Iran Israel war: ಘೋರ ಯುದ್ಧ ನಡೆದರೆ ಯಾರಿಗೆ ಮೇಲುಗೈ ಆಗಬಹುದು..?

author-image
Ganesh
Updated On
Iran Israel war: ಘೋರ ಯುದ್ಧ ನಡೆದರೆ ಯಾರಿಗೆ ಮೇಲುಗೈ ಆಗಬಹುದು..?
Advertisment
  • ಇರಾನ್-ಇಸ್ರೇಲ್ ನಡುವಿನ ಸಂಘರ್ಷ ವಿಕೋಪಕ್ಕೆ ತಿರುಗಿದೆ
  • ಇರಾನ್ ತಕ್ಕ ಬೆಲೆ ತೆರಬೇಕಾಗುತ್ತೆ ಎಂದು ನೆತನ್ಯಾಹು ಎಚ್ಚರಿಕೆ
  • ಮೊದಲ ಬಾರಿಗೆ ಹೈಪರ್ ಸಾನಿಕ್ ಫತಾ ಮಿಸೈಲ್ ಬಳಸಿದ ಇರಾನ್

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ವಿಕೋಪಕ್ಕೆ ತಿರುಗಿದೆ. ಇದೀಗ ಇಡೀ ವಿಶ್ವಕ್ಕೆ ಮತ್ತೊಂದು ಯುದ್ಧದ ಆತಂಕ ಶುರುವಾಗಿದೆ. ಇಷ್ಟಕ್ಕೆಲ್ಲ ಕಾರಣ ಇರಾನ್ ಕಳೆದ ರಾತ್ರಿ (2 ಅಕ್ಟೋಬರ್ 2024) ಇಸ್ರೇಲ್ ಮೇಲೆ 200ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಡಾಯಿಸಿರೋದು.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಮಾರಣಾಂತಿಕ ದಾಳಿ ನಡೆಸಿದೆ. ಐಆರ್‌ಜಿಸಿ ಉನ್ನತ ಅಧಿಕಾರಿಗಳು, ಹಮಾಸ್ ಮತ್ತು ಹಿಜ್ಬುಲ್ಲಾ ನಾಯಕರ ಹತ್ಯೆಗಳ ಪ್ರತೀಕಾರವಾಗಿ ಇಸ್ರೇಲ್ ಮೇಲೆ ದಾಳಿ ಮಾಡಲಾಗಿದೆ ಎಂದು ಇರಾನ್ ಹೇಳಿದೆ.

ಇದನ್ನೂ ಓದಿ:ಇಸ್ರೇಲ್​ ಮತ್ತು ಇರಾನ್​ ರಕ್ತಸಿಕ್ತ ಸಂಘರ್ಷ.. 200ಕ್ಕೂ ಹೆಚ್ಚು ಮಿಸೈಲ್ ಅಟ್ಯಾಕ್, 8 ಜನರು ಸಾವು

ನಮ್ಮ ಮೇಲೆ ದಾಳಿ ಮಾಡಿದ ಪರಿಣಾಮ ಇರಾನ್ ಭಾರೀ ಪ್ರಮಾಣದಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಗುಡುಗಿದ್ದಾರೆ. ಅಲ್ಲದೇ ಇಸ್ರೇಲ್​ಗೆ ಬೆಂಬಲ ನೀಡುವಂತೆ ಅಮೆರಿಕ ಕೂಡ ಘೋಷಣೆ ಮಾಡಿದೆ. ಇರಾನ್‌ನ ಈ ದಾಳಿಯ ವಿರುದ್ಧ ವಿಶ್ವದ ಹಲವು ದೇಶಗಳು ಮಾತನಾಡುತ್ತಿವೆ. ಹೀಗಾಗಿ ಈ ಬಿಕ್ಕಟ್ಟು ಮತ್ತಷ್ಟು ಉದ್ವಿಗ್ನಗೊಳ್ಳುವ ಸಾಧ್ಯತೆ ಇದೆ.

ಕುದಿಯಲಿದೆ ಮಧ್ಯಪ್ರಾಚ್ಯ
ಮಧ್ಯಪ್ರಾಚ್ಯವು ಈಗ ಪೂರ್ಣ ಪ್ರಮಾಣದ ಪ್ರಾದೇಶಿಕ ಯುದ್ಧದಲ್ಲಿದೆ. ಇರಾನ್ ದಾಳಿಗೆ ಇಸ್ರೇಲ್ ಪ್ರತಿಕ್ರಿಯಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಜಾಗತಿಕ ವ್ಯವಹಾರಗಳ ಮಧ್ಯಪ್ರಾಚ್ಯ ಕೌನ್ಸಿಲ್‌ನ ಸಹವರ್ತಿ ಒಮರ್ ರೆಹಮಾನ್ ಹೇಳಿದ್ದಾರೆ. ಇಸ್ರೇಲ್​ನ ಕ್ರಮ ದೊಡ್ಡ ಯುದ್ಧಕ್ಕೆ ಕಾರಣವಾಗಿದೆ. ಅದಕ್ಕೆ ಪ್ರತೀಕಾರ ಇರಬಹುದು. ನಮಗೆ ಗೊತ್ತಿರುವಂತೆ ಇಸ್ರೇಲ್ ದೊಡ್ಡ ಪ್ರಮಾಣದಲ್ಲಿ ವಿನಾಶವನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ:ಹಿಜ್ಬುಲ್ಲಾ ಮುಖಂಡ ಹಸನ್ ನಸ್ರುಲ್ಲಾ ಕಥೆ ಮುಗಿಸಿದ ಇಸ್ರೇಲ್,ಇತ್ತ ಇರಾನ್​ಗೆ ತಳಮಳ ಶುರುವಾಗಿದ್ದು ಏಕೆ..?

ಯಾರಿಗೆ ಮೇಲುಗೈ?
ತಜ್ಞರ ಪ್ರಕಾರ.. ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದರೆ ಮತ್ತು ಯುದ್ಧ ಪ್ರಾರಂಭವಾದರೆ ಇನ್ನೂ ಅನೇಕ ದೇಶಗಳು ಭಾಗಿಯಾಗಬಹುದು. ಇಸ್ರೇಲ್‌ ಜೊತೆ ಅಮೆರಿಕ ನಿಲ್ಲಬಹುದು. ಕೆಲವು ಮುಸ್ಲಿಂ ರಾಷ್ಟ್ರಗಳು ಇರಾನ್‌ಗೆ ಬೆಂಬಲ ನೀಡಬಹುದು. ಅಮೆರಿಕ ಪ್ರವೇಶದ ನಂತರ, ಬ್ರಿಟನ್ ಮತ್ತು ಫ್ರಾನ್ಸ್ ಕೂಡ ಈ ಯುದ್ಧದಲ್ಲಿ ಇಸ್ರೇಲ್ ಬೆಂಬಲಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಇಸ್ರೇಲ್ ಇರಾನ್ ಅನ್ನು ಸೋಲಿಸಬಹುದು.

ಇದನ್ನೂ ಓದಿ:ಹಿಜ್ಬುಲ್ಲಾ ಮುಖಂಡ ಹಸನ್ ನಸ್ರುಲ್ಲಾ ಕಥೆ ಮುಗಿಸಿದ ಇಸ್ರೇಲ್,ಇತ್ತ ಇರಾನ್​ಗೆ ತಳಮಳ ಶುರುವಾಗಿದ್ದು ಏಕೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment