ್​ಗೆ ಬಂದಿದ್ದು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಐಪಿಎಲ್​ ಕಪ್​ಗಾಗಿ ಕದನಕ್ಕೆ ಇಳಿಯಲಿವೆ. ವಿಚಿತ್ರ ಎಂದರೆ ಈ 2 ತಂಡಗಳಲ್ಲಿ T20 ವಿಶ್ವಕಪ್​ನಲ್ಲಿ ಆಡುವ ಭಾರತದ ಯಾವುದೇ ಆಟಗಾರ ಇಲ್ಲ. ಸದ್ಯ ಇದೇ ಎಲ್ಲ ಕಡೆ ಆಶ್ಚರ್ಯವನ್ನು ಮೂಡಿಸಿದೆ.
ಈ ಬಾರಿಯ T20 ವಿಶ್ವಕಪ್ ಟೂರ್ನಿ​ ಅಮೆರಿಕ ಮತ್ತು ವೆಸ್ಟ್ ಇಂಡೀಸ್​​ನಲ್ಲಿ ಜೂನ್​ನಿಂದ ಪ್ರಾರಂಭವಾಗಲಿದೆ. ಈಗಾಗಲೇ ಬಹುತೇಕ ರಾಷ್ಟ್ರಗಳು ತಮ್ಮ ತಂಡದ ಆಟಗಾರರ ಹೆಸರನ್ನು ಘೋಷಣೆ ಮಾಡಿವೆ. ಅದರಂತೆ ಭಾರತದ ಕ್ರಿಕೆಟ್​ ಮಂಡಳಿ ಕೂಡ T20 ವಿಶ್ವಕಪ್ ಟೂರ್ನಿಗೆ ಆಡುವ ಆಟಗಾರರ ಹೆಸರನ್ನು ಘೋಷಣೆ ಮಾಡಿದೆ. ಆದ್ರೆ ಇದರಲ್ಲಿದ್ದ 15 ಪ್ಲೇಯರ್ಸ್​ ಯಾರು ಸದ್ಯ ನಾಳೆ ನಡೆಯುವ ಐಪಿಎಲ್​ನ ಫೈನಲ್​ ಪಂದ್ಯದಲ್ಲಿಲ್ಲ. ಆದ್ರೆ ಕೆಕೆಆರ್​ನ ರಿಂಕು ಸಿಂಗ್​ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದರೂ 15 ಬಳಗದಲ್ಲಿ ಇಲ್ಲ. ಇದರಿಂದ 2024ರ ಐಪಿಎಲ್​ ಪಂದ್ಯ ಟಿ20 ವಿಶ್ವಕಪ್ ತಂಡಕ್ಕೆ ಸ್ಥಾನ ಪಡೆದ ಯಾವೋಬ್ಬ ಭಾರತದ ಆಟಗಾರನಿಲ್ಲದ ಫೈನಲ್ ಆಗಿದೆ.
ಇದನ್ನೂ ಓದಿ:ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯದಿಂದ 2 ವರ್ಷದ ಬಾಲಕ ಸಾವು.. ಏನಾಯಿತು?
/newsfirstlive-kannada/media/post_attachments/wp-content/uploads/2024/05/Team-India_m.jpg)
Indian T20 World Cup squad; ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ಆರ್ಷದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬೂಮ್ರಾ.
ರಿಸರ್ವ್​ ಪ್ಲೇಯರ್ಸ್​; ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us