ಹಾರ್ದಿಕ್ಗೆ ಮುಖಭಂಗ.. ರೋಹಿತ್ಗೆ ಜೈಕಾರ
ರೋಹಿತ್ ಕಡೆಗಣನೆಗೆ ಸಿಕ್ಕಿದೆ ಸೋಲಿನ ಪ್ರತಿಫಲ
ಪಂದ್ಯದ ಬೆನ್ನಲ್ಲೇ ಗುಂಪುಗಾರಿಕೆ ಬಟಾಬಯಲು
ಮುಂಬೈ ಇಂಡಿಯನ್ಸ್ ಸೋತಿದ್ದಕ್ಕೆ ಬೇಸರ ಪಟ್ಟಿದಕ್ಕಿಂತ, ಸಂತಸಗೊಂಡ ಅಭಿಮಾನಿಗಳೇ ಹೆಚ್ಚು ಅನಿಸುತ್ತೆ. ಇದಕ್ಕೆ ಕಾರಣ ನಾಯಕ ಹಾರ್ದಿಕ್ ಪಾಂಡ್ಯ ನಡೆ. ಸೀಸನ್ನ ಮೊದಲ ಪಂದ್ಯದಲ್ಲೇ ಮುಂಬೈ ತಂಡದಲ್ಲಿನ ಗುಂಪುಗಾರಿಕೆ ಬಟಾಬಯಲಾಗಿದೆ. ರೋಹಿತ್ ಶರ್ಮಾನ ನಡೆಸಿಕೊಂಡ ರೀತಿಗಂತೂ ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ.
ಮೊದಲ ಪಂದ್ಯದಲ್ಲೇ ಬಲಿಷ್ಠ ಮುಂಬೈ ಇಂಡಿಯನ್ಸ್ ಮುಗ್ಗರಿಸಿದೆ. ಕೊನೆ ಕ್ಷಣದಲ್ಲಿ ಮಾಡಿಕೊಂಡ ಯಡವಟ್ಟಿಗೆ ಬೆಲೆ ತೆತ್ತಿದೆ. ಈ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ತಂಡದಲ್ಲಿನ ಬಣ ರಾಜಕೀಯ ಬಟಾಬಯಲಾಗಿದೆ. ಅಷ್ಟೇ ಅಲ್ಲ, ಈ ಪಂದ್ಯದಲ್ಲಿ ಹಾರ್ದಿಕ್ ನಡೆದುಕೊಂಡ ರೀತಿಯಂತೂ ಎಲ್ಲರ ಕಂಗಣ್ಣಿಗೆ ಗುರಿಯಾಗಿಸಿದೆ.
ಇದನ್ನೂ ಓದಿ: ಪಂಜಾಬ್ ವಿರುದ್ಧ RCBಗೆ ರೋಚಕ ಗೆಲುವು; ಬೆಂಗಳೂರು ತಂಡದ ಗೆಲುವಿನ ಹಿಂದಿದೆ 8 ಕಾರಣಗಳು..!
ಮೊದಲ ಪಂದ್ಯದಲ್ಲೇ ರೋಹಿತ್ಗೆ ಅಪಮಾನ..!
ಬಹುತೇಕ ಫ್ಯಾನ್ಸ್ ಕಣ್ಣು ಗುಜರಾತ್, ಮುಂಬೈ ಪಂದ್ಯದ ಮೇಲಿತ್ತು. ಇದಕ್ಕೆ ಕಾರಣ ರೋಹಿತ್ ಶರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಸುದ್ದಿ. ಸರಿಯಿಲ್ಲ ಅನ್ನೋದನ್ನ ನಾಯಕ ಹಾರ್ದಿಕ್ ಪಾಂಡ್ಯ, ಮೊದಲ ಪಂದ್ಯದಲ್ಲೇ ಪ್ರೂವ್ ಮಾಡಿಬಿಟ್ಟರು. ಅನುಭವಿ ನಾಯಕನ ಬಳಿ ಒಂದೇ ಒಂದು ಸಲಹೆ ಪಡೆಯದೇ ನಾನೇ ಗ್ರೇಟ್ ಎಂಬ ಅಹಃ ಅನ್ನ ಹಾರ್ದಿಕ್ ಪಾಂಡ್ಯ ಪ್ರದರ್ಶಿಸಿದರು.
ಲಾಕಿ ವುಡ್ರಿಂದಲೂ ತಿರಸ್ಕಾರಕ್ಕೆ ಒಳ್ಳಪಟ್ಟ ರೋಹಿತ್..!
