newsfirstkannada.com

T20 ವಿಶ್ವಕಪ್​ ತಂಡದಲ್ಲಿ 5 ಐಪಿಎಲ್ ಫ್ಲಾಪ್ ಸ್ಟಾರ್​.. ರೋಹಿತ್ ಪಡೆಗೆ ಇವರದ್ದೇ ಚಿಂತೆ..!

Share :

Published May 30, 2024 at 8:01am

Update May 30, 2024 at 8:03am

    ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ಮೂಡಿದೆ ಚಿಂತೆ

    IPLನಲ್ಲೇ ಫೇಲಾದವರು.. ವಿಶ್ವಕಪ್​​ನಲ್ಲಿ ಅಬ್ಬರಿಸ್ತಾರಾ..?

    ನಾಲ್ಕೇ ದಿನ ಬಾಕಿ.. ಕಂಡುಕೊಳ್ಳಬೇಕಿದೆ ಫಾರ್ಮ್​

T20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾ ರೆಡಿಯಾಗಿದೆ. ನ್ಯೂಯಾರ್ಕ್​ನಲ್ಲಿ ಬೀಡು ಬಿಟ್ಟಿರುವ ಟೀಮ್ ಇಂಡಿಯಾ, ಅಖಾಡಕ್ಕೆ ಇಳಿಯೋದೊಂದೇ ಬಾಕಿ. ಈ ಅಖಾಡಕ್ಕಿಳಿಯಲು ಸಜ್ಜಾಗಿರುವ ಕೆಲ ರಣಕಲಿಗಳು, ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನ ಚಿಂತೆಗೆ ದೂಡಿದ್ದಾರೆ.

T20 ವಿಶ್ವಕಪ್ ಮಹಾ ಸಂಗ್ರಾಮಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. 17 ವರ್ಷಗಳ ಬಳಿಕ ಚುಟುಕು ವಿಶ್ವ ಸಮರ ಗೆಲ್ಲಲು ಪಣ ತೊಟ್ಟಿದೆ. ಈ ನಿಟ್ಟಿನಲ್ಲೇ ಬಲಿಷ್ಠ ತಂಡವನ್ನ ಕಟ್ಟಿದೆ. ಏಕದಿನ ವಿಶ್ವಕಪ್​ ಸೋಲಿನ ಕಹಿ ಮರೆಯೋ ಆಶಾಭಾವನೆ ತಂಡದಲ್ಲಿದೆ. ಟೀಮ್ ಇಂಡಿಯಾ ಮ್ಯಾನೇಜ್​​ಮೆಂಟ್ ಆ್ಯಂಡ್ ಫ್ಯಾನ್ಸ್​ಗೆ ಮಾತ್ರ, ಟೆನ್ಶನ್ ಶುರುವಾಗಿದೆ. ಇದಕ್ಕೆಲ್ಲಾ ಕಾರಣ ಇಂಡಿಯನ್ ಪ್ರಿಮೀಯರ್ ಲೀಗ್​ ಟೂರ್ನಿ ಹಾಗೂ ಕೆಲ ಆಟಗಾರರು.!

ಇದನ್ನೂ ಓದಿ:ದೈವದ ಕೆಲಸಕ್ಕೆ ಕಾಡಿಗೆ ಹೋಗಿದ್ದವ ನಿಗೂಢ ನಾಪತ್ತೆ.. 82 ವರ್ಷದ ವೃದ್ಧ ಬದುಕಿ ಬಂದಿದ್ದೇ ರೋಚಕ

