ಘೋರ ಯುದ್ಧಕ್ಕೆ ಮಧ್ಯ ಪ್ರಾಚ್ಯ ದೇಶಗಳು ಸಾಕ್ಷಿ ಆಗುತ್ತಾವಾ?
PM ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಚರ್ಚೆ
ಲೆಬೆನಾನ್- ಇಸ್ರೇಲ್ ನಡುವೆ ಮುಂದುವರೆದ ಸಂಘರ್ಷ
ಒಂದು ವಾರ ಕಳೆದರು ಬ್ರೇಕ್ ಕೊಡದೇ ಸಿಕ್ಕ ಸಿಕ್ಕ ಜಾಗಗಳ ಮೇಲೆ ಸಿಕ್ಕ ಸಿಕ್ಕ ಕಡೆಗಳಲ್ಲಿ ಲೆಬೆನಾನ್ ಉಗ್ರರ ಮೇಲೆ ಇಸ್ರೇಲ್ ದಾಳಿ ಮುಂದುವರೆಸುತ್ತಿದೆ. ಟನ್ಗಟ್ಟಲೆ ತೂಕದ ಬಾಂಬ್ಗಳಿಂದ ಅಟ್ಯಾಕ್ ಮಾಡ್ತಾ ಹೆಜ್ಬುಲ್ಲಾ ಉಗ್ರರಿಗೆ ಕೊಡುತ್ತಿರೋ ಟೆನ್ಷನ್ ಕಂಡು ಇಸ್ರೇಲ್ ಪ್ರಧಾನಿ ಮತ್ತೊಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ಇಸ್ರೇಲ್ ಮಿಲಿಟರಿ & ಹೆಜ್ಬುಲ್ಲಾ ನಡುವೆ ಘೋರ ಕದನದಲ್ಲಿ ಒಬ್ಬರಾದ ನಂತರ ಒಬ್ಬರು ಹೆಜ್ಬುಲ್ಲಾ ಮುಖ್ಯಸ್ಥರ ಹತ್ಯೆಯಾಗುತ್ತಿದ್ದು, ಘೋರ ಕಾಳಗಕ್ಕೆ ಮಧ್ಯ ಪ್ರಾಚ್ಯ ಈಗ ಸಾಕ್ಷಿಯಾಗುತ್ತಿದೆ. ಕಳೆದ ಒಂದು ವಾರದಿಂದ ಲೆಬನಾನ್ ಮತ್ತು ಇಸ್ರೇಲ್ ನಡುವೆ ಮಹಾಯುದ್ಧ ನೆನಪಿಸುವ ತಿಕ್ಕಾಟ ನಡೆಯುತ್ತಿದೆ. ಇಂತಹ ಸಮಯದಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್ ಹೆಜ್ಬುಲ್ಲಾ ಮುಖಂಡರಿಗೆ ಸಿಕ್ಕಿದ್ದು, ಇಸ್ರೇಲ್ ಸೇನೆ ಮತ್ತೊಮ್ಮೆ ತೊಡೆ ತಟ್ಟಿದೆ.
ಇದನ್ನೂ ಓದಿ: ಪಾರ್ವತಿ ಸಿದ್ದರಾಮಯ್ಯ ಮುಡಾ ಸೈಟ್ ವಾಪಸ್.. ಇದು CMಗೆ ವರವಾಗುತ್ತಾ, ಕಂಟಕವಾಗುತ್ತಾ?