ಪವರ್ ಪ್ಲೇನಲ್ಲಿ ಸ್ಲಿಪ್ ಹಾಗೂ ಫ್ರಂಟ್ನಲ್ಲೇ ರೋಹಿತ್ ಫೀಲ್ಡಿಂಗ್ ನಡೆಸ್ತಿದ್ರು. ಈ ವೇಳೆ ವೇಗಿ ಲಾಕಿ ವುಡ್ಗೆ ಟಿಪ್ಸ್ ನೀಡಲು ರೋಹಿತ್ ಮುಂದಾದರು. ಆತ ನೋಡಿಯೂ ನೋಡದಂತೆಯೇ ತೆರಳಿದ್ರು. ಈ ಘಟನೆ ನಡೆದ ಬೆನ್ನಲ್ಲೇ 30 ಯಾರ್ಡ್ ಸರ್ಕಲ್ನಲ್ಲಿದ್ದ ರೋಹಿತ್ ರನ್ನ ಹಾರ್ದಿಕ್ ಬೌಂಡರಿ ಗೆರೆ ಬಳಿ ಓಡಿಸಿದ್ರು. ಇದು ಸಾಲದೆಂಬಂತೆ ಪದೇ ಪದೇ ಫೀಲ್ಡ್ ಪ್ಲೇಸ್ಮೆಂಟ್ ಚೇಂಜ್ ಮಾಡ್ತಿದ್ರು.
ರೋಹಿತ್ ಕಡೆಗಣನೆಗೆ ಸಿಕ್ತು ಸೋಲಿನ ಪ್ರತಿಫಲ..!
ಅನುಭವಿಯಾಗಿ ರೋಹಿತ್, ಹಾರ್ದಿಕ್ಗೆ ಸಾಥ್ ನೀಡಲು ಮುಂದಾದ್ರು. ಕೆಲವೊಮ್ಮೆ ಫೀಲ್ಡಿಂಗ್ ಕೂಡ ಸೆಟ್ ಮಾಡಿ ನೆರವಾದ್ರು. ಇದನ್ನ ಸಹಿಸದ ಹಾರ್ದಿಕ್, ರೋಹಿತ್ ಸಲಹೆಯನ್ನ ತಿರಸ್ಕರಿಸಿದ್ರು. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಬೂಮ್ರಾ ಬಳಿಗೆ ರೋಹಿತ್ ಬಂದಾಗ ಅಲ್ಲಿಂದ ಹಾರ್ದಿಕ್, ಕಾಲ್ಕಿತ್ತಿದ್ದು, ಇದರ ಪ್ರತಿಫಲವೇ ಮುಂಬೈ ಇಂಡಿಯನ್ಸ್ ತಂಡದ ಸೋಲು. ಪಂದ್ಯ ಸೋತಿದ್ದೆ ತಡ ಮುಂಬೈ ತಂಡದಲ್ಲಿನ ಗುಂಪುಗಾರಿಕೆಯೂ ಬಟಾಬಯಲಾಯ್ತು. ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ತಿಲಕ್ ವರ್ಮಾ ಒಂದ್ಕಡೆ ಡಗೌಟ್ನಲ್ಲಿ ಡೀಪ್ ಡಿಸ್ಕಷನ್ ನಡೆಸ್ತಿದ್ರೆ, ನಾಯಕ ಹಾರ್ದಿಕ್ ಆ್ಯಂಡ್ ಗ್ಯಾಂಗ್ ಬೇರೆಡೆ ಠಿಕಾಣಿ ಹೂಡಿತ್ತು.
ಋತುರಾಜ್ರಂತೆ ತಗ್ಗಿಬಗ್ಗಿ ನಡೀಬೇಕು ಹಾರ್ದಿಕ್..!
ಹಾರ್ದಿಕ್ ಪಾಂಡ್ಯ ಎಕ್ಸ್ಪಿರಿಯನ್ಸ್ ಕ್ಯಾಪ್ಟನ್ ಅನ್ನೋದು ನಿಜ. 5 ಬಾರಿ ಮುಂಬೈ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ ರೋಹಿತ್ನ ಕಡೆಗಣಿಸುವುದು ಎಷ್ಟು ಸರಿ. ಇದೇ ಕಾರಣಕ್ಕೆ ಫ್ಯಾನ್ಸ್, ಋತುರಾಜ್ ಜೊತೆ ಹೋಲಿಸಿ ಟೀಕಿಸ್ತಿದ್ದಾರೆ. ಚೆನ್ನೈ ಆಟಗಾರರ ಬಾಂಡಿಗ್ ವಿಡಿಯೋಗಳನ್ನ ಪೋಸ್ಟ್ ಮಾಡಿ ನೋಡಿ ಕಲೀರಿ ಅಂತಿದ್ದಾರೆ. ಒಟ್ನಲ್ಲಿ, ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ಎಂಬ ಒನ್ ಫ್ಯಾಮಿಲಿ, ಮೆನಿ ಫ್ಯಾಮಿಲಿ ಆಗಿದೆ ಅನ್ನೋದು ಬಟಾ ಬಯಲಾಗಿದ್ದು, ಇದು ಯಾವ ಹಂತಕ್ಕೆ ಹೋಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್