newsfirstkannada.com

ಇಂದು CSKvsGT ನಡುವೆ ಬಿಗ್​ ಫೈಟ್​​.. ಚೆಪಾಕ್​ ಅಂಗಳದಲ್ಲಿ ಗೆಲ್ಲೋದ್ಯಾರು?

Share :

Published March 26, 2024 at 9:45am

Update March 26, 2024 at 9:48am

    ಗೆದ್ದವರ ಕಾಳಗದಲ್ಲಿ ಇಂದು ವಿನ್ನರ್​ ಯಾರು..?

    ಶುಭ್​ಮನ್ vs ಋತುರಾಜ್ ನಡುವೆ ಭವಿಷ್ಯದ ಫೈಟ್​!

    ಇವರಿಬ್ಬರ ಬೆನ್ನಿಗಿದ್ದಾರೆ ಶ್ರೀಕೃಷ್ಣನಂತ ಸಾರಥಿಯರು..!

ಮತ್ತೊಂದು ಹೈವೋಲ್ಟೇಜ್ ಥ್ರಿಲ್ಲರ್​ IPL ಮ್ಯಾಚ್​ಗೆ ವೇದಿಕೆ ಸಜ್ಜಾಗಿದೆ. ಮೊದಲ ಪಂದ್ಯ ಗೆದ್ದಿರೋ ಚೆನ್ನೈ ಹಾಗೂ ಗುಜರಾತ್​​, ಗೆಲುವಿನ ನಾಗಲೋಟ ಮುಂದುವರಿಸುವ ತವಕದಲ್ಲಿವೆ. ಆದ್ರೆ, ಈ ಪಂದ್ಯದ ಗೆಲುವು ಸೋಲಿನ ಲೆಕ್ಕಾಚಾರಕ್ಕಿಂತ, ನಾಯಕರ ಮುಖಾಮುಖಿಯೇ ಹೆಚ್ಚು ಕುತೂಹಲ ಕೆರಳಿಸಿದೆ.

ಐಪಿಎಲ್​ ಟೂರ್ನಿಯ ಇಂದಿನ ಮೆಗಾ ಫೈಟ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ – ಗುಜರಾತ್ ಟೈಟನ್ಸ್​ ಮುಖಾಮುಖಿಯಾಗ್ತಿವೆ. ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿರೋ ಉಭಯ ತಂಡಗಳು ಚೆಪಾಕ್​ನಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿವೆ. ಹಾಲಿ ಚಾಂಪಿಯನ್ಸ್​ ಹಾಗೂ ರನ್ನರ್ ​​​​​​​​​​​​​​​​​ಅಪ್​​ಗಳ ಕಾದಾಟ ತೀವ್ರ ಕುತೂಹಲ ಕೆರಳಿಸಿದೆ.

ಒಂದೆಡೆ ಹಾಲಿ ಚಾಂಪಿಯನ್ಸ್​ ಹಾಗೂ ರನ್ನರ್​ಅಪ್​ ನಡುವಿನ ಕದನ ಕುತೂಹಲವಾದ್ರೆ, ಇನ್ನೊಂದೆಡೆ ಯಂಗ್​ ಕ್ಯಾಪ್ಟನ್ಸ್​ ಮುಖಾಮುಖಿ ಹೇಗಿರುತ್ತೆ ಎಂಬ ಪ್ರಶ್ನೆ ಕ್ರಿಕೆಟ್​ ವಲಯದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್​ ನೂತನ ನಾಯಕ ಋತುರಾಜ್ ಗಾಯಕ್ವಾಡ್ ಆ್ಯಂಡ್ ಗುಜರಾತ್​ ಟೈಟನ್ಸ್​ ನಯಾ ಕ್ಯಾಪ್ಟನ್ ಶುಭ್​ಮನ್​​ ಗಿಲ್ ಮುಖಾಮುಖಿಯಲ್ಲಿ ಗೆಲ್ಲೋದ್ಯಾರು ಅನ್ನೋದೆ ಹಾಟ್​​ಟಾಪಿಕ್​​.!