ದಾಳಿಗೆ ತೊಡೆ ತಟ್ಟಿ ಆಹ್ವಾನ ನೀಡಿರುವ ಇಸ್ರೇಲ್ ಸೇನೆ
ಹೆಜ್ಬುಲ್ಲಾ ಸಂಘಟನೆ ವಿರುದ್ಧ ಈ ಬಾರಿ ಘೋರ ದಾಳಿಗೆ ತೊಡೆ ತಟ್ಟಿ ಆಹ್ವಾನ ನೀಡಿರುವ ಇಸ್ರೇಲ್ ಸೇನೆ, ಈ ಬಾರಿ ಏನೇ ಆದರೂ ಯುದ್ಧ ನಿಲ್ಲಿಸಬಾರದು ಎಂಬ ನಿರ್ಧಾರ ಕೈಗೊಂಡ ರೀತಿ ಕಾಣುತ್ತಿದೆ. ಯಾಕಂದ್ರೆ ಇಸ್ರೇಲ್ ದಾಳಿ ಮಾಡ್ತಿರೋ ರೀತಿ ನೋಡಿದ್ರೆ ಈಗಿನ ಸ್ಥಿತಿ ಮತ್ತೊಂದು ಮಹಾಯುದ್ಧಕ್ಕೆ ಪೂರಕ ವಾತಾವರಣ ಸೃಷ್ಟಿ ಮಾಡ್ತಿದೆ. ಮತ್ತೊಂದು ಕಡೆ ಹಲವು ವರ್ಷಗಳಿಂದ ತಮ್ಮ ವಿರುದ್ಧ ನಿಂತಿದ್ದ ಹೆಜ್ಬುಲ್ಲಾ ಸಂಘಟನೆ ಸಂಪೂರ್ಣ ಶರಣಾಗಿ ಸೋಲು ಒಪ್ಪಿಕೊಳ್ಳುವವರೆಗೂ ಯುದ್ಧ ನಿಲ್ಲದು ಎಂದು ಇಸ್ರೇಲ್ ಗುಡುಗಿದೆ. ಈ ಮೂಲಕ ದಕ್ಷಿಣ ಲೆಬನಾನ್‌ನಲ್ಲಿ ಮತ್ತಷ್ಟು ರಕ್ತ ಹರಿಯುವುದು ಪಕ್ಕಾ ಆಗಿದೆ.
ಇಸ್ರೇಲ್ಗೆ ದೇಶದ ಪರ ನಿಲ್ಲೋ ಬೈಡೆನ್, ಇಸ್ರೇಲ್ ನೆಲದ ಕಾರ್ಯಾಚರಣೆಯನ್ನ ವಿರೋಧಿಸಿದ್ದಾರೆ. ಲೆಬನಾನ್ ಕದನ ವಿರಾಮಕ್ಕೆ ಕರೆ ನೀಡಬೇಕು ಅಂತಾ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮುಡಾ ಪ್ರಕರಣ; ಪಾರ್ವತಿ ಸಿದ್ದರಾಮಯ್ಯ ಬರೆದ ಪತ್ರದಲ್ಲಿ ಏನಿದೆ.. ಪತ್ನಿಗೆ CM ಏನಂದ್ರು?
ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಮೋದಿ ಮಾತುಕತೆ
ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಪ್ರಧಾನಿ ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಈ ವೇಳೆ ತಮ್ಮ ಕಳವಳ ವ್ಯಕ್ತಪಡಿಸಿದ ಮೋದಿ, ಜಗತ್ತಿನಲ್ಲಿ ಭಯೋತ್ಪಾದನೆಗೆ ಯಾವುದೇ ಸ್ಥಾನವಿಲ್ಲ ಎಂದು ಒತ್ತಿ ಹೇಳಿ ಟ್ವೀಟ್ ಮಾಡಿದ್ದಾರೆ.
ಇಸ್ರೇಲ್ ರಕ್ಷಣಾ ಪಡೆಗಳು ಲೆಬನಾನ್‌ನಲ್ಲಿನ ಹೆಜ್ಬುಲ್ಲಾ ಸ್ಥಾನಗಳ ಮೇಲೆ ನಿರಂತರ ವಾಯುದಾಳಿಗಳು, ಟ್ಯಾಂಕ್‌ಗಳು ಮತ್ತು ಫಿರಂಗಿ ಗುಂಡಿನ ದಾಳಿಯ ಮೂಲಕ ಪ್ರತೀಕಾರ ತೀರಿಸಿಕೊಂಡಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