newsfirstkannada.com

ಹೋಳಿ ಆಚರಿಸಿ ಸೋಲು, ಅವಮಾನಗಳ ಮರೆತ ರೋಹಿತ್ ಶರ್ಮಾ -ವಿಡಿಯೋ

Share :

Published March 26, 2024 at 1:53pm

  ಯಾವೆಲ್ಲ ಕ್ರಿಕೆಟರ್ಸ್​​ ಹೇಗೆಲ್ಲ ಹೋಳಿ ಹಬ್ಬ ಆಚರಿಸಿದರು?

  ಕ್ರಿಕೆಟ್ ಲೋಕದ ‘ಸೂಪರ್​ ಸಿಕ್ಸ್​’ ಸ್ಟೋರಿಗಳು ಇಲ್ಲಿವೆ

  ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟ ಮಾಹಿತಿ ತಂಡ

ಮುಂಬೈ ತಂಡದಲ್ಲಿ ಹೋಳಿ ಸಂಭ್ರಮ
ಗುಜರಾತ್​ ಟೈಟನ್ಸ್​ ಎದುರು ಸೋತ ಹೊರತಾಗಿಯೂ ಮುಂಬೈ ಇಂಡಿಯನ್ಸ್​ ತಂಡದಲ್ಲಿ ಸಂಭ್ರಮ ಮನೆ ಮಾಡಿದೆ. ಆಟಗಾರರೆಲ್ಲಾ ಸೇರಿ ನಿನ್ನೆ ಸಂಭ್ರಮದಿಂದ ಹೋಳಿ ಆಚರಿಸಿದ್ದಾರೆ. ಇಶಾನ್​ ಕಿಶನ್​ ಹಾಗೂ ಹಾರ್ದಿಕ್​ ಪಾಂಡ್ಯ ಸೇರಿ ಉಳಿದೆಲ್ಲ ಆಟಗಾರರು ಬಣ್ಣದೋಕುಳಿಯಲ್ಲಿ ಮಿಂದೆದಿದ್ದಾರೆ. ವಿದೇಶಿ ಆಟಗಾರರಾದ ಕಿರನ್​ ಪೊಲಾರ್ಡ್​​, ಟಿಮ್​ ಡೆವಿಡ್​, ಡೆವಾಲ್ಡ್​ ಬ್ರೆವಿಸ್​ ಎಂಜಾಯ್​ ಮಾಡಿದ್ದಾರೆ.

ಇದನ್ನೂ ಓದಿ: ಹಾರ್ದಿಕ್ ಮಾತ್ರವಲ್ಲ, ಲೂಕಿ ವುಡ್​ರಿಂದಲೂ ತಿರಸ್ಕಾರಕ್ಕೆ ಒಳಪಟ್ಟ ರೋಹಿತ್ ಶರ್ಮಾ..!

ಬಣ್ಣದೋಕುಳಿಯಲ್ಲಿ ಮಿಂದೆದ್ದ ರೋಹಿತ್​​ ಶರ್ಮಾ
ಮುಂಬೈ ಇಂಡಿಯನ್ಸ್ ಮಾಜಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಹೋಳಿ ಸಂಭ್ರಮದಲ್ಲಿ ಮಿಂದೆದಿದ್ದಾರೆ. ರೋಹಿತ್​​​ ಕುಟುಂಬಸ್ಥರ ಜೊತೆ ಸೇರಿ ಹೋಳಿ ಆಚರಿಸಿದ್ದಾರೆ. ಪತ್ನಿ ಹಾಗೂ ಮುದ್ದಿನ ಮಗಳ ಮುಖಕ್ಕೆ ಬಣ್ಣ ಹಚ್ಚಿ ಸಂಭ್ರಮಿಸಿದ್ದಾರೆ. ಅಲ್ಲದೇ ಇದೇ ಖುಷಿಯಲ್ಲಿ ಸ್ಟೆಪ್ಸ್ ಕೂಡ ಹಾಕಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ

ಆಟಗಾರರ ಮಸ್ತಿಗೆ ಸುಸ್ತಾದ ಕ್ಯಾಪ್ಟನ್​ ಶ್ರೇಯಸ್​

ಕೊಲ್ಕತ್ತಾ ನೈಟ್​​ ರೈಡರ್ಸ್​ ಕ್ಯಾಂಪನ್​ನಲ್ಲೂ ಹೋಳಿ ಸಂಭ್ರಮ ಜೋರಾಗಿತ್ತು. ನಾಯಕ ಶ್ರೇಯಸ್​​ ಅಯ್ಯರ್​ನ ಸುತ್ತುವರೆದ ಆಟಗಾರರು ಬಣ್ಣ ಹಚ್ಚಿ ಸಂಭ್ರಮಿಸಿದ್ದಾರೆ. ಜೊತೆಗೆ ಐಸ್​​​ಕ್ಯೂಬ್​ ಸಹಿತ ಐಸ್​ವಾಟರ್​ ಸುರಿದು ಶ್ರೇಯಸ್​​ ಅಯ್ಯರ್​​ನ ಗೋಳಾಡಿಸಿದ್ದಾರೆ. ಆಟಗಾರರ ಮಸ್ತಿಗೆ ಕ್ಯಾಪ್ಟನ್​ ಸುಸ್ತು ಹೊಡೆದಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್​ ಭರ್ಜರಿ ತಾಲೀಮು