T20 ವಿಶ್ವಕಪ್​ಗೆ ಆಯ್ಕೆಯಾದ ಆಟಗಾರರ​ ಫ್ಲಾಪ್ ಶೋ..!
ಟಿ20 ವಿಶ್ವಕಪ್​ ತಂಡದ ಆಟಗಾರರೇ ಟೀಮ್ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣರಾಗಿದ್ದಾರೆ. ಟಿ20 ವಿಶ್ವಕಪ್​ನಲ್ಲಿ ಸ್ಥಾನ ಪಡೆದ ಬಹುತೇಕ ಆಟಗಾರರು, ಐಪಿಎಲ್​ನಲ್ಲಿ ಫ್ಲಾಫ್​ ಪರ್ಫಾಮೆನ್ಸ್ ನೀಡಿದ್ದಾರೆ, ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ವಿಫಲರಾಗಿದ್ದಾರೆ. ಬಿಗ್ ಸ್ಟಾರ್​ಗಳೇ ಪರದಾಡಿದ್ದಾರೆ. ಹೀಗಾಗಿ ಐಪಿಎಲ್​ನಲ್ಲಿ ಫೇಲಾದ ಆಟಗಾರರು, ಬಿಗ್ ಸ್ಟೇಜ್​ನಲ್ಲಿ ಅಬ್ಬರಿಸ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಔಟ್ ಆಫ್ ಫಾರ್ಮ್ ಸುಳಿಯಲ್ಲಿ ಕ್ಯಾಪ್ಟನ್ ರೋಹಿತ್..!
ಕ್ಯಾಪ್ಟನ್ ರೋಹಿತ್ ಶರ್ಮಾ ಔಟ್ ಆಫ್ ಫಾರ್ಮ್ ಸುಳಿಗೆ ಸಿಲುಕಿದ್ದಾರೆ. ಆರಂಭಿಕರಾಗಿ ಆರ್ಭಟಿಸುವಲ್ಲಿ ಫೇಲ್ ಆಗಿದ್ದಾರೆ. ಅದರಲ್ಲೂ ಕಳೆದ 8 ಪಂದ್ಯಗಳಿಂದ ಹಿಟ್​​ಮ್ಯಾನ್ ಕೇವಲ 156 ರನ್​ಗಳಿಸಿದ್ದಾರೆ. ರೋಹಿತ್​ ಶರ್ಮಾ ಮಾತ್ರವಲ್ಲ.. ಹಿಟ್​ಮ್ಯಾನ್​​ ಜೊತೆ ಇನ್ನಿಂಗ್ಸ್​ ಆರಂಭಿಸುವ ಕನಸು ಕಾಣ್ತಿರುವ ಯಶಸ್ವಿ ಜೈಸ್ವಾಲ್​​​​​​​​​​​​​​​​​​ ಕಥೆಯೂ ಇದಕ್ಕಿಂತ ಭಿನ್ನವೇನಿಲ್ಲ.

ಇದನ್ನೂ ಓದಿ:ಉಳಿದಿರೋದು ಐದೇ ದಿನ.. ಯಾವುದರಲ್ಲೂ ಕ್ಲಾರಿಟಿಯೇ ಇಲ್ಲ.. ತಂಡ ಒಂದೇ ಆದರೂ ಯಾಕೆ ಹೀಗೆ?

ಹಾರ್ದಿಕ್​ಗಿಲ್ಲ ಹಳೇ ಖದರ್.. ದುಬೆ ದುಬಾರಿ..!
ವೈಸ್ ಕ್ಯಾಪ್ಟನ್​ ಹಾರ್ದಿಕ್ ಪಾಂಡ್ಯ ಕೂಡ ಕಂಪ್ಲೀಟ್​ ಮಕಾಡೆ ಮಲಗಿದ್ದಾರೆ. ಏಕದಿನ ವಿಶ್ವಕಪ್ ವೇಳೆ ಇಂಜುರಿಗೆ ತುತ್ತಾಗಿದ್ದ ಹಾರ್ದಿಕ್​ ಐಪಿಎಲ್​ಗೆ ಕಮ್​ಬ್ಯಾಕ್ ಮಾಡಿದ್ರು. ಆದ್ರೆ, ಅಟ್ಟರ್ ಫ್ಲಾಪ್ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಬ್ಯಾಟಿಂಗ್​ ಖದರ್ ಕಳೆದುಕೊಂಡಿರುವ ಪಾಂಡ್ಯ, ಫಿನಿಶರ್ ಆಗಿ ಬೌಂಡರಿ ಬಾರಿಸಲು ಪರದಾಡಿದ್ದಾರೆ. 14 ಪಂದ್ಯಗಳಿಂದ 18ರ ಅವರೇಜ್​ನಲ್ಲಿ ಜಸ್ಟ್ 216 ರನ್ ಬಾರಿಸಿದ್ರೆ. ಬೌಲಿಂಗ್​ನಲ್ಲಿ 11ರ ಏಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು 11 ವಿಕೆಟ್ ಉರುಳಿಸಿದ್ದಾರೆ.