ಇದನ್ನೂ ಓದಿ: ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಟಿಪ್ಪರ್.. ಬೈಕ್​​ ಸವಾರ ಸಾವು, ಮತ್ತೋರ್ವ ಗಂಭೀರ

ಇಂದು ನಡೆಯೋದು ಫ್ಯೂಚರ್ ಕ್ಯಾಪ್ಟನ್ಸ್​ ಫೈಟ್​.!

ಇಂದು ಚೆನ್ನೈನ ಚಿದಂಬರಂನಲ್ಲಿ ನಡೆಯೋದು ನಾಯಕರ ಕಾಳಗ. ಹೌದು..! ಮೊದಲ ಪಂದ್ಯದಲ್ಲೇ ನಾಯಕರಾಗಿ ಗೆದ್ದವರ ಕಾಳಗ. ಈ ಗೆದ್ದವರ ಕಾಳಗದಲ್ಲಿ ಇಂದು ಯಾರ್ ಗೆಲ್ತಾರೆ ಅನ್ನೋದು ಕ್ಯುರಿಯಾಸಿಟಿ ಹುಟ್ಟಿಸಿದೆ. ಹೀಗಾಗಿಯೇ ಇಂದಿನ ಫೈಟ್​​​​ ಚೆನ್ನೈ ವರ್ಸಸ್ ಗುಜರಾತ್​ ಎಂಬುವುದಕ್ಕಿಂತ ಹೆಚ್ಚಾಗಿ ಇಂಡಿಯನ್ ಫ್ಯೂಚರ್ ಕ್ಯಾಪ್ಟನ್​​ಗಳ ಫೈಟ್ ಆಗಿ ಬಿಂಬಿತವಾಗಿದೆ.

ಶುಭ್​ಮನ್, ಋತುರಾಜ್ ನಡುವೆ ಭವಿಷ್ಯದ ಫೈಟ್​!

ಇವರಿಬ್ಬರೂ ಐಪಿಎಲ್​ನಲ್ಲೇ ಮುಖಾಮುಖಿಯಾಗ್ತಿದ್ದರೂ, ಇವರಿಬ್ಬರ ಗುರಿ ಟೀಮ್ ಇಂಡಿಯಾ ನಾಯಕನ ಪಟ್ಟವಾಗಿದೆ. ಯಾಕಂದ್ರೆ, ಈಗಾಗಲೇ ಟೀಮ್ ಇಂಡಿಯಾದ ಸ್ಟಾರ್​ಗಳಾಗಿರುವ ಇವರಿಬ್ಬರು, ಭವಿಷ್ಯದ ನಾಯಕರಾಗುವ ರೇಸ್​ನಲ್ಲಿ ಮುಂಚೂಣಿಯಾಗಿದ್ದಾರೆ. ಈಗಾಗಲೇ ಋತುರಾಜ್, ನಾಯಕ ಹಾಗೂ ಉಪ ನಾಯಕನಾಗಿಯೂ ಟೀಮ್ ಇಂಡಿಯಾ ಪರ ಕಾರ್ಯ ನಿರ್ವಹಿಸಿದ್ದಾರೆ. ಅತ್ತ ಶುಭ್​ಮನ್​ ಗಿಲ್​ ಅಂತರಾಷ್ಟ್ರೀಯ ಮಟ್ಟದಲ್ಲಿ ನಾಯಕ, ಉಪ ನಾಯಕನಾಗದಿದ್ರೂ, ನಾಯಕತ್ವದ ರೇಸ್​ನ ಸ್ಟ್ರಾಂಗ್ ಕಂಟೇಡರ್ ಅನ್ನೋದ್ರಲ್ಲಿ ಅನುಮಾನವಿಲ್ಲ.

ಎಲ್ಲದಕ್ಕೂ ಐಪಿಎಲ್ ಟೂರ್ನಿಯೊಂದೇ ವೇದಿಕೆ..!