ಉದ್ಘಾಟನಾ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಎರಡನೇ ಜಯದ ಮೇಲೆ ಕಣ್ಣಿಟ್ಟಿದೆ. ಅದಕ್ಕಾಗಿ ಭರ್ಜರಿ ತಾಲೀಮು ನಡೆಸಿದೆ. ಆಟಗಾರರೆಲ್ಲರೂ ನೆಟ್ಸ್​​ನಲ್ಲಿ ಬೆವರು ಹರಿಸಿದ್ದಾರೆ. ಗಾಯದಿಂದ ಚೇತರಿಕೆ ಕಂಡಿರೋ ಮಥೀಷ ಪತಿರಾನ ತಂಡವನ್ನ ಸೇರಿಕೊಂಡಿದ್ದು, ಇಂದು ನಡೆಯುವ ಗುಜರಾತ್ ಜೈಂಟ್ಸ್ ಎದುರಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

ಜೈಪುರ ತಲುಪಿದ ಡೆಲ್ಲಿ ಕ್ಯಾಪಿಟಲ್ಸ್​

ಮುಂಬರುವ ಐಪಿಎಲ್​ ಪಂದ್ಯಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜೈಪುರ ತಲುಪಿದೆ. ಮಾರ್ಚ್​​​​​ 28ರಂದು ರಾಜಸ್ಥಾನ್​ ರಾಯಲ್ಸ್​ ಎದುರು ಪಂದ್ಯ ನಡೆಯಲಿದ್ದು, 2 ದಿನ ಮೊದಲೇ ರಿಷಭ್​ ಪಂತ್​ ಜೈಪುರಕ್ಕೆ ಎಂಟ್ರಿ ಕೊಟ್ಟಿದೆ. ಹೋಟೆಲ್​​ನಲ್ಲಿ ತಂಡಕ್ಕೆ ಅದ್ದೂರಿ ಸ್ವಾಗತ ಸಿಕ್ಕಿದೆ. ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪಂಜಾಬ್​ ಎದುರು ಡೆಲ್ಲಿ ಸೋಲುಂಡಿದ್ದು, 2ನೇ ಪಂದ್ಯದಲ್ಲಿ ಗೆಲುವನ್ನ ಎದುರುನೋಡ್ತಿದೆ.

ಭಾರತದಲ್ಲೇ ಸಂಪೂರ್ಣ ಐಪಿಎಲ್​ ಟೂರ್ನಿ..!

IPL​ ಸೀಸನ್​ 17ರ ಎಲ್ಲಾ ಪಂದ್ಯಗಳು ಭಾರತದಲ್ಲೇ ನಡೆಯಲಿವೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿದೇಶದಲ್ಲಿ ಕೆಲ ಪಂದ್ಯಗಳನ್ನ ನಡೆಸಲಾಗುತ್ತೆ ಎನ್ನಲಾಗಿತ್ತು. ಇದೀಗ ಎಲ್ಲಾ 74 ಪಂದ್ಯಗಳನ್ನ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಮೇ 21, 22ರಂದು ಅಹ್ಮದಾಬಾದ್​ನಲ್ಲಿ ಕ್ವಾಲಿಫೈಯರ್​​ 1 ಹಾಗೂ ಎಲಿಮಿನೇಟರ್​ ಪಂದ್ಯಗಳು ನಡೆಯಲಿದ್ರೆ, ಮೇ 24, 26ರಂದು ಕ್ವಾಲಿಫೈಯರ್​ 2 ಹಾಗೂ ಫೈನಲ್​ ಪಂದ್ಯಗಳು ಚೆನ್ನೈನಲ್ಲಿ ನಡೆಯಲಿವೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಹೋಳಿ ಆಚರಿಸಿ ಸೋಲು, ಅವಮಾನಗಳ ಮರೆತ ರೋಹಿತ್ ಶರ್ಮಾ -ವಿಡಿಯೋ

https://newsfirstlive.com/wp-content/uploads/2024/03/ROHIT-2.jpg

Load More