/newsfirstlive-kannada/media/post_attachments/wp-content/uploads/2024/05/IYER-2.jpg)
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಆಗಿ ಮಾಡಿದ ಕೀರ್ತಿ ಶ್ರೇಯಸ್​ ಅಯ್ಯರ್​​ಗೆ ಸಲ್ಲುತ್ತದೆ. ಮೇ 26 ರಂದು ನಡೆದ ಐಪಿಎಲ್ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್​ ಟ್ರೋಫಿಯನ್ನು ಗೆದ್ದುಕೊಂಡಿತು.
ಕೆಕೆಆರ್ ಚಾಂಪಿಯನ್ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ನಾಯಕತ್ವವನ್ನು ಕೊಂಡಾಡುತ್ತಿದ್ದಾರೆ. ಈ ಮಧ್ಯೆ ಟೀಂ ಇಂಡಿಯಾದ ಮೋಸ್ಟ್ ಬ್ಯಾಚುಲರ್ ಅಯ್ಯರ್ ಅವರ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸುಂದರ ಯುವತಿ ಜೊತೆ ನಿಂತಿರುವ ಫೋಟೋ ಸಾಕಷ್ಟು ಸದ್ದು ಮಾಡುತ್ತಿದೆ.
ಇದನ್ನೂ ಓದಿ:ಅಂತೆ-ಕಂತೆ ವದಂತಿಗಳ ಮಧ್ಯೆ ಟ್ವೀಟ್ ಮಾಡಿ ನಾಲ್ಕು ಫೋಟೋ ಶೇರ್ ಮಾಡಿದ ಹಾರ್ದಿಕ್ ಪಾಂಡ್ಯ
ಅಂದ್ಹಾಗೆ ಆ ಹುಡುಗಿ ಬೇರೆ ಯಾರೂ ಅಲ್ಲ. ಅಫ್ಘಾನಿಸ್ತಾನದ ವಾಜ್ಮಾ ಅಯೂಬಿ. ಇವರು ಸೋಶಿಯಲ್ ಮೀಡಿಯಾದಲ್ಲಿ ಅಯ್ಯರ್ ಜೊತೆಗೆ ತೆಗೆಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ವಾಜ್ಮಾ ಅವರು ಟೀಂ ಇಂಡಿಯಾದ ಅಭಿಮಾನಿ ಹಾಗೂ ಅಪ್ಪಟ ಕ್ರಿಕೆಟ್ ಪ್ರೇಮಿ. ಇವರು ಸೌಂದರ್ಯಕ್ಕೂ ಹೆಸರುವಾಸಿ. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ವೇಳೆ ಅವರು ಸ್ಟೇಡಿಯಂಗೆ ಬರುತ್ತಾರೆ.
ಫೋಟೋ ಶೇರ್ ಮಾಡಿರುವ ವಾಜ್ಮಾ.. ವಿನ್ನಿಂಗ್ ಕ್ಯಾಪ್ಟನ್ ಎಂದು ಬರೆದು ಶ್ರೇಯಸ್ ಅಯ್ಯರ್​ಗೆ ಟ್ಯಾಗ್ ಮಾಡಿದ್ದಾರೆ. ಬಿಸಿಸಿಐ 2023-24ರ ಕೇಂದ್ರ ಒಪ್ಪಂದದಿಂದ ಅಯ್ಯರ್ ಅವರನ್ನು ಕೈಬಿಟ್ಟಿದೆ. ರಣಜಿ ಟ್ರೋಫಿ ಪಂದ್ಯಗಳನ್ನು ಆಡದ ಕಾರಣ ಅಯ್ಯರ್ ಅವರನ್ನು ಕೈಬಿಟ್ಟಿದೆ. ಇದರ ಹೊರತಾಗಿಯೂ ಕೆಕೆಆರ್ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ.
ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ.. ಬಿಸಿಸಿಐನ ಈ ತಾರತಮ್ಯ ಯಾಕೆ?
2023ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಯ್ಯರ್ ಟೀಮ್ ಇಂಡಿಯಾದ ಭಾಗವಾಗಿದ್ದರು. ಅಯ್ಯರ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು. 11 ಇನ್ನಿಂಗ್ಸ್‌ಗಳಲ್ಲಿ 66.25 ಸರಾಸರಿಯಲ್ಲಿ 530 ರನ್ ಗಳಿಸಿದ್ದರು. ಈ ಅವಧಿಯಲ್ಲಿ ಅವರು 2 ಶತಕ ಮತ್ತು 3 ಅರ್ಧ ಶತಕಗಳನ್ನು ಗಳಿಸಿದ್ದರು.
One with the winning captain @ShreyasIyer15 🧑✈️ pic.twitter.com/EvxTOqjYjB
— Wazhma Ayoubi 🇦🇫 (@WazhmaAyoubi) May 28, 2024
ಇದನ್ನೂ ಓದಿ:ಕಿಟಗಿ ಇದ್ದರೆ ಸಾಕು ನುಸುಳಲು.. ದಂಗು ಬಡಿಸುವಂತಿದೆ ಕಳ್ಳ ಅಕ್ಕ-ತಮ್ಮನ ಕೈಚಳಕ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us