ಒಂದ್ಕಡೆ ಫ್ಯೂಚರ್​ ಕ್ಯಾಪ್ಟನ್​​ಗಳಾಗಿ ಗುರುತಿಸಿಕೊಂಡಿರೋ ಇವರು, ಜೂನ್​ನಲ್ಲಿ ನಡೆಯೋ ಟಿ20 ವಿಶ್ವಕಪ್​​​​​​​​​​​​​​​​​​​​​​​​​​​​​​​​​​​​​​​​​​​​​​​​​ನಲ್ಲಿ ಸ್ಥಾನ ಪಡೆಯೋ ರೇಸ್​ನಲ್ಲೂ ಇದ್ದಾರೆ. ಬ್ಯಾಕ್​ ಆಪ್ ಓಪನರ್ ಸ್ಲಾಟ್​ಗಾಗಿ ಇವರಿಬ್ಬರ ನಡುವೆಯೇ ನೇರಸ್ಪರ್ಧೆ ಇದೆ. ಹೀಗಾಗಿ ಐಪಿಎಲ್​​ನಲ್ಲಿ ಇವರಿಬ್ಬರ ರನ್​ ಬ್ಯಾಟಲ್ ನಡೆಯೋದು ಕನ್ಫರ್ಮ್.

ವ್ಯೂಹಾತ್ಮಕ ಯುದ್ಧದಲ್ಲಿ ಇಂದು ಯಾರಿಗೆ ಅಪಜಯ..?

ಮೊದಲ ಪಂದ್ಯದಲ್ಲಿ ನಾಯಕರಾಗಿ ಋತುರಾಜ್, ಶುಭ್​ಮನ್​ ಗೆದ್ದಿದ್ದಾರೆ ನಿಜ. ಆದ್ರೆ, ನಾಯಕರಾಗಿ ಗಮನ ಸೆಳೆದಿದ್ದು ಋತುರಾಜ್, ಅನ್ನೋದ್ರಲ್ಲಿ ಎರಡು ಮಾತಿಲ್ಲ. ಬೌಲರ್​ಗಳನ್ನ ಬಳಸಿಕೊಂಡ ರೀತಿ, ಕೊನೆ ಓವರ್​ನಲ್ಲಿ ದೇಶಪಾಂಡೆ ಮೇಲಿಟ್ಟ ಭರವಸೆ. ಫೀಲ್ಡಿಂಗ್ ಚೇಂಜಸ್ ಇಂಪ್ರೆಸ್ಸಿಂಗ್ ಅಗಿತ್ತು. ಆದ್ರೆ, ಈ ವಿಚಾರದಲ್ಲಿ ಶುಭ್​ಮನ್, ಕೋಚ್ ಅಶಿಶ್ ನೆಹ್ರಾರನ್ನೇ ನಂಬಿಕೊಂಡಂತೆ ಇತ್ತು. ಇವರಿಬ್ಬರ ಬೆನ್ನಿಗೆ ಶ್ರೀಕೃಷ್ಣನಂತೆ ಮಹೇಂದ್ರ ಸಿಂಗ್ ಧೋನಿ, ಆಶಿಶ್​ ನೆಹ್ರಾ ಇದ್ದಾರೆ. ಹೀಗಾಗಿ ಈ ರಣಕಲಿಗಳ ವ್ಯೂಹಾತ್ಮಕ ಯುದ್ಧ ಹೇಗಿರುತ್ತೆ ಅನ್ನೋ ಕುತೂಹಲವಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು CSKvsGT ನಡುವೆ ಬಿಗ್​ ಫೈಟ್​​.. ಚೆಪಾಕ್​ ಅಂಗಳದಲ್ಲಿ ಗೆಲ್ಲೋದ್ಯಾರು?

https://newsfirstlive.com/wp-content/uploads/2024/03/CSK-vs-GT.jpg

Load More