newsfirstkannada.com

ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಟಿಪ್ಪರ್.. ಬೈಕ್​​ ಸವಾರ ಸಾವು, ಮತ್ತೋರ್ವ ಗಂಭೀರ

Share :

Published March 26, 2024 at 8:36am

  ಬೈಕ್​ನಲ್ಲಿ ತೆರಳುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದ ಟಿಪ್ಪರ್​

  ಟಿಪ್ಪರ್​​ ಗುದ್ದಿದ ರಭಸಕ್ಕೆ ನೆಲಕ್ಕೆ ಬಿದ್ದ ಬೈಕ್​ ಸವಾರರು

  ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಟಿಪ್ಪರ್​, ಓರ್ವ ಸಾವು

ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾಗಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಕೆಂಗೇರಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ಅನ್ವರ್ ಶೇಖ್ ಎಂಬ 34 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಅನ್ವರ್ ಶೇಖ್ ನಿನ್ನೆ ಮೊಹಮ್ಮದ್ ನಾದಿರ್ ಅಲಂ ಎಂಬಾತನ ಜೊತೆ ಬೈಕ್ ನಲ್ಲಿ ಹೋಗ್ತಿದ್ದರು. ರಾತ್ರಿ 10.40ರ ಸುಮಾರಿಗೆ ಉತ್ತರಹಳ್ಳಿ ಕಡೆಯಿಂದ ಮೈಸೂರು ರಸ್ತೆಯಲ್ಲಿ ಕೆಂಗೇರಿ ಕಡೆ ಇಬ್ಬರು ಹೋಗ್ತಾ ಇದ್ರು. ಈ ವೇಳೆ ಹಿಂದಿನಿಂದ ಬಂದಿದ್ದ ಟಿಪ್ಪರ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ನಲ್ಲಿ ಕೂತಿದ್ದ ಇಬ್ಬರೂ ಕೆಳ ಬಿದ್ದಿದ್ದಾರೆ.

ಟಿಪ್ಪರ್ ಚಕ್ರ ಹರಿದು ಗಂಭೀರ

ಹಿಂಬದಿ ಕೂತಿದ್ದ ಶೇಕ್ ಅನ್ವರ್ ಮೇಲೆ ಟಿಪ್ಪರ್ ಚಕ್ರ ಹರಿದು ಗಂಭೀರ ಗಾಯವಾಗಿತ್ತು. ಅತ್ತ ಆಲಂಗೂ ಕೂಡ ಅಪಘಾತದಲ್ಲಿ ಗಾಯಗಳಾಗಿತ್ತು. ಬಳಿಕ ಇಬ್ಬರನ್ನೂ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶೇಕ್ ಅನ್ವರ್ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಚಿರತೆ, ಹುಲಿ, ಆನೆ, ಹಂದಿ ದಾಳಿ ಆಯ್ತು.. ಈ ಊರಲ್ಲಿ ನರಿ ದಾಳಿಗೆ ಮೂವರು ಆಸ್ಪತ್ರೆ ಪಾಲು..!

ಸದ್ಯ ಮೊಹಮ್ಮದ್ ನಾದಿರ್ ಆಲಂಗೆ ಚಿಕಿತ್ಸೆ ಮುಂದುವರೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೆಂಗೇರಿ ಸಂಚಾರಿ ಠಾಣೆಯಲ್ಲಿ ಟಿಪ್ಪರ್ ಚಾಲಕನ ವಿರುದ್ದ ಕೇಸ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಟಿಪ್ಪರ್.. ಬೈಕ್​​ ಸವಾರ ಸಾವು, ಮತ್ತೋರ್ವ ಗಂಭೀರ

https://newsfirstlive.com/wp-content/uploads/2024/03/Kengeri.jpg

Load More