newsfirstkannada.com

ಭಾರತೀಯ ಯೂಟ್ಯೂಬರ್ ಜೊತೆ ಎಂಗೇಜ್​ ಆದ ಇರಾನ್​ ಯುವತಿ; ಇಬ್ಬರ ಮಧ್ಯೆ ಲವ್​ ಆಗಿದ್ದೇಗೆ?

Share :

Published March 19, 2024 at 6:15am

Update March 19, 2024 at 6:50am

  ಮೂರು ವರ್ಷಗಳ ಹಿಂದೆ ಫೇಸ್​ಬುಕ್​ ಮೂಲಕ ಪರಿಚಯ

  ಮೊದಲು ನನ್ನ ಪೋಷಕರು ಈ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು!

  ಯ್ಯೂಟೂಬರ್​ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಯುವತಿ

ಲಕ್ನೋ: ಸೀಮಾ ಹೈದರ್​​ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಪಬ್​ಜೀ ಪ್ರಿಯಕರ ಸಚಿನ್ ಪ್ರೀತಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಬಂದಿದ್ದ ಸೀಮಾ ಹೈದರ್​​ ಸಾಕಷ್ಟು ಸುದ್ದಿಯಾಗಿದ್ದರು. ಇದೀಗ ಇರಾನ್ ದೇಶದ ಯುವತಿಯೊಬ್ಬಳು ಭಾರತೀಯ ಯೂಟ್ಯೂಬರ್‌ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಸಖತ್​ ಸುದ್ದಿಯಲ್ಲಿದ್ದಾಳೆ.

ಇದನ್ನು ಓದಿ: ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟ ಲಕ್ಷ್ಮೀ ನಿವಾಸ ಸೀರಿಯಲ್​​ ಟೀಮ್​​; ಏನದು..?

ಹೌದು, ಉತ್ತರ ಪ್ರದೇಶದ ಮೊರಾದಾಬಾದ್‌ನ ಯೂಟ್ಯೂಬರ್‌ ದಿವಾಕರ್ ಕುಮಾರ್ ಎಂಬಾತನ ಜೊತೆ ಇರಾನ್​ ದೇಶದ ಹಮೆದಾನ್‌ನ ಫೈಜಾ (24) ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಈ ಯುವತಿ 20 ದಿನಕ್ಕೆ ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದು ಯೂಟ್ಯೂಬರ್ ದಿವಾಕರ್​ನನ್ನು ಭೇಟಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಬಳಿಕ ಕಾನೂನು ಪ್ರಕ್ರಿಯೆ ಮುಗಿದ ನಂತರ ಈ ಇಬ್ಬರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. ಇನ್ನು ಈ ಮದುವೆಗೆ ಎರಡು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ.

ಈ ಬಗ್ಗೆ ಖಾಸಗಿ ಸುದ್ದಿಗಾರರೊಂದಿಗೆ ಮಾತಾಡಿದ ಯೂಟ್ಯೂಬರ್‌ ದಿವಾಕರ್ ಕುಮಾರ್​, ಮೂರು ವರ್ಷಗಳ ಹಿಂದೆ ಫೇಸ್​ಬುಕ್​ನಲ್ಲಿ ಫೈಜಾ ಪರಿಚಯ ಆದರು. ಮೊದ ಮೊದಲು ನಾನು ಟ್ರಾವೆಲ್ ವ್ಲಾಗ್‌ಗಳನ್ನು ಮಾಡುವಾಗ ನಾವು ಪರಸ್ಪರ ದೇಶಗಳ ಬಗ್ಗೆ ಚರ್ಚೆ ಮಾಡುತ್ತಿದ್ದೇವು. ನಂತರ ನಾವಿಬ್ಬರೂ ಪ್ರೀತಿಸಲು ಶುರು ಮಾಡಿದೆವು. ನಾನು ಜುಲೈ 2023ರಲ್ಲಿ ಫೈಜಾಳನ್ನು ಭೇಟಿಯಾಗಲು ಹಮೆಡಾನ್‌ಗೆ ಭೇಟಿ ನೀಡಿದ್ದೆ. ಆ ಸಮಯದಲ್ಲಿ ನಾವು ಇರಾನ್‌ನಲ್ಲಿ ವಿವಾಹದ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದೇವೆ.

ಈಗ ಭಾರತದ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳ್ಳಿಸುತ್ತಿದ್ದಾರೆ. ಆ ನಂತರ ನಾವು ಮದುವೆಯಾಗುತ್ತೇವೆ. ಅವರ ಕುಟುಂಬಕ್ಕೆ ಯಾವುದೇ ಧಾರ್ಮಿಕ ನಿರ್ಬಂಧಗಳಿಲ್ಲ. ಫೈಜಾ ತನ್ನ ಧರ್ಮದ  ಸಂಪ್ರದಾಯಗಳನ್ನು ಅನುಸರಿಸುತ್ತಾಳೆ. ಆದರೆ ಆರಂಭದಲ್ಲಿ ನನ್ನ ಪೋಷಕರು ಈ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸ್ವಲ್ಪ ಸಮಯದ ನಂತರ ಅವರು ಈ ಸಂಬಂಧವನ್ನು ಒಪ್ಪಿಕೊಂಡರು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತೀಯ ಯೂಟ್ಯೂಬರ್ ಜೊತೆ ಎಂಗೇಜ್​ ಆದ ಇರಾನ್​ ಯುವತಿ; ಇಬ್ಬರ ಮಧ್ಯೆ ಲವ್​ ಆಗಿದ್ದೇಗೆ?

https://newsfirstlive.com/wp-content/uploads/2024/03/YouTuber-2.jpg

Load More