ಟಿ20ಯಲ್ಲಿ ಗೇಮ್ ಚೇಂಜರ್ ಅಂತಾನೇ ಹೇಳಲಾಗ್ತಿರುವ ಶಿವಂ ದುಬೆ, ವಿಶ್ವಕಪ್​ ತಂಡದ ಆಯ್ಕೆ ಬಳಿಕ ಸಿಡಿಸಿರೋದು ಬರೀ 46 ರನ್​. ಚೆನ್ನೈ ಪಾಲಿಗೆ ದುಬಾರಿಯಾದ್ರು.

ಜಡ್ಡು ಜಾದೂ ಮಾಡಲಿಲ್ಲ.. ಸಿರಾಜ್ ಸ್ಥಿರವಾಗಿಲ್ಲ..!
ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ, ಟ್ರೋಫಿಗೆ ಮುತ್ತಿಡಬೇಕು ಅಂದ್ರೆ, ಜಡ್ಡು ಮ್ಯಾಜಿಕ್​​ ನಡೆಯಲೇಬೇಕು. ಆದ್ರೆ, ಐಪಿಎಲ್​ನಲ್ಲಿ ಜಡ್ಡು ಜಾದೂ ನಡೆದೇ ಇಲ್ಲ. 14 ಪಂದ್ಯಗಳಿಂದ 8 ವಿಕೆಟ್ ಬೇಟೆಯಾಡಿರೋ ಜಡೇಜಾ, ಬ್ಯಾಟಿಂಗ್​ನಲ್ಲೂ ಮೋಡಿ ಮಾಡಲಿಲ್ಲ. ಬೂಮ್ರಾ ಜೊತೆ ಚೆಂಡು ಹಂಚಿಕೊಳ್ಳಲು ರೆಡಿಯಾಗಿರುವ ಸಿರಾಜ್​ ಕೂಡ ಐಪಿಎಲ್​ನಲ್ಲಿ ನೀಡಿರೋದು ಫ್ಲಾಫ್ ಶೋ. 14 ಪಂದ್ಯಗಳಿಂದ 9.18ರ ಎಕಾನಮಿಯಲ್ಲಿ ರನ್ ನೀಡಿರುವ ಸಿರಾಜ್, ಬೇಟೆಯಾಡಿರೋದು ಜಸ್ಟ್ 15 ವಿಕೆಟ್ ಮಾತ್ರ. ಈ ಪೈಕಿ ಕೊನೆ 6 ಪಂದ್ಯಗಳಿಂದ 11 ವಿಕೆಟ್ ಕಬಳಿಸಿರೋದು ಸಮಾಧಾನಕರ ವಿಚಾರ.

ಇದನ್ನೂ ಓದಿ:ಒಂದು ಫೋಟೋ ಹಲವು ಅರ್ಥ.. KL ರಾಹುಲ್ ಸೈಲೆಂಟ್​ ಅಲ್ಲೇ ಟಕ್ಕರ್ ಕೊಟ್ರಾ?

ಐಪಿಎಲ್​ನಲ್ಲಿ ಸತತ ವೈಫಲ್ಯ ಅನುಭವಿಸಿರೋ ಇವರು, ಟಿ20 ವಿಶ್ವಕಪ್​ ವೇಳೆಗೆ ಕಮ್​ಬ್ಯಾಕ್ ಮಾಡಬೇಕಾದ ಅಗತ್ಯ ಇದೆ. ವಿರಾಟ್ ಕೊಹ್ಲಿ ಹಾಗೂ ಜಸ್​ಪ್ರೀತ್ ಬೂಮ್ರಾ ಜೊತೆಗೆ ಈ ಎಲ್ಲಾ ಆಟಗಾರರು, ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಕ್ಲಿಕ್ ಆಗಬೇಕಿದೆ. ಆಗ ಮಾತ್ರ ಅಸಲಿ ಟೂರ್ನಿಗೈ ಮುನ್ನ ಆತ್ಮವಿಶ್ವಾಸ ಹೆಚ್ಚಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

T20 ವಿಶ್ವಕಪ್​ ತಂಡದಲ್ಲಿ 5 ಐಪಿಎಲ್ ಫ್ಲಾಪ್ ಸ್ಟಾರ್​.. ರೋಹಿತ್ ಪಡೆಗೆ ಇವರದ್ದೇ ಚಿಂತೆ..!

https://newsfirstlive.com/wp-content/uploads/2024/05/ROHIT-5.jpg

Load More