IPL ಫೈನಲ್​​ನಲ್ಲಿ ಶಾರುಖ್ ಖಾನ್ ಕಟ್ಟಿದ್ದ ವಾಚ್​​ಗೆ ಕೋಟಿ, ಕೋಟಿ ರೂಪಾಯಿ..!

author-image
Ganesh
Updated On
IPL ಫೈನಲ್​​ನಲ್ಲಿ ಶಾರುಖ್ ಖಾನ್ ಕಟ್ಟಿದ್ದ ವಾಚ್​​ಗೆ ಕೋಟಿ,  ಕೋಟಿ ರೂಪಾಯಿ..!
Advertisment
  • ವಿಶ್ವದ ದುಬಾರಿ ವಾಚ್ ಶಾರುಖ್ ಖಾನ್ ಬಳಿ ಇದೆ
  • IPL ಫೈನಲ್​​ನಲ್ಲಿ ಕಟ್ಟಿದ್ದ ವಾಚ್ ಭಾರೀ ವೈರಲ್ ಆಗ್ತಿದೆ
  • ಕೋಲ್ಕತ್ತಾ ನೈಟ್ ರೈಡರ್ಸ್​ಗೆ 3ನೇ ಬಾರಿಗೆ ಐಪಿಎಲ್ ಪ್ರಶಸ್ತಿ

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಮಾಲೀಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2024-ಪ್ರಶಸ್ತಿಯನ್ನು ಗೆದ್ದುಕೊಂಡಿತು. ಫೈನಲ್‌ನಲ್ಲಿ ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ ಕೋಲ್ಕತ್ತಾ ಮೂರನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿತು.

ಗೆಲುವು ಸಾಧಿಸುತ್ತಿದ್ದಂತೆಯೇ ಶಾರುಖ್ ಖಾನ್ ಸಖತ್ ಸಂಭ್ರಮಿಸಿದರು. ಈ ವೇಳೆ ಕಿಂಗ್ ಖಾನ್ ತುಂಬಾ ಸ್ಟೈಲಿಶ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅಂದು ಅವರು ಧರಿಸಿದ್ದ ವಾಚ್​ ಭಾರೀ ಸದ್ದು ಮಾಡುತ್ತಿದೆ. ಶಾರುಖ್ ಕೈಯಲ್ಲಿದ್ದದ್ದು ವಿಶ್ವದ ಅತ್ಯಂತ ದುಬಾರಿ ವಾಚ್ ಆಗಿದೆ.

ಇದನ್ನೂ ಓದಿ:IPL ತಂಡ ಪ್ರಕಟಿಸಿದ ರಾಯಡು.. ಆರ್​ಸಿಬಿಯ ಒಬ್ಬನೇ ಒಬ್ಬ ಆಟಗಾರನಿಗೆ ಸ್ಥಾನ

publive-image

ಅಂದ್ಹಾಗೆ ಅದು ಸಾಮಾನ್ಯ ಬೆಲೆಯ ವಾಚ್ ಅಲ್ಲವೇ ಅಲ್ಲ. ಕೆಲವು ಮಾಧ್ಯಮ ವರದಿಗಳ ಪ್ರಕಾರ.. ಅದು Richard Mille RM 052 ವಾಚ್ ಆಗಿದೆ. ಇದನ್ನು ವಿಶ್ವದ ಆಯ್ದ ಜನರು ಮಾತ್ರ ಧರಿಸುತ್ತಾರೆ. ವರದಿಗಳ ಪ್ರಕಾರ ವಾಚ್​ನ ಬೆಲೆ ಸುಮಾರು 5.45 ಕೋಟಿ ರೂಪಾಯಿ ಆಗಿದೆ. ಶಾರುಖ್ ಖಾನ್ ಅವರ ಈ ವಾಚ್ ವಿಶ್ವದ ಅತ್ಯಂತ ದುಬಾರಿ ವಾಚ್‌ಗಳಲ್ಲಿ ಒಂದು.

ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಇದಕ್ಕೂ ಮೊದಲು 2012 ರಲ್ಲಿ ಮತ್ತು 2014ರಲ್ಲಿ ಐಪಿಎಲ್ ಪ್ರಶಸ್ತಿ ಜಯಿಸಿತ್ತು. ಆಗ ತಂಡದ ನಾಯಕತ್ವವನ್ನು ಗೌತಮ್ ಗಂಭೀರ್ ವಹಿಸಿದ್ದರು. ಇಂದು ಗಂಭೀರ್ ಕೆಕೆಆರ್ ತಂಡದ ಮಾರ್ಗದರ್ಶಕರಾಗಿದ್ದಾರೆ.

ಇದನ್ನೂ ಓದಿ:ಟಿ20 ವಿಶ್ವಕಪ್​ನಲ್ಲಿ ಆಫ್​ ಸ್ಪಿನ್ನರ್ಸ್ ಇಲ್ಲವೇ ಇಲ್ಲ -ಲೆಫ್ಟಿ ಸ್ಪಿನ್ನರ್ಸ್ ಆಯ್ಕೆ ಹಿಂದಿನ ಅಸಲಿ ಸತ್ಯ ರಿವೀಲ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment