newsfirstkannada.com

ಚಿರತೆ, ಹುಲಿ, ಆನೆ, ಹಂದಿ ದಾಳಿ ಆಯ್ತು.. ಈ ಊರಲ್ಲಿ ನರಿ ದಾಳಿಗೆ ಮೂವರು ಆಸ್ಪತ್ರೆ ಪಾಲು..!

Share :

Published March 26, 2024 at 7:46am

Update March 26, 2024 at 7:49am

  ನರಿಗಳು ದಾಳಿ ಮಾಡುತ್ತವೆ ಹುಷಾರ್ ಹುಷಾರ್..!

  ಜಮೀನಿಗೆ ಹೋಗಲು ಭಯ ಪಡುತ್ತಿದ್ದಾರೆ ಈ ಊರ ಜನ

  ಕೈ, ಕಾಲು ಕಚ್ಚಿ ಗಾಯ ಮಾಡ್ತಿರುವ ಕಿಲಾಡಿ ನರಿ

ಇಷ್ಟು ದಿನ ಹುಲಿ, ಚಿರತೆ, ಆನೆ, ಹಂದಿ ಮನುಷ್ಯರ ಮೇಲೆ ದಾಳಿ ಮಾಡಿರುವ ಸುದ್ದಿಗಳ ಬಗ್ಗೆ ಕೇಳಿದ್ದಿರಿ. ಆದರೆ ಗದಗ ಶಿರಹಟ್ಟಿ ತಾಲೂಕಿನ ಮಜ್ಜೂರು ಗ್ರಾಮದ ಜನರು ನರಿಯ ದಾಳಿಯಿಂದ ಕಂಗಾಲಾಗಿದ್ದಾರೆ.

ಜಮೀನಿಗೆ ಹೋದವರ ಮೇಲೆ ನರಿ ಏಕಾಏಕಿಯಾಗಿ ದಾಳಿ ಮಾಡಿದ್ದು, ಹಲವರಿಗೆ ಗಾಯಗೊಂಡಿದ್ದಾರೆ. ಕಂಡ ಕಂಡವರ ಮೇಲೆ ದಾಳಿ ನರಿ ದಾಳಿ ಮಾಡ್ತಿದ್ದು, ಗ್ರಾಮಸ್ಥರು ಜಮೀನಿಗೆ ಹೋಗಲು ಆಗದೇ ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮದ ಸಮೀರ್ ಹೆಸರೂರು, ಬೀಬಿಜಾನ್ ಬಟ್ಟೂರ, ಸಂತೋಷ ಲಮಾಣಿ ಎಂಬರ ಮೇಲೆ ದಾಳಿ ಮಾಡಿದೆ.

ಇದನ್ನೂ ಓದಿ: ಈ ಬಾರಿ ಮೋದಿ ಸ್ಟೇಡಿಯಂನಲ್ಲಿ IPL ಫೈನಲ್ ಪಂದ್ಯ ನಡೆಯಲ್ಲ; ಮತ್ತೆಲ್ಲಿ ನಡೆಯೋದು..?

ನರಿ ದಾಳಿಗೆ ಒಳಗಾದ ಇವರು ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕಾಲು, ಕೈ ಬೆರಳುಗಳಿಗೆ ಕಚ್ಚಿ ಗಾಯಮಾಡಿದೆ. ನರಿಗೆ ಹುಚ್ಚು ಹಿಡಿದಿರುವ ಶಂಕೆ ವ್ಯಕ್ತವಾಗಿದೆ. ಆ ನರಿ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿಇನ್ಮುಂದೆ ಕಾಡು ಪ್ರಾಣಿಗಳ ಜೊತೆ ಸೆಲ್ಫಿ ಕ್ಲಿಕ್ಕಿಸಿದರೆ ಅರೆಸ್ಟ್​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿರತೆ, ಹುಲಿ, ಆನೆ, ಹಂದಿ ದಾಳಿ ಆಯ್ತು.. ಈ ಊರಲ್ಲಿ ನರಿ ದಾಳಿಗೆ ಮೂವರು ಆಸ್ಪತ್ರೆ ಪಾಲು..!

https://newsfirstlive.com/wp-content/uploads/2024/03/FOX-ATTACK.jpg

Load